Advertisement

ಡಿವೈನ್‌ ಸ್ಪಾರ್ಕ್‌ ಮುಂಬಯಿ ಸ್ವಂತ ಕಚೇರಿ “ವಿವೇಕ ಶರಣ’ಉದ್ಘಾಟನೆ

05:16 PM Jun 01, 2018 | |

 ಮುಂಬಯಿ: ವ್ಯಕ್ತಿತ್ವ ವಿಕಸನ, ವ್ಯಕ್ತಿತ್ವ ನಿರ್ಮಾಣದಿಂದಲೇ ಸದೃಢ ರಾಷ್ಟ್ರ ನಿರ್ಮಾಣವಾಗುವುದು. ರಾಮ ರಾಜ್ಯ ವಾಗಲು ನಿಮ್ಮಂತಹ ವಿವೇಕ ವೀರರು ದುಡಿ ಯುತ್ತಿರುವುದು  ಸಂತಸದ ವಿಚಾರ ಎಂದು ಸಚಿವೆ ವಿದ್ಯಾ ಜೆ. ಠಾಕೂರ್‌  ಹೇಳಿದರು.

Advertisement

ಡಿವೈನ್‌ ಸ್ಪಾರ್ಕ್‌ ಮುಂಬಯಿಯ ಸ್ವಂತ ಕಚೇರಿ  “ವಿವೇಕ ಶರಣ’ ಎಂಬ ವಿಶಿಷ್ಟವಾದ ಚಟುವಟಿಕಾ ಕೇಂದ್ರ  ಗೋರೆಗಾಂವ್‌ ಪಶ್ಚಿಮದ ಕೇಸರಿನಾಥ್‌ ಕಟ್ಟಡದ 7ನೇ ಮಹಡಿಯಲ್ಲಿ ಆರಂಭವಾಗಿದ್ದು ಅದನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬೇರೆ ಬೇರೆ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ.ಆದರೆ ನಿಮ್ಮ ಕಾರ್ಯಕರ್ತ ರಲ್ಲಿರುವ ಸಂಸ್ಕಾರ ಎಲ್ಲೂ ನಾನು ಕಾಣಲಿಲ್ಲ ಎಂದ ಅವರು ನಿಮಗೆ ಸಹಾಯ ಹಸ್ತ ನೀಡಲು ನಾನು ಯಾವಾಗಲೂ ಸಿದ್ಧಳಿದ್ದೇನೆ ಎಂದರು.
ಹಿರಿಯ ಟ್ರಸ್ಟಿಗಳಾದ ಶ್ರೀಪತಿ   ಸೋಮಯಾಜಿ ಹಾಗೂ  ಕರಿಸಿದ್ದಪ್ಪ  ಅವರು ಆರತಿ  ಬೆಳಗಿಸಿದರು. 

ಡಾ| ಸತಿ ಶಂಕರ್‌ ಕಾಮತ್‌ ಡಿವೈನ್‌ ಪಾರ್ಕ್‌- ಡಿವೈನ್‌ ಸ್ಪಾರ್ಕ್‌ಗಳ ಕಾರ್ಯ ವೈಖರಿಯನ್ನು   ಪ್ರಸ್ತುತ ಪಡಿಸಿದರು. ಟ್ರಸ್ಟಿಗಳು  ಅತಿಥಿಗಳನ್ನು ಪುಷ್ಪಗುತ್ಛ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಪಾಟ್ಕರ್‌ ಕಾಲೇಜಿನ ಅಡಿಟೋರಿಯಮ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಿವೈನ್‌  ಪಾರ್ಕಿನ ಹಿರಿಯ ಟ್ರಸ್ಟಿಗಳಾದ ಶ್ರೀಪತಿ ಸೋಮಯಾಜಿ ಹಾಗೂ  ಕರಿಸಿದ್ಧಪ್ಪ, ಅಧ್ಯಕ್ಷ ಎಂ. ಬಿ. ಸನಿಲ್‌, ಗೌರವಾಧ್ಯಕ್ಷ ಎಂ.ಟಿ. ಶೆಟ್ಟಿ, ಕಾರ್ಯದರ್ಶಿ ಡಾ| ಪಿ. ಎಸ್‌. ರಾವ್‌, ಕೋಶಾಧಿಕಾರಿ ಮಾಧವ ಕಾಂಚನ್‌ ಅವರು ಉಪಸ್ಥಿತರಿದ್ದರು.

ಡಾ| ಪಿ. ಎಸ್‌. ರಾವ್‌ ಅವರು ಮಾತನಾಡಿ, 1994 ರಿಂದ ಮುಂಬಯಿ ಬಳಗಗಳ ಆಗುಹೋಗುಗಳ ಬಗ್ಗೆ ವಿವರಿಸಿ, ಕಳೆದ 24 ವರ್ಷಗಳಿಂದ ಮುಂಬಯಿ ಬಳಗಗಳು ನಡೆದು ಬಂದದಾರಿ ಹಾಗೂ ಸಾಧನೆಯನ್ನು ತಿಳಿಸಿದರು. ಶ್ರೀಮತಿ ಸೋಮಯಾಜಿ ಅವರು ಡಿವೈನ್‌  ಪಾರ್ಕಿನ ಆದಿಯಿಂದಲೂ ಡಾಕ್ಟರ್‌ಜೀ ಜತೆ ಇದ್ದವರು. ನಾನಿಷ್ಟು ವರ್ಷಗಳಿಂದ ಡಾಕ್ಟರ್‌ಜೀಯವರೊಂದಿಗೆ ಸಂಪರ್ಕದಲ್ಲಿದ್ದರೂ ಅವರ ಮಹಿಮೆಯನ್ನು ತಿಳಿಯುವುದು ಸಾಧ್ಯವಾಗಿಲ್ಲ. ಭಾವ ಭಕ್ತಿಯಿಂದ ಸಾಧನೆ ಮಾಡಿ, ಸಾಧನೆ ಮೆಕ್ಯಾನಿಕ್‌ಅಲ್ಲ, ಮೆಥಾಡಿಕಲ್‌ ಆದಾಗ ಮಾತ್ರ ನಾಮದಲ್ಲಿ ರುಚಿ  ಬರುವುದು. ಹಣ ಸಂಪಾದನೆಗಿಂತ ಗುಣ ಸಂಪಾದನೆ ಮುಖ್ಯ. ನಿತ್ಯ ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ಎಂದು ಬೇಡಿದರೆ ಜಗತ್ತಿನ ಉದ್ಧಾರ ಖಂಡಿತ. ನಾವು ಆತ್ಮಶಕ್ತಿಜಾಗೃತಿಗೈದು ಇತರರನ್ನು ಆ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಎಂದರು.
ಕರಿಸಿದ್ದಪ್ಪ  ಅವರು, ಲೋಕೋದ್ಧಾರ ಹಾಗೂ ಲೋಕಕಲ್ಯಾಣ  ಈ ವಿಚಾರಗಳ ಬಗ್ಗೆ ಮಾತನಾಡಿ, ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ವಿಕಸನ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿಯೇ ಶ್ರೀಗುರೂಜೀ ನೀಡಿದಂತಹ ದೀಪ ಯೋಜನೆ, ಶ್ರೀ ಸುಧಾ ಮೊದಲಾದ ಕಾರ್ಯಕ್ರಮಗಳಿಂದ ಆತ್ಮದ ಉನ್ನತಿ, ಉದ್ಧಾರವಾಗಲು ಸಾಧ್ಯ.  ದೇಹ ಎಂಬುದು ಭಗವಂತನನ್ನು ಹೊತ್ತ ಪಲ್ಲಕಿ, ಅದುಅವನ ವಾಹನ ಎಂದರು.
ಶಾಂಭವಿ ಬೇಂಗ್ರೆ ಅವರು ನೂತನ ಕಚೇರಿ ವಿವೇಕ ಶರಣದಲ್ಲಿ ಆಗಬೇಕಾದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು. 

Advertisement

ಎಂ. ಬಿ. ಸನಿಲ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಕಾರ್ಯ ಕಲಾಪಗಳ ಬಗ್ಗೆ ತಿಳಿಸಿದರು. ವಿಶ್ವನಾಥ ತೋನ್ಸೆ ಅವರು ವಂದಿಸಿದರು. 
ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next