Advertisement

‘ಅವರಿಗೆ ಉತ್ತರ ಕೊಡೋಕೆ ಆಗೋಲ್ಲ’ : ರಮೇಶ್ ಹೇಳಿಕೆಗೆ ಡಿಕೆಶಿ ಪ್ರತ್ಯುತ್ತರ

07:04 PM Mar 27, 2021 | Team Udayavani |

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಮ್ಮ ಮೇಲೆ ನೇರ ಆರೋಪ ಮಾಡಿರುವ ರಮೇಶ್ ಜಾರಕಿಹೊಳಿ ಅವರಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

Advertisement

ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅವರು ಫಸ್ಟ್ರೆಷನ್‍ನಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬಹುದು. ಅವರು ಏನು ಬೇಕಾದ್ದನ್ನು ಮಾತಾಡ್ತಾರೆ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋಕೆ ಆಗೋಲ್ಲ. ಅವರಿಗೆ ಉತ್ತರ ಕೋಡೋಕೆ ಆಗೋಲ್ಲ. ಕಾನೂನು ಇದೆ, ಅಧಿಕಾರಿ ಇದೆ, ತನಿಖೆ ಮಾಡಲಿ, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

ರಮೇಶ್ ದಿನಕ್ಕೆ ಒಂದು ರೀತಿ ಮಾತಾಡ್ತಾರೆ. ಅವರಿಗೆ ಉತ್ತರ ಕೊಡೋಕೆ ಆಗೋಲ್ಲ. ಅದು ವ್ಯಯಕ್ತಿಕ ಸಮಸ್ಯೆ, ಅವರೇ ಬಗೆಹರಿಸಿಕೊಳ್ಳಬೇಕು. ಕಾನೂನು ಪ್ರಕಾರ ಅವರು ಏನು ಬೇಕಾದ್ದನ್ನು ಮಾಡಲಿ. ಅವರದೇ ಸರ್ಕಾರ ಇದೆ, ತನಿಖೆ ಮಾಡಿಸಿ  ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲಿ ಎಂದರು.

ತಮ್ಮ ಮಗಳನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ಯುವತಿ ಪೋಷಕರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ, ನನಗೆ ಅದು ಬೇಕಾಗಿಲ್ಲ. ಇಂದು ಬೆಳಿಗ್ಗೆ ಹೇಳಿದಂತೆ ಆ ಯುವತಿಯನ್ನು ನಾನು ಭೇಟಿಯಾಗಿಲ್ಲ ಎಂದರು.

ಇನ್ನು ಇಂದು ಸಂಜೆ ಶಾಸಕ ರಮೇಶ್ ಜಾರಕಿಹೊಳಿಯವರು ಡಿಕೆಶಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಡಿಕೆಶಿ ವಿರುದ್ಧ ಗುಡುಗಿದ ರಮೇಶ್, ಇಂತಹ ಹೊಲಸು ಕೆಲಸ ಮಾಡುವ ಡಿಕೆಶಿ ರಾಜಕೀಯಕ್ಕೆ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next