Advertisement
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಯೋತ್ಪಾದನೆ ಪರವಾಗಿಲ್ಲ. ಭಯೋತ್ಪಾದನೆಯಿಂದ ಕಾಂಗ್ರೆಸ್ ನಾಯಕರುಗಳನ್ನು ಕಳೆದುಕೊಂಡಿದೆ. ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ದೇಶದ ಐಕ್ಯತೆ, ಸಮಗ್ರತೆ ವಿಷಯಕ್ಕೆ ನಾವು ಸದಾ ಬದ್ಧ. ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.
Related Articles
Advertisement
ಕುಕ್ಕರ್ ಬಾಂಬ್ ವಿಷಯದಲ್ಲಿ ನಾನು ಹೇಳುವ ವಿಚಾರ ಚರ್ಚೆಯಾಗಲಿ. ಅದಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಅದೇ ರೀತಿ ಬಿಜೆಪಿಯ ಭ್ರಷ್ಟಾಚಾರಗಳೂ ಚರ್ಚೆಯಾಗಬೇಕು. ಕೆಲವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಅವರ ಮಾರುಕಟ್ಟೆಯೇ ನಿಂತು ಹೋಗುತ್ತದೆ. ಅದಕ್ಕಾಗಿ ಏನೇನೋ ಹೇಳುತ್ತಾರೆ. ನನ್ನ ಒಟ್ಟು ಅಭಿಪ್ರಾಯ ಬಿಜೆಪಿ ಆಡಳಿತದಲ್ಲಿ ರಾಜ್ಯಕ್ಕಾಗಿರುವ ದ್ರೋಹದ ಬಗ್ಗೆ ಮೊದಲು ಚರ್ಚೆಯಾಗಲಿ ಎಂದರು.
ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಅದರ ಬಗ್ಗೆ ನಿನ್ನೆ ಅವರು ಮಾತನಾಡುವುದರಲ್ಲೇ ನೋವು, ದುಗುಡಗಳು ವ್ಯಕ್ತವಾಗಿವೆ. ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದಂತೆ ಚುನಾವಣೆವರೆಗೂ ಸರ್ಕಾರವನ್ನು ತಳ್ಳಿಕೊಂಡು ಹೋಗಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ನಿಂದ 10 ಮಂದಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ತಕ್ಷಣವೇ ಸೇರಿಸಿಕೊಳ್ಳಿ. ವಿಳಂಬ ಏಕೆ ಎಂದು ಸವಾಲು ಹಾಕಿದರು.
ನಿನ್ನೆ ಬೆಂಗಳೂರಿನಲ್ಲಿ ನಡೆದ ಒಕ್ಕಲಿಗ ಸಮುದಾಯದ ನಾಯಕರ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಕುರಿತಂತೆ ಚರ್ಚೆಯಾಗಿದೆ. ಈ ಮೊದಲು ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈಗ ದೊರೆಯುತ್ತಿರುವ ಶೇ.2ರಷ್ಟು ಮೀಸಲಾತಿ ಜನಸಂಖ್ಯೆಗನುಗುಣವಾಗಿಲ್ಲ. ಅದನ್ನು ಹೆಚ್ಚಿಸಬೇಕು ಎಂಬುದು ಒಮ್ಮತದ ಅಭಿಪ್ರಾಯ. ಈ ಬಗ್ಗೆ ತಜ್ಞರ ತಂಡ ರಚಿಸುವಂತೆ ಸಲಹೆಗಳು ಕೇಳಿ ಬಂದಿವೆ. ಜತೆಗೆ ಜನ ಕಾಂಗ್ರೆಸ್‍ಗೆ ಏಕೆ ಮತ ಹಾಕಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.