Advertisement

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

09:48 PM Jul 02, 2024 | Team Udayavani |

ನವದೆಹಲಿ: ಉತ್ತರಪ್ರದೇಶದ ಎಲ್ಲ 80 ಲೋಕಸಭೆ ಕ್ಷೇತ್ರಗಳಲ್ಲೂ ಗೆದ್ದರೂ  ಇವಿಎಂ ಯಂತ್ರದ ಮೇಲೆ ವಿಶ್ವಾಸವಿಡುವುದಿಲ್ಲ ಎಂದು ಎಸ್‌ಪಿ ನಾಯಕ ಹಾಗೂ ಸಂಸದ ಅಖೀಲೇಶ್‌ ಯಾದವ್‌ ಹೇಳಿದ್ದಾರೆ.

Advertisement

ಸದನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಚರ್ಚೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದಾಗ, ಸರ್ಕಾರ ಹಾಗೂ ಚುನಾವಣೆ ಆಯೋಗ ಕೆಲವು ಜನರ ಪರವಾಗಿ ಕೆಲಸ ಮಾಡಿದೆ. ಈ ಮೊದಲೂ ನಾನು ಇವಿಎಂ ಯಂತ್ರದ ಮೇಲೆ ವಿಶ್ವಾಸವಿಟ್ಟಿಲ್ಲ. ಈಗಲೂ ಇಡುವುದಿಲ್ಲ ಎಂದರು.

ಒಂದು ವೇಳೆ ಉತ್ತರ ಪ್ರದೇಶದ ಎಲ್ಲ 80 ಲೋಕಸಭೆ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದರೂ ಅದರ ಮೇಲೆ ವಿಶ್ವಾಸವಿಡುವುದಿಲ್ಲ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ಇವಿಎಂ ನಿಷೇಧಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next