ಮಂಗಳೂರು: 2020ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು ಮತ್ತು ಸಂಸ್ಥೆಗಳನ್ನು ಗುರುತಿಸಲಾಗಿದ್ದು, ನವೆಂಬರ್ 1 ರಂದು ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಜಿಲ್ಲಾಡಳಿತ ಪ್ರಶಸ್ತಿ ನೀಡಿ ಗೌರವಿಸಲಿದೆ.
ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಸಮಾಜಸೇವೆ, ಕ್ರೀಡೆ, ರಂಗಭೂಮಿ, ಕೃಷಿ, ನೃತ್ಯ, ಪತ್ರಿಕೋದ್ಯಮ, ಕಲಾಕ್ಷೇತ್ರ, ವಾದ್ಯ ಕಲಾವಿದ, ಯಕ್ಷಗಾನ, ದೈವಪಾತ್ರಿ, ಶಿಲ್ಪ ಕಲೆ, ನಾಟಿ ವೈದ್ಯ ಮುಂತಾದ ವಿಭಾಗದಲ್ಲಿನ 38 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರೊ. ಎ, ವಿ ನಾವಡ, ಡಾ. ಯು.ವಿ ಶೆಣೈ, ಅಬ್ದುಲ್ ಸತ್ತಾರ್, ಎಂ ಸುಬ್ರಮಣ್ಯ ಭಟ್, ಕೆ. ವಿಶ್ವನಾಥ ಪೈ, ಸುಂದರ ದೇವಾಡಿಗ, ಡಾ, ವೈ ಉಮಾನಾಥ ಶೆಣೈ, ಗಣೇಶ ಕೊಲೆಕಾಡಿ, ಗಂಗಯ್ಯ ಪರವ, ಸೀತಾರಾಮ ಬಂಗೇರ ಸೇರಿದಂತೆ ಇತರ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.