Advertisement

ಸರ್ಕಾರ ನಂಬಿದರೆ ಜೀವ ಉಳಿಯದು

01:32 PM Apr 25, 2021 | Team Udayavani |

ಚನ್ನಪಟ್ಟಣ: ಈ ಸರ್ಕಾರವನ್ನು ನಂಬಿಕೊಂಡು ಕುಳಿತುಕೊಂಡರೆ ನಿಮ್ಮ ಜೀವ ಉಳಿಯದು, ಕೋವಿಡ್‌ ನಿಯಮಗಳನ್ನು ಪಾಲಿಸುವ ಜತೆಗೆ, ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

Advertisement

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸರ್ಕಾರ ಯಾವುದಕ್ಕೂ ಸಜ್ಜಾಗಿಲ್ಲ. ಕೋವಿಡ್ ಎರಡನೇ ಅಲೆಯ ಭೀತಿ ಇದ್ದರೂ ಉದಾಸೀನ ಮಾಡಿದೆ.ಕೋವಿಡ್‌ ಪ್ರಕರಣಗಳು ಹೆಚ್ಚಾದ ನಂತರನಿಯಂತ್ರಣಕ್ಕಾಗಿ ಪರಡಾಡುತ್ತಿದೆ. ಮೊದಲೇಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಅನಾಹುತಗಳು ಆಗುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವ್ಯಾಕ್ಸಿನ್‌ ಬಂತೆಂದು ಮೈಮರೆತರು: ವ್ಯಾಕ್ಸಿನ್‌ ಬಂತೆಂದು ಸರ್ಕಾರ ಮೈಮರೆಯಿತು. ಕೋವಿಡ್ ಕಟ್ಟು ಪಾಡುಗಳನ್ನು ಸಡಿಲಿಸಿತು. ಸರ್ಕಾರ ಮೈಮರೆತಿದ್ದರಿಂದಲೇ ಪ್ರಕರಣಗಳು ಹೆಚ್ಚಾಗುತ್ತಿದ್ದು,ಈಗ ಆಗುತ್ತಿರುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಿದೆ ಎಂದು ಕಿಡಿಕಾರಿದರು.

ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕಡೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಉತ್ತಮ ಮತ್ತು ಸ್ವತ್ಛ ಆಡಳಿತದ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್‌ಅನ್ನು ಬೆಂಬಲಿಸಲು ಜನ ಉತ್ಸುಕರಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ನಂತರನಡೆಯುತ್ತಿರುವ ಮೊದಲ ನಗರಸಭೆ ಚುನಾವಣೆ ಇದಾಗಿದ್ದು, ನಗರದ ಮತದಾರರು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕಳೆದ ಬಾರಿ ಊಟ ನೀಡಿದವರಿಗೆ ದುಡ್ಡು ನೀಡಿಲ್ಲ:

Advertisement

ಜಿಲ್ಲೆಯಲ್ಲಿ ಕೋವಿಡ್‌ ಸೋಕಿಂತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ.ಜಿಲ್ಲೆಯ ವಿವಿಧ ಕೋವಿಡ್‌ ಸೆಂಟರ್‌ಗಳಲ್ಲಿ 800ರೋಗಿಗಳು ದಾಖಲಾಗಿದ್ದಾರೆ. ಐಸಿಯು, ಆಕ್ಸಿಜನ್‌ವ್ಯವಸ್ಥೆ ಸರಿಯಾಗಿಲ್ಲ. ಜನ ರಾಜರಾಜೇಶ್ವರಿ ಆಸ್ಪತ್ರೆ ಬೇಡವೆನ್ನುತ್ತಿದ್ದಾರೆ.

ಆಸ್ಪತ್ರೆಯಲ್ಲಿರುವವರಿಂದ ಊಟದ ಕುರಿತು ದೂರುಗಳು ಬರುತ್ತಿವೆ. ಹೋದ ಸಾರಿ ಕೋವಿಡ್‌ಸೆಂಟರ್‌ಗಳಿಗೆ ಊಟ ಸಪ್ಲೆç ಮಾಡಿದವರಿಗೆ ಇನ್ನೂ ದುಡ್ಡು ಕೊಟ್ಟಿಲ್ಲ. ಒಟ್ಟಿನಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌.ರವಿ, ಕೆಪಿಸಿಸಿ ಸದಸ್ಯ ಟಿ.ಕೆ.ಯೋಗೀಶ್‌ ಜಿಪಂಸದಸ್ಯ ಗಂಗಾಧರ್‌, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಪ್ರಮೋದ್‌, ನಗರ ಘಟಕದ ಅಧ್ಯಕ್ಷ ಸುನೀಲ್‌, ಮಾಜಿ ಅಧ್ಯಕ್ಷ ಶಿವಮಾಧು, ಕುಮಾರ್‌, ನಗರಸಭೆ ಮಾಜಿ ಸದಸ್ಯ ಮುದ್ದುಕೃಷ್ಣ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next