Advertisement

DK Shivakumar ಅವಳಿ ಹುದ್ದೆ ಮೇಲೆ ಜಿ. ಪರಮೇಶ್ವರ್‌ ಬಾಂಬ್‌!

01:46 AM Jul 01, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಯಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರನ್ನು ಅಡಕತ್ತರಿಗೆ ಸಿಲುಕಿಸಲು ಸಿಎಂ ಸಿದ್ದರಾಮಯ್ಯ ಬಣ ಮುಂದಾಗಿರುವ ಸ್ಪಷ್ಟ ನಿದರ್ಶನಗಳು ಗೋಚರಿಸುತ್ತಿವೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಸಿಎಂ ಬದಲಾವಣೆ ಚರ್ಚೆಗಳ ಬೆನ್ನಲ್ಲೇ ಈಗ “ಒಬ್ಬ ವ್ಯಕ್ತಿ-ಒಂದು ಹುದ್ದೆ’ ಚರ್ಚೆ ಕಾಂಗ್ರೆಸ್‌ ನಲ್ಲಿ ಮುನ್ನೆಲೆಗೆ ಬಂದಿದೆ.

Advertisement

ಇದರ ಆಧಾರದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ನೀಡುವಂತೆ ಆಗ್ರಹ ಕೇಳಿಬರುತ್ತಿದೆ. ಗೃಹ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್‌ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. “ಎರಡು ಹುದ್ದೆ ನಿಭಾಯಿಸುವುದು ಕಷ್ಟ’ ಎಂದು ಪರಮೇಶ್ವರ್‌ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯನ್ನು ಪುಷ್ಟೀಕರಿಸಿದ್ದಾರೆ.

ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತ ನಾಡಿದ ಡಾಣ ಪರಮೇಶ್ವರ್‌, “ಹೈಕಮಾಂಡ್‌ ನಾಯಕರಿಗೆ ಇಲ್ಲಿನ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ಅನಿಸಿದರೆ ಬದಲಾಯಿಸುತ್ತಾರೆ. ವಾಸ್ತವವಾಗಿ 2 ಹುದ್ದೆ ಇದ್ದರೆ ನಿಭಾಯಿಸುವುದು ಕಷ್ಟ. ನನಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಗೃಹ ಸಚಿವ ಸ್ಥಾನ ಬೇಕಾ ಎಂದು ಅಭಿಪ್ರಾಯ ಕೇಳಿದ್ದರು. ಈಗ ಶಿವಕುಮಾರ್‌ಗೆ 2 ದೊಡ್ಡ ಖಾತೆಗಳು ಇವೆ. ಜತೆಗೆ ಕೆಪಿಸಿಸಿ ಜವಾಬ್ದಾರಿ ನಿಭಾಯಿಸುವುದು ಕಷ್ಟ. ಹಾಗಾಗಿ ಇಂತಹ ಬೆಳವಣಿಗೆಗಳು ಆಗುತ್ತಿವೆ. ಬಿಜೆಪಿಯಲ್ಲಿ ನಡ್ಡಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಈಗ ಸಚಿವರಾಗಿ¨ªಾರೆ. ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವ ಚರ್ಚೆ ಆಗುತ್ತಿದೆ. ಇದರಲ್ಲಿ ವಿಶೇಷ ಏನಿಲ್ಲ’ ಎಂದಿದ್ದಾರೆ.

ಅಪ್ರಸ್ತುತ ಎನ್ನಲಾಗದು: ಸಿಎಂ ಮತ್ತು ಡಿಸಿಎಂ ಚರ್ಚೆ ಅಪ್ರ ಸ್ತುತವೇ ಎಂಬ ಪ್ರಶ್ನೆಗೆ, “ಪ್ರಸ್ತುತ ಮತ್ತು ಅಪ್ರಸ್ತುತ ಎನ್ನಲಾಗದು. ಸಿಎಂ ಆಯ್ಕೆ ಶಾಸಕರಿಗೆ ಬಿಟ್ಟದ್ದು. ಅನಂತರ ಹೈಕಮಾಂಡ್‌ ಶಾಸಕರ ಅಭಿಪ್ರಾಯವನ್ನು ಪರಿಗಣಿಸುತ್ತದೆ. ಅದನ್ನು ಬಿಟ್ಟು ನಾಲ್ಕು ಜನ ಮಾತಾಡಿದರೆ ಆಗುತ್ತದೆಯೇ? ಬೇರೆ ಬೇರೆ ಸಮುದಾಯದವರು ಸ್ಥಾನ ಕೇಳುವುದು ತಪ್ಪಲ್ಲ. ಆದರೆ ನಮ್ಮ ಪರ ನಿಲ್ಲುವ ಸಮುದಾಯ ಯಾವುದು ಎಂದು ನೋಡಿ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಯಾರಿಗೆ, ಯಾವ ಸಮುದಾಯಕ್ಕೆ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಆದರೆ ಬದಲಾವಣೆ ಚರ್ಚೆ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಜತೆ ರಾಜಕೀಯ ಚರ್ಚೆ: ರಾಜ್ಯ ನಾಯಕರೆಲ್ಲರೂ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದೆವು. ರಾಜಕೀಯವಾಗಿ ಚರ್ಚಿಸಲಾಯಿತು. ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಪ್ರಸ್ತಾವ ಮಾಡಲಿಲ್ಲ. ಹೆಚ್ಚುವರಿ ಡಿಸಿಎಂ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಾರೆ. ಆದರೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ಸ್ವಾಮೀಜಿಗೆ ಪರಂ ಕಿವಿಮಾತು: “ಸ್ವಾಮೀಜಿಗಳ ಹೇಳಿಕೆ ತಪ್ಪು ಅನ್ನಲಾಗದು. ಅವರಿಗೂ ಕಾಳಜಿ ಇರಬಹುದು, ಅಭಿಪ್ರಾಯ ಹೇಳಿ¨ªಾರೆ. ಆದರೆ ವೇದಿಕೆ ಮತ್ತು ಸಂದರ್ಭ ನೋಡಿ ಮಾತನಾಡುವುದು ಒಳ್ಳೆಯದು’ ಎಂದು ಡಾಣ ಪರಮೇಶ್ವರ್‌ ಸೂಚ್ಯವಾಗಿ ಹೇಳಿದರು.

ಹರಿಪ್ರಸಾದ್‌ ಮಾತು ಪುನರುಚ್ಚಾರ!
ಕೆಪಿಸಿಸಿ ಅಧ್ಯಕ್ಷಗಿರಿ ಬಗ್ಗೆ ಸಚಿವ ಕೆ.ಎನ್‌. ರಾಜಣ್ಣ ಮುನ್ನುಡಿ ಬರೆದರು. “ನಾನೇನೂ ಈ ಹುದ್ದೆಯ ಆಕಾಂಕ್ಷಿ ಅಲ್ಲ. ಆದರೆ ಅವಕಾಶ ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂಬುದಾಗಿ ಹೇಳಿದ್ದರು. ಅನಂತರ ಎರಡೂ ಬಣಗಳ ಹಲವು ನಾಯಕರಿಂದ ಪರ ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಒಂದು ದಿನದ ಹಿಂದಷ್ಟೇ ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್‌, “ಒಬ್ಬ ವ್ಯಕ್ತಿ   ಒಂದು ಹುದ್ದೆ’ ಎಂಬುದು ಪಕ್ಷದ ನಿರ್ಧಾರ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಈಗ ಗೃಹ ಸಚಿವ ಡಾಣ ಪರಮೇಶ್ವರ್‌ ಆ ಮಾತಿಗೆ ಧ್ವನಿಗೂಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next