Advertisement
ಗಡಿಯಲ್ಲಿರುವ ಸಶಸ್ತ್ರ ಪಡೆ ಯೋಧರು ಹಾಗೂ ಅರೆಸೇನಾಪಡೆ ಯೋಧರು, ಸ್ಯಾಟಲೈಟ್ ಫೋನ್‌ಗಳ ಮೂಲಕ ತಮ್ಮ ಬಂಧುಗಳೊಂದಿಗೆ ಮಾತನಾಡಲು ವಿಧಿಸಲಾಗುತ್ತಿದ್ದ ಕರೆಯ ದರವನ್ನು 5 ರೂ.ಗಳಿಂದ 1 ರೂ.ಗೆ ಇಳಿಸಲಾಗಿದೆ. ಅಲ್ಲದೆ, ಸ್ಯಾಟಲೈಟ್ ಫೋನ್ ಬಳಕೆಗೆ ಮಾಸಿಕವಾಗಿ ವಿಧಿಸಲಾಗುತ್ತಿದ್ದ 500 ರೂ. ಶುಲ್ಕವನ್ನೂ ರದ್ದುಗೊಳಿಸಲಾಗಿದೆ. ಬುಧವಾರ ಪತ್ರ ಕರ್ತರ ಜತೆ ಮಾತನಾಡಿದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಈ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಈ ಎರಡೂ ಕೊಡುಗೆಗಳು ಗುರುವಾರ (ಅಕ್ಟೋಬರ್ 19)ದಿಂದಲೇ ಅನುಷ್ಠಾನಗೊಂಡಿವೆ.
Related Articles
ಹೊಸದಿಲ್ಲಿ: ಅರ್ಹತೆಯ ಆಧಾರದಲ್ಲಿ ಪಾಕಿಸ್ಥಾನ ಸಹಿತ ವೈದ್ಯಕೀಯ ನೆರವು ಯಾಚಿಸುತ್ತಿರುವವರಿಗೆ ವೀಸಾ ನೀಡಲಾಗುವುದು. ಇದು ದೀಪಾವಳಿಗೆ ನೀಡುತ್ತಿರುವ ಗಿಫ್ಟ್’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪಾಕಿಸ್ಥಾನದ ಮಹಿಳೆ ಅಮ್ನಾ ಶಮೀನ್ ಅವರ ಅಪ್ಪ ಈಗಾಗಲೇ ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನೋಡಲು ತಮಗೆ ವೀಸಾ ಕಲ್ಪಿಸಿ ಎಂದು ಶಮೀನ್ ಕೇಳಿಕೊಂಡಿದ್ದರು. ಅದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಸುಷ್ಮಾ, ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್ ಭೇಟಿಯಾಗುವಂತೆ ಸೂಚಿಸಿದ್ದು, ವೀಸಾ ಕಲ್ಪಿಸುವ ಭರವಸೆ ನೀಡಿದ್ದಾರೆ. ಬುಧವಾರ ವಷ್ಟೇ ಚಿಕಿತ್ಸೆ ಬಯಸಿದ್ದ ಮಗು ವಿನ ಕುಟುಂಬಕ್ಕೂ ವೀಸಾ ದಯಪಾಲಿಸಿದ್ದರು ಸುಷ್ಮಾ. ಈ ಮೂಲಕ ವೈದ್ಯಕೀಯ ನೆರವು ಬಯಸಿದ ಅನೇಕರ ಬಾಳಲ್ಲಿ ಬೆಳಕು ಮೂಡಿಸುವತ್ತ ಸುಷ್ಮಾ ಹೆಜ್ಜೆಯಿಟ್ಟಿದ್ದಾರೆ.
Advertisement