Advertisement

D.K. Shivakumar ನಾಟಕ ಚನ್ನಪಟ್ಟಣದಲ್ಲಿ ನಡೆಯದು: ಆರ್‌. ಅಶೋಕ್‌

08:37 PM Jun 25, 2024 | Team Udayavani |

ಬೆಳಗಾವಿ: ಡಿ.ಕೆ. ಶಿವಕುಮಾರ್‌ ನಾಟಕದ ಮೇಷ್ಟ್ರು. ದಿನಕ್ಕೊಂದು ಬಣ್ಣ ಬದಲಿಸುತ್ತಾರೆ. ಆದರೆ ಅವರ ನಾಟಕ ಚನ್ನಪಟ್ಟಣದಲ್ಲಿ ನಡೆಯುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಡಿ.ಕೆ. ಶಿವಕುಮಾರ್‌ 20 ವರ್ಷಗಳಿಂದ ಚನ್ನಪಟ್ಟಣದತ್ತ ಮುಖ ಮಾಡಿಲ್ಲ. ಈಗ ವಿಧಾನಸಭೆ ಉಪಚುನಾವಣೆಗಾಗಿ ಹೋಗುತ್ತಿದ್ದಾರೆ. ಕನಕಪುರದಲ್ಲಿ ಸಹೋದರ ಡಿ.ಕೆ. ಸುರೇಶ್‌ ಹಾಗೂ ಬೆಳಗಾವಿಯಲ್ಲಿ ಮೃಣಾಲ್‌ ಹೆಬ್ಟಾಳಕರ್‌ನನ್ನು ಗೆಲ್ಲಿಸಲು ಆಗಲಿಲ್ಲ. ಡಿಕೆಶಿ ನಾಟಕಗಳನ್ನು ಚನ್ನಪಟ್ಟಣದ ಜನ ನೋಡಿದ್ದು, ತಕ್ಕ ಪಾಠ ಕಲಿಸಲಿದ್ದಾರೆ.

ಸಿದ್ದರಾಮಯ್ಯ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಚರ್ಚೆ ಆರಂಭವಾಗುವಂತೆ ಮಾಡಿದ್ದಾರೆ. ಈ ಹಿಂದೆ ಡಾ| ಪರಮೇಶ್ವರ್‌ ಅವರನ್ನು ಸೋಲಿಸಿದ್ದ ಸಿದ್ದರಾಮಯ್ಯ ಈಗ ಡಿ.ಕೆ. ಸುರೇಶ್‌ ಅವರನ್ನೂ ಸೋಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಒಳಜಗಳ ಇದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next