ರಾಯ್ಪುರ: ದಸರೆಯ ಸಂಭ್ರಮದ ಬಳಿಕ ನ.14ರಿಂದ ದೀಪಾವಳಿ ಸಂಭ್ರಮ. ಅದಕ್ಕಾಗಿ 24- 60 ಗಂಟೆ ಕಾಲ ಉರಿಯುವ ದೀಪವೊಂದನ್ನು ಛತ್ತೀಸ್‌ಗಡದ ಬಸ್ತಾರ್ ಜಿಲ್ಲೆಯ ಕೊಂಡಗಾಂವ್‌ನಲ್ಲಿರುವ ಅಶೋಕ್ ಚಕ್ರಧಾರಿ ಎಂಬ ಕುಂಬಾರ ಹೊಸ ರೀತಿಯ ದೀಪ ರಚಿಸಿದ್ದಾರೆ.
ಅವರು ಸಿದ್ಧಪಡಿಸಿದ ದೀಪದ ಫೋಟೋ ಮತ್ತು ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಕ್ರಧಾರಿಯವರು ಸಿದ್ಧಪಡಿಸಿದ ದೀಪವನ್ನು ಒಂದು ಬಾರಿ ಉರಿಸಿದರೆ, ಎಣ್ಣೆ ಮುಗಿದಾಗಲೆಲ್ಲ ನೇರವಾಗಿ ಹಣತೆಯ ತಟ್ಟೆಗೆ ಬೀಳುವಂತೆ ಮಾಡಿದ್ದಾರೆ. ಅವರು ಹೇಳುವ ಪ್ರಕಾರ 24 ಗಂಟೆಯಿಂದ 60 ಗಂಟೆಗಳ ಕಾಲ ಸತತವಾಗಿ ಉರಿಯುತ್ತದೆ. ಹೀಗಾಗಿ, ಅದಕ್ಕೆ ಮ್ಯಾಜಿಕ್ ಲ್ಯಾಂಪ್ ಎಂಬ ಹೆಸರು ಇರಿಸಿದ್ದಾರೆ.
ಹಣತೆಯ ಮೇಲೆ ಸಣ್ಣ ಮಡಕೆಯಂಥ ಟ್ಯಾಂಕ್ ರಚಿಸಲಾಗಿದ್ದು, ಅಲ್ಲಿ ಎಣ್ಣೆ ಹಾಕಲಾಗುತ್ತದೆ. ಅಲ್ಲಿಂದ ನೇರವಾಗಿ ಹಣತೆ ಇರುವ ತಟ್ಟೆಗೆ ಎಣ್ಣೆ ಮುಗಿದಾಗಲೆಲ್ಲ ಅಲ್ಲಿಂದ ತನ್ನಿಂತಾನೆ ಎಣ್ಣೆ ಸುರಿಯುತ್ತದೆ. ಯುಟ್ಯೂಬ್‌ನಲ್ಲಿ ಒಂದು ವಿಡಿಯೋ ನೋಡಿದ ಬಳಿಕ ಅವರಿಗೆ ಮ್ಯಾಜಿಕ್ ಲ್ಯಾಂಪ್ ಮಾಡುವ ಐಡಿಯಾ ಹೊಳೆಯಿತು.
ಇದನ್ನೂ ಓದಿ:ಮದುವೆ ಸಮಾರಂಭಕ್ಕೆ 200ಕ್ಕಿಂತ ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಮೊಕದ್ದಮೆ : ಜಿಲ್ಲಾಧಿಕಾರಿ
ಕಳೆದ ವರ್ಷದ ದೀಪಾವಳಿಗೆ ಏನಾದರೊಂದು ಹೊಸತು ಸಿದ್ಧಪಡಿಸಬೇಕೆಂದು ತೋರಿತ್ತು. ಅದರಿಂದ ಸ್ಫೂರ್ತಿಗೊಂಡು ತಯಾರಿಸಿದೆ. ಆನ್‌ಲೈನ್‌ನಲ್ಲಿ ನೋಡಿಕೊಂಡು ಕೆಲವು ಹೊಸತನ ಕಲಿತಿದ್ದೇನೆ ಎಂದು ಹೇಳಿದ್ದಾರೆ.