ಉಳ್ಳಾಲ: ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೊಟ್ಟು ಸಿಟಿ ಬಸ್‌ಸ್ಟಾಂಡ್ ಬಳಿ ಪುರುಷರ ಮತ್ತು ಮಹಿಳೆಯರ ದ.ಕ.ಜಿಲ್ಲಾ ಕಬಡ್ಡಿ ಚಾಂಪಿಯನ್‌ಶಿಪ್ 2018ನ ಪುರುಷರ ವಿಭಾಗದಲ್ಲಿ ವಿದ್ಯಾಂಜನೇಯ ಉಳ್ಳಾಲ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ರಥಬೀದಿಯ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಶಸ್ತಿ ಪಡೆದುಕೊಂಡಿದೆ.
ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವಿಕಾಸ್ ಕಾಲೇಜಿನ ಪಿಂಕಿ ಪಡೆದುಕೊಂಡರು. ಉತ್ತಮ ಹಿಡಿತಗಾರ ಮತ್ತು ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ರಥಬೀದಿಯ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಪಿತಾ ಮತ್ತು ಖತೀಜತ್ತುಲ್ ಖುಬ್ರಾ ಪಡೆದುಕೊಂಡರು.
ಅಸೋಸಿಯೇಶನ್‌ನ ಜಿಲ್ಲಾ ಉಪಾಧ್ಯಕ್ಷ ಕೆ.ಟಿ. ಸುವರ್ಣ, ಜಿಲ್ಲಾ ಕಾರ್ಯಾಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಅಧ್ಯಕ್ಷ ಸುರೇಶ್ ಭಟ್ನಗರ, ಕಾರ್ಯಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಮಹಾ ಪೋಷಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಪೋಷಕರಾದ ಚಂದ್ರಹಾಸ ಅಡ್ಯಂತಾಯ, ಬಾಬು ಕಿನ್ಯ, ಹರೀಶ್ ಕುಮಾರ್ ಕುತ್ತಾರ್ ಪ್ರ. ಕಾರ್ಯದರ್ಶಿ ರೂಹನ್ ತೊಕ್ಕೊಟ್ಟು, ಕೋಶಾಧಿಕಾರಿ ದೇವದಾಸ್ ಶ್ರೀಯಾನ್, ವಿಜಯ ಪುತ್ರನ್ , ಭಗವಾನ್‌ದಾಸ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿಪಟು ಉದಯ ಚೌಟ, ವಿಕಾಸ್ ಕಾಲೇಜಿನ ಉಪನ್ಯಾಸಕಿ ಶೃತಿ, ಉಳ್ಳಾಲ ನಗರ ಸಭೆ ಸದಸ್ಯೆ ಸರಿತಾ ಜೀವನ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್, ಜಿಲ್ಲಾ ಅಸೋಸಿಯೇಶನ್ ಗೌರವಾಧ್ಯಕ್ಷ ಬಿ. ಅಮರನಾಥ್ ರೈ, ನ್ಯಾಯವಾದಿ ಗಂಗಾಧರ ಉಳ್ಳಾಲ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನಿಲ್‌ದಾಸ್, ಅಂತಾರಾಷ್ಟ್ರೀಯ ತೀರ್ಪುಗಾರರಾದ ಪ್ರೇಮ್‌ನಾಥ್ ಉಳ್ಳಾಲ್, ಭಗವತೀ ಕ್ಷೇತ್ರದ ಕೋಶಾಧಿಕಾರಿ ಯಶವಂತ್ ಉಚ್ಚಿಲ್, ಉದ್ಯಮಿಗಳಾದ ಪಿ. ಹರೀಶ್ ಕಾಮತ್, ರಾಜೇಶ್ ಕಾಪಿಕಾಡ್ ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಮತ್ತು ದಿವಾಕರ್ ಉಪ್ಪಳ ನಿರ್ವಹಿಸಿದರು.
ಪುರುಷರ ವಿಭಾಗ
ಪುರುಷರ ವಿಭಾಗದಲ್ಲಿ ವಿದ್ಯಾಂಜನೇಯ ಉಳ್ಳಾಲ ತಂಡವು ಬೆಳ್ತಂಗಡಿಯ ವರುಣ್ ಟ್ರಾವೆಲ್ಸ್ ತಂಡವನ್ನು ರೋಚಕ ಪಂದ್ಯಾಟದಲ್ಲಿ ಒಂದು ಅಂಕದಲ್ಲಿ ಸೋಲಿಸಿ ಪ್ರಶಸ್ತಿ ಪಡೆದುಕೊಂಡರೆ, ತೃತೀಯ ಸ್ಥಾನವನ್ನು ತತ್ವಮಸಿ ಬಗಂಬಿಲ ಪಡೆದುಕೊಂಡಿತು. ವೆಲ್‌ಕಮ್ ಯೂತ್ ಫ್ರೆಂಡ್ಸ್ ತೊಕ್ಕೊಟ್ಟು ತಂಡವು ಚತುರ್ಥ ಸ್ಥಾನ ಪಡೆದುಕೊಂಡಿತು. ಪಂದ್ಯಾಟದಲ್ಲಿ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವರುಣ್ ಟ್ರಾವೆಲ್ಸ್‌ನ ಆಶಿಕ್, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ವಿದ್ಯಾಂಜನೇಯ ಉಳ್ಳಾಲದ ಸೂರಜ್ ಪಡೆದುಕೊಂಡರು. ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ವಿದ್ಯಾಂಜನೇಯ ಉಳ್ಳಾಲದ ಆಕಾಶ್ ಪಡೆದುಕೊಂಡರು.
ಮಹಿಳೆಯರ ವಿಭಾಗ
ಮಹಿಳೆಯರ ವಿಭಾಗದಲ್ಲಿ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ವಿಕಾಸ್ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ತೃತೀಯ ಸ್ಥಾನವನ್ನು ವಿಕಾಸ್ ಕಾಲೇಜಿನ ಬಿ. ತಂಡ ಪಡೆದುಕೊಂರೆ, ಚತುರ್ಥ ಸ್ಥಾನವನ್ನು ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ಬಿ. ತಂಡ ಪಡೆದುಕೊಂಡಿತು.