Advertisement
ಹೈರಿಸ್ಕ್ ವಲಯಗಳುಮಂಗಳೂರು ತಾಲೂಕಿನ ಎಂಜಿನಿಯರಿಂಗ್ ವಸತಿ ನಿಲಯ, ಕುಳಾಯಿ ಮತ್ತು ತೆಂಕಪದವಿನ ಮೆಟ್ರಿಕ್ ವಸತಿ ನಿಲಯ ಪ್ರದೇಶವನ್ನು ಹೈರಿಸ್ಕ್ ವಲಯ ಎಂದು ಗುರುತಿಸಲಾಗಿದೆ.
ಸುರತ್ಕಲ್: ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ 100ಕ್ಕೂ ಆಧಿಕ ಮಂದಿಗೆ ಕೊರೊನಾ ಇರುವ ಹಿನ್ನೆಲೆಯಲ್ಲಿ
ಆನ್‌ಲೈನ್ ತರಗತಿಗೆ ಒತ್ತು ನೀಡಲಾಗಿದೆ. ಹೊರಗಿನ ಊರಿನ ವಿದ್ಯಾರ್ಥಿಗಳು ಊರಿಗೆ ಹಿಂದಿರುಗುತ್ತಿದ್ದಾರೆ. ಉಡುಪಿ: 361 ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಬುಧವಾರ 361 ಮಂದಿಗೆ ಕೊರೊನಾ ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ. 5.57ಕ್ಕೆ ಏರಿಕೆ ಕಂಡಿದೆ. ಒಟ್ಟು 6,476 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 78 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,625 ಪ್ರಕರಣಗಳು ಸಕ್ರಿಯವಾಗಿವೆ. ಸಾಮಾನ್ಯ ಬೆಡ್‌ನಲ್ಲಿ 80, ಎಚ್‌ಡಿಯೂ ಬೆಡ್‌ನಲ್ಲಿ 8, ವೆಂಟಿಲೇಟರ್ ಇಲ್ಲದ ಬೆಡ್‌ನಲ್ಲಿ 12, ವೆಂಟಿಲೇಟರ್ ಹಾಗೂ ಐಸಿಯು ಇರುವ ಬೆಡ್‌ನಲ್ಲಿ 6 ಸಹಿತ ಒಟ್ಟು 80 ಮಂದಿ ಚಿಕಿತ್ಸೆಯಲ್ಲಿದ್ದಾರೆ.
Related Articles
ಜಿಲ್ಲೆಯಲ್ಲಿ ಬುಧವಾರ 262 ಮಂದಿಗೆ ಕೊರೊನಾ ದೃಢಪಟ್ಟಿದೆ. 128 ಮಂದಿ ಗುಣಮುಖರಾಗಿದ್ದಾರೆ. 1,003 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ ಜಿಲ್ಲೆಯಲ್ಲಿ 7 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ.
Advertisement
ಕೇರಳದಲ್ಲಿ 12,742 ಪ್ರಕರಣಕೇರಳದಲ್ಲಿ ಬುಧವಾರ 12,742 ಮಂದಿಗೆ ಕೊರೊನಾ ದೃಢಪಟ್ಟಿದೆ. 23 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 50,254ಕ್ಕೇರಿದೆ. ಕೊಡಗು: 50 ಮಂದಿಗೆ ಕೊರೊನಾ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ 50 ಮಂದಿಗೆ ಕೊರೊನಾ ದೃಢಪಟ್ಟಿದೆ. 9 ಮಂದಿ ಗುಣಮುಖ ರಾಗಿದ್ದಾರೆ. 330 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 2.15ರಷ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.