Advertisement
ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದರೋ ನನಗೆ ಗೊತ್ತಿಲ್ಲ. ಇದು ಗಂಭೀರ ಅಪರಾಧವಾಗಿದೆ. ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
Related Articles
Advertisement
ಈ ಸಂಸ್ಥೆಗಳ ನಿರ್ದೇಶಕ ರವಿಕುಮಾರ್ ಬಿಟ್ಟು ಬಿಎಲ್ಒ ಆಗಿ ಸಮೀಕ್ಷೆ ಮಾಡಿದ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇದನ್ನೇ ನಾವು ಹೇಳುತ್ತಿರುವುದು. ಆ ಗುರುತಿನ ಚೀಟಿ ಮಾಡಿದವರು ಯಾರು? ಈ ಗುರುತಿನ ಚೀಟಿ ವಿತರಣೆ ಮಾಡಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧಿಕಾರಗಳ ವಿರುದ್ಧವೂ ಎಫ್ಐಆರ್ ಆಗಬೇಕು. ಸರ್ಕಾರಿ ಹುದ್ದೆಯನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿ ಹಾಗೂ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವದ ಅವಧಿಯಲ್ಲಿ ನಾನು, ಅಥವಾ ಕುಮಾರಸ್ವಾಮಿ ಅಥವಾ ಬೆಂಗಳೂರಿನ ಯಾವುದೇ ಸಚಿವರು, ಶಾಸಕರು ಈ ಕೆಲಸ ಮಾಡಿದ್ದರೆ ನಮ್ಮ ವಿರುದ್ಧವೂ ಕ್ರಮ ಕೈಗೊಳ್ಳಲಿ. ಈ ವಿಚಾರದಿಂದಲೂ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಮುಖ್ಯಮಂತ್ರಿಗಳು ಇದರ ಗಂಭೀರತೆ ಅರಿಯಬೇಕು. ಮತದಾನದ ಹಕ್ಕು ಮೂಲಭೂತ ಹಕ್ಕಾಗಿದ್ದು, ಅದನ್ನು ಕಸಿಯುವ ಅಕ್ರಮ ಮಾಡಲಾಗಿದೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಇಂತಹ ಅಕ್ರಮಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾರರಿಗೆ ಮಾಡಿರುವ ಅಪಮಾನ. ಈ ಸಮಯದಲ್ಲಿ ನಾನು ಜೆಡಿಎಸ್, ಕಮ್ಯುನಿಸ್ಟ್, ರೈತ ಸಂಘ ಹಾಗೂ ನಮ್ಮ ಪಕ್ಷದವರಿಗೆ ನಿಮ್ಮ ಮೂಲಕ, ನೀವೆಲ್ಲರೂ ನಿಮ್ಮ ಬೂತ್ ಗಳಿಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. ಅನೇಕರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಧಿಕಾರಿಗಳು, ಬಿಎಲ್ ಒಗಳ ಮೂಲಕ ಈ ರೀತಿ ಅಕ್ರಮ ಮಾಡಲಾಗುತ್ತಿದೆ ಎಂದು ಸಂದೇಶ ನೀಡಲು ಬಯಸುತ್ತೇನೆ. ನಮ್ಮ ಪಕ್ಷದವರಿಗೆ ಪ್ರತಿ ಬೂತ್ ನಲ್ಲಿ ಏಜೆಂಟರನ್ನು ನೇಮಿಸಲು ಹಕ್ಕು ನೀಡಲಾಗಿದೆ. ನೀವು ಬಿಎಲ್ಎಗಳ ಮೂಲಕ ಮಾಹಿತಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ ಎಂದು ಹೇಳಬಯಸುತ್ತೇನೆ. 26 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, 14 ಲಕ್ಷ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಅವರೇ ಹೇಳಿದ್ದಾರೆ. ಯಾರ ಹೆಸರು ಕೈ ಬಿಟ್ಟು, ಯಾರ ಹೆಸರು ಸೇರಿಸಿದ್ದಾರೆ? ಪ್ರತಿ ಕ್ಷೇತ್ರದಲ್ಲೂ ಹೀಗೆ ಮಾಡಲಾಗಿದೆ. ಹೀಗಾಗಿ ಕಾರ್ಯಕರ್ತರು ಬಹಳ ಜಾಗರೂಕರಾಗಿ ಈ ಬಗ್ಗೆ ಗಮನ ಹರಿಸಬೇಕು. ಪ್ರತಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಇರುವ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು, ಅಕ್ರಮವಾಗಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ’ ಎಂದು ತಿಳಿಸಿದರು.
ನಿಮ್ಮ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡುವಾಗ ಈ ಸಂಸ್ಥೆಗಳ ಹಿನ್ನಲೆ ಪರಿಶೀಲನೆ ಮಾಡಲಿಲ್ಲವೇ ಎಂದು ಕೇಳಿದಾಗ, ‘ಇಂತಹ ತಪ್ಪನ್ನು ಯಾರೇ ಮಾಡಿದರೂ ತಪ್ಪೇ. ಅದು ಶಿವಕುಮಾರ್ ಆಗಲಿ, ಬೇರೆಯವರೇ ಆಗಲಿ. ಈ ವಿಚಾರವಾಗಿ ತನಿಖೆ ಮಾಡಿ. ಒಬ್ಬರು ತಪ್ಪು ಮಾಡಿದರು ಎಂದು ನೀನು ಅದೇ ತಪ್ಪು ಮಾಡುತ್ತೇನೆ ಎಂದು ಹೇಳುವುದು ಎಷ್ಟು ಸರಿ? ಮತದಾನದ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ನಿಮಗೆ ಅಧಿಕಾರ ಇದೆ ಎಂದು ಆ ಹಕ್ಕು ಕಸಿಯುವುದು ಎಷ್ಟು ಸರಿ?’ ಎಂದು ಕೇಳಿದರು.
ಅನಧಿಕೃತವಾಗಿ ಮಾಹಿತಿ ಕಲೆಹಾಕುವುದು ಅಪರಾಧವಾಗಿರುವಾಗ ಮಾತದಾರರ ಮಾಹಿತಿ ಕಲೆ ಹಾಕಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ‘ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕಾಗಿ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕೆ ಅನುಮತಿ ನೀಡಿದ್ದೇ ಆಗಿದ್ದರೆ, ಕೋವಿಡ್ ಸಮಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಮನೆ, ಮನೆಗೆ ಕಳುಹಿಸಿದ್ದು ಏಕೆ? ಅದು ಸೋಷಿಯಲ್ ಇಂಪಾಕ್ಟ್ ಅಲ್ಲವೇ’ ಎಂದು ಕೇಳಿದರು.
ಜಾತಿ ಗಣತಿ ಮಾಡಿದ್ದೂ ತಪ್ಪೇ ಎಂಬ ಪ್ರಶ್ನೆಗೆ, ‘ತಪ್ಪಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಮತದಾನದ ಹಕ್ಕು ನಮ್ಮ ಮೂಲಭೂತ ಹಕ್ಕು. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರವಾಗಿದ್ದರೆ ಅದನ್ನೇ ತನಿಖೆ ಮಾಡಿ ಎಂದು ಹೇಳುತ್ತಿದ್ದೇವೆ. ಇಂತಹ ವಿಚಾರ ತನಿಖೆ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲ ವಿಚಾರದಲ್ಲೂ ತನಿಖೆ ಮಾಡಲಿ. ನಾನು ಎಲ್ಲಿ ಹೋದರೂ ಶಾಸಕರ ಗುರುತಿನ ಚೀಟಿ ಕೇಳುವುದಿಲ್ಲ. ಕೇಳುವುದು ಆಧಾರ್ ಅಥವಾ ಮತದಾರರ ಗುರುತಿನ ಚೀಟಿ ಮಾತ್ರ. ಇಂತಹ ಹಕ್ಕು ಕಸಿಯುವುದು ಸರಿಯಲ್ಲ’ ಎಂದು ತಿಳಿಸಿದರು.
ಕಾಂಗ್ರೆಸಿಗರಿಗೆ ಕೆಲಸ ಇಲ್ಲದೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಾಧ್ಯಮವೊಂದು ಈ ವಿಚಾರವಾಗಿ ವರದಿ ಪ್ರಕಟಿಸಿದ ತಕ್ಷಣವೇ ಬಿಬಿಎಂಪಿ ಆಯುಕ್ತರು ಈ ಅನುಮತಿ ರದ್ದು ಮಾಡುತ್ತಾರೆ. ಆದರೆ ಬಿಬಿಎಂಪಿಯಿಂದ ಈ ಸಂಸ್ಥೆ ವಿರುದ್ಧ ಯಾಕೆ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ? ಸಾವಿರಾರು ಜನಕ್ಕೆ ಬಿಎಲ್ಒ ಎಂದು ನಕಲಿ ಗುರುತಿನ ಚೀಟಿ ನೀಡಿದ ರಿಟರ್ನಿಂಗ್ ಆಫೀಸರ್ ಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಎಲ್ಲರನ್ನು ಬಂಧಿಸಬೇಕು. ಯಾಕೆ ಈ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಇವಿಎಂ ಅಕ್ರಮಕ್ಕೂ ಇದಕ್ಕೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ, ‘ಈ ಸಂಸ್ಥೆಯವರೇ ನಾವು ಇವಿಎಂ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅವರು ಇದಕ್ಕಾಗಿ ಪರವಾನಿಗೆ ತೆಗೆದುಕೊಂಡಿದ್ದಾರಾ?’ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಅವರು ತಡ ಮಾಡುತ್ತಿರುವುದೇಕೆ? ಮಾನನಷ್ಟ ಮೊಕದ್ದಮೆ ಹಾಕಿಲಿ. ಈ ವಿಚಾರಗಳು ಚರ್ಚೆ ಆಗಲಿ. ಅವರಿಗೆ ಅಪಮಾನವಾಗಿದ್ದರೆ ಹಾಕಲಿ. ನಮ್ಮ ಬಳಿಯೂ ಈ ಸಂಸ್ಥೆಯ ಎಲ್ಲ ಅಖ್ರಮದ ದಾಖಲೆಗಳಿವೆ. ಕಳೆದ ಬಾರಿ ನಮ್ಮ ಪಕ್ಷದಲ್ಲಿ ಇದ್ದ ಮುನಿರತ್ನ ಅವರೆ ನಕಲಿ ಮತದಾರರ ಗುರುತಿನ ಚೀಟಿ ಮಾಡಿದ್ದರು. ಈ ವಿಚಾರವಾಗಿ ಮುನಿರಾಜು ಅವರು ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೂ ಅದನ್ನು ಹಿಂಪಡೆದಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಈ ವಿಚಾರದಲ್ಲಿ ಯಾಕೆ ಪ್ರಕರಣ ದಾಖಲಿಸಿಲ್ಲ. ಯಾರನ್ನೂ ಬಂಧಿಸಿಲ್ಲ ಯಾಕೆ? ರವಿಕುಮಾರ್ ಯಾವ ನಾಯಕರ ಜತೆ ಸಂಪರ್ಕದಲ್ಲಿದ್ದರು ಎಂದು ಪತ್ತೆಹಚ್ಚಬಹುದಲ್ಲವೇ?’ ಎಂದರು.
ಇವಿಎಂ ಹ್ಯಾಕ್ ಮಾಡುವವರು ಇದನ್ನು ಮಾಡದೇ ಇರುತ್ತಾರಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಅಥವಾ ಬಿಡಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ, ಜವಾಬ್ದಾರಿಯುತ ಮತದಾರನಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಂದಿನ 24 ಗಂಟೆಗಳ ಒಳಗಾಗಿ ಅಂದರೆ ನಾಳೆ ಮಧ್ಯಾಹ್ನ 12 ಗಂಟೆ ಒಳಗೆ ಈ ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಮಾಡಿದವರು, ಮತದಾರರ ಮಾಹಿತಿ ಕಲೆಹಾಕಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗವೇ ಇದರಲ್ಲಿ ಭಾಗಿಯಗಿದೆ. ಈ ವಿಚಾರವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಚುನಾವಣಾ ಆಯೋಗದವರೆಗೂ ತೆಗೆದುಕೊಂಡು ಹೋಗುತ್ತೇವೆ. ರಾಜ್ಯ ಚುನಾವಣಾ ಆಯೋಗ ಈ ವಿಚಾರದ ತನಿಖೆಯನ್ನು ಡಿವಿಸಿಗೆ ನೀಡಿದ್ದಾರೆ. ಈ ಡಿವಿಸಿಯನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ನಾವು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿರುವಾಗ ಅವರ ಕೈಕೆಳಗಿನ ಅದಿಕಾರಿಗಳು ತನಿಖೆ ಮಾಡಲು ಸಾಧ್ಯವೇ? ಈ ಪ್ರಕರಣ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ. ಆಕ್ಸಿಜನ್ ದುರಂತ ಪ್ರಕರಣದಲ್ಲಿ ನ್ಯಾಯಾಲಯ ಹೇಗೆ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಮಾನ ಕಾಪಾಡಿತೋ ಅದೇ ರೀತಿ ಈ ವಿಚಾರದಲ್ಲೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲ ಮತದಾರರಿಗೆ ತಮ್ಮ ಹಕ್ಕು ಸಿಗುವಂತೆ ಮಾಡಬೇಕು. ಇಂತಹ ನೀಚ ಹಾಗೂ ಭ್ರಷ್ಟ ಸರ್ಕಾರ ಹಾಗೂ ಅಧಿಕಾರಿಗಳ ಬಂಧವಾಗಬೇಕು’’ ಎಂದು ಆಗ್ರಹಿಸಿದರು.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ದೊಡ್ಡ ಪಟ್ಟಿ ಇದೆ. ಇದನ್ನು ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಪಕ್ಷವನ್ನು ಸೇರುವ ದಿನ ಅವರ ಹೆಸರು ನಿಮಗೆ ತಿಳಿಯುತ್ತದೆ’ ಎಂದು ಸ್ಪಷ್ಟಪಡಿಸಿದರು.