Advertisement
ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ಐದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಹೆಚ್ಚುವರಿ ಡಿಸಿಎಂ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ಬಲ ಕುಗ್ಗಿದಂತೆ ಆಗುವುದಿಲ್ಲವೇ ಎಂದು ಕೇಳಿದ್ದಕ್ಕೆ, “ಡಿ.ಕೆ. ಶಿವಕುಮಾರ್ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದರು.
Related Articles
Advertisement
ಹೈಕಮಾಂಡ್ನಿಂದ ಶೀಘ್ರವೇ ತರಾಟೆ ?“ಇದೊಂದು ಅನಗತ್ಯ ಗೊಂದಲ ಸೃಷ್ಟಿ ಅಷ್ಟೇ. ಇದೇ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಡಿಸಿಎಂ ಹುದ್ದೆಯೇ ಇರಲಿಲ್ಲ. ಈಗ ಷರತ್ತಿನೊಂದಿಗೆ ಒಂದು ಹುದ್ದೆ ಸೃಷ್ಟಿ ಮಾಡಲಾಗಿದೆ. ಸಂಸತ್ತಿನ ಅಧಿವೇಶನ ಮುಗಿಯುತ್ತಿದ್ದಂತೆ ಹೈಕಮಾಂಡ್ ತರಾಟೆಗೆ ತೆಗೆದು ಕೊಳ್ಳಲಿದ್ದು, ಆಗ ಇದೆಲ್ಲದಕ್ಕೂ ತೆರೆ
ಬೀಳಲಿದೆ’ ಎಂದು ಪಕ್ಷದ ಮೂಲ ಗಳು ಸ್ಪಷ್ಟಪಡಿಸಿವೆ. ಕಾಂಗ್ರೆಸ್ ಸಚಿವರು ಮೂರು ಮಂದಿ ಡಿಸಿಎಂ ಬೇಕು ಎಂದು ಕೇಳುತ್ತಿರುವ ವಿಷಯದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಚರ್ಚೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ.
-ಡಿ.ಕೆ. ಶಿವಕುಮಾರ್, ಡಿಸಿಎಂ