Advertisement
ಇದು ಪ್ರಧಾನಿ ನರೇಂದ್ರ ಮೋದಿಯವರ ಮಾತು. ಸೋಮವಾರ ಕಾರ್ಗಿಲ್‌ನಲ್ಲಿ ಯೋಧ ರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಮಾತ ನಾಡಿದ ಅವರು, “ಕಾರ್ಗಿಲ್‌ನಲ್ಲಿ ನಮ್ಮ ಸಶಸ್ತ್ರ ಪಡೆಯು ಭಯೋತ್ಪಾದನೆಯನ್ನು ಹೊಸಕಿ ಹಾಕಿತು. ಭಾರತೀಯ ಯೋಧರ ಶಕ್ತಿ-ಚೈತನ್ಯಕ್ಕೆ ನಾನು ತಲೆಬಾಗುತ್ತೇನೆ. ನಿಮ್ಮ ತ್ಯಾಗವು ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಸಶಸ್ತ್ರ ಪಡೆಗಳು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ, ದೇಶದ ಪ್ರತಿಯೊಬ್ಬ ನಾಗರಿಕನೂ ನೆಮ್ಮದಿಯಿಂದ ನಿದ್ರಿಸುತ್ತಾನೆ’ ಎಂದು ಹೇಳಿದ್ದಾರೆ.
Related Articles
Advertisement
ಟೆಕ್ಸಾಸ್‌ನಲ್ಲಿ ಸಂಭ್ರಮ: ಅಮೆರಿಕದ ಟೆಕ್ಸಾಸ್‌ನ ಗವರ್ನರ್ ಗ್ರೆಗ್ ಅಬೋಟ್ ಅವರು ಸೋಮ ವಾರ ಆಸ್ಟಿನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅದ್ದೂರಿ ಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಭಾರ ತೀಯ- ಅಮೆರಿಕನ್ ಸಮುದಾಯದೊಂದಿಗೆ ಹಬ್ಬ ಆಚರಣೆ ಮಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ. ಅಬೋಟ್ ಮತ್ತು ಪತ್ನಿ ಸೆಸಿಲಿಯಾ ಅವರು ಭಾರತದ ಸಾಂಪ್ರದಾಯಿಕ ಉಡುಗೆ ತೊಟ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಡಿಯಲ್ಲಿ ಹಬ್ಬ ಆಚರಿಸಿಕೊಂಡ ರಕ್ಷಣ ಪಡೆಗಳ ಮುಖ್ಯಸ್ಥರುರಕ್ಷಣ ಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಹಾಣ್, ಭೂಸೇನಾ ಮುಖ್ಯಸ್ಥ ಜ. ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರೂ ಸೋಮವಾರ ವಿವಿಧ ಗಡಿಗಳಲ್ಲಿ ದೀಪದ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜತೆಗೆ ಸೇನಾ ಸನ್ನದ್ಧತೆಯ ಪರಿಶೀಲನೆಯನ್ನೂ ನಡೆಸಿದ್ದಾರೆ. 21 ವರ್ಷಗಳ ಬಳಿಕ ಅಚ್ಚರಿಯ ಭೇಟಿ!
ಯೋಧರೊಂದಿಗೆ ದೀಪಾವಳಿ ಆಚರಣೆಗೆಂದು ಕಾರ್ಗಿಲ್‌ಗೆ ತೆರಳಿ ರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿಯೊಂದು ಕಾದಿತ್ತು! ಅಲ್ಲಿ ಯುವ ಸೇನಾಧಿಕಾರಿ ಮೇಜರ್ ಅಮೃತ್ ಎಂಬವರು ಮೋದಿಯವರಿಗೆ ಫೋಟೋ ವೊಂದನ್ನು ಉಡು ಗೊರೆಯಾಗಿ ನೀಡಿದರು. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಯಾವುದೋ ಸೈನಿಕ ಶಾಲೆಯಲ್ಲಿ ಅವ ರಿಂದ ವಿದ್ಯಾರ್ಥಿಗಳಿಬ್ಬರು ಮೆಡಲ್ ಸ್ವೀಕರಿಸುತ್ತಿದ್ದ ಫೋಟೋವದು. 21 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಮೋದಿ ಅವರು ಗುಜರಾತ್‌ನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಲ್ಲಿನ ಸೈನಿಕ ಶಾಲೆಗೆ ಭೇಟಿ ನೀಡಿದ್ದರು. ಆಗ ಮೇ.ಅಮೃತ್ ಅವರು ಅದೇ ಶಾಲೆಯ ವಿದ್ಯಾರ್ಥಿ. ಅಂದು ತಮಗೆ ಮೋದಿಯವರು ಪದಕ ಪ್ರದಾನ ಮಾಡಿದ ಫೋಟೋ ವನ್ನು ಹಾಗೆಯೇ ಎತ್ತಿಟ್ಟು, ಅದಕ್ಕೆ ದೊಡ್ಡ ಫ್ರೆàಮ್ ಹಾಕಿ ಸೋಮ ವಾರ ಅದನ್ನು ಮೋದಿಯವರಿಗೆಯೇ ಉಡುಗೊರೆಯಾಗಿ ನೀಡಿದ್ದಾರೆ ಮೇಜರ್ ಅಮೃತ್. 21 ವರ್ಷಗಳ ಬಳಿಕ ಕಾರ್ಗಿಲ್‌ನಲ್ಲಿ ಮೋದಿ-ಮೇಜರ್ ಅಮೃತ್ ಭೇಟಿ ನಡೆದಿದ್ದು, ಈ ಭಾವನಾತ್ಮಕ ಕ್ಷಣಕ್ಕೆ ಹಲವು ಯೋಧರು ಸಾಕ್ಷಿಯಾದರು. ಗಡಿಯಲ್ಲಿ ಸಿಹಿ ವಿನಿಮಯ
ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತದ ಬಿಎಸ್‌ಎಫ್ ಮತ್ತು ಪಾಕಿಸ್ಥಾನದ ರೇಂಜರ್‌ಗಳು ದೀಪಾವಳಿ ನಿಮಿತ್ತ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಲದ ಫುಲ್ಬರಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನೆಗಳು ಕೂಡ ಸಿಹಿ ವಿನಿಮಯ ಮಾಡಿಕೊಂಡಿವೆ.