Advertisement

‘ವ್ಯಕ್ತಿಯ ಆಂತರ್ಯದಲ್ಲಿ ದೈವತ್ವವಿದೆ’

05:06 PM Dec 27, 2017 | Team Udayavani |

ಸುಬ್ರಹ್ಮಣ್ಯ : ಆತ್ಮದ ಉನ್ನತಿಗೆ ಸ್ವಸಾಮರ್ಥ್ಯ ಬಲದ ಅರಿವಿರಬೇಕು. ಪ್ರತಿಯೊಬ್ಬನ ಆಂತರ್ಯದಲ್ಲಿ ದೈವತ್ವವಿದೆ. ಅದರ ಅರಿವು ಸಾಕಾರಗೊಂಡು ಜೀವನ ರಥ ಸಾಗಿದಾಗಲೇ ಬದುಕಿಗೊಂದು ಅರ್ಥ ಬರುತ್ತದೆ ಎಂದು ಪೊನ್ನಂಪೇಟೆ ಶ್ರೀ ಆನಂದಾಶ್ರಮದ ಶ್ರೀ ಬೋಧಸ್ವರೂಪನಾಂದ ಮಹಾರಾಜ ಅವರು ಹೇಳಿದರು. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಸಂಸ್ಕೃತಿಯ ಅರಿವಿನ ಕೊರತೆ
ಇಂದಿನ ಮಕ್ಕಳಲ್ಲಿ ಸಂಸ್ಕೃತಿಯ ಅರಿವಿನ ಕೊರತೆ ಇದೆ. ಅದನ್ನು ತುಂಬುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಅದನ್ನು ಇಲ್ಲಿನ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಭಾರತೀಯ ಸಂಸ್ಕೃತಿ, ದೇಶಪ್ರೇಮ, ಸಾಮಾಜಿಕ ಜವಾಬ್ದಾರಿ ಅರಿವು ಮೂಡಿಸುವ ಈ ಸಂಸ್ಥೆ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿದ್ದು ಉತ್ಕೃಷ್ಟ ವಿದ್ಯಾಭ್ಯಾಸ ನೀಡುವುದರೊಂದಿಗೆ ಚೈತನ್ಯಮಯ ವಾತಾವರಣ ಇಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಧ್ವಜಾರೋಹಣ, ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್‌ ಇಂಜಾಡಿ ನೆರವೇ
ರಿಸಿದರು. ಅನುಗ್ರಹ ಎಜುಕೇಶನ್‌ ಟ್ರಸ್ಟ್‌ ನ ಅಧ್ಯಕ್ಷ ಗಣೇಶ್‌ ಪ್ರಸಾದ್‌ ನಾಯರ್‌ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಯಾಗಿದ್ದರು. ಸಾಧಕರಿಗೆ ನೀಡಲಾಗುವ ಕುಮಾರ್‌ ನಾಯರ್‌ ಎಕ್ಸಲೆಂಟ್‌ ಅವಾರ್ಡ್‌ ಅನ್ನು ಕೃಷಿ ಸಾಧಕ ಮಹಾಲಿಂಗೇಶ್ವರ ಭಟ್‌ ಅವರಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ನೀಡಿ ಗೌರವಿಸಿದರು.

ಮಕ್ಕಳ ಪತ್ರಿಕೆ ಚಿಗುರು ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಪುಟಾಣಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಹೆತ್ತವರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥೇಶ್‌ ಪಾರೆಪ್ಪಾಡಿ, ವಿದ್ಯಾರ್ಥಿ ನಾಯಕಿ ಅಕ್ಷತಾ ಎ.ಎಸ್‌. ಉಪಸ್ಥಿತರಿದ್ದರು. ಸಂಚಾಲಕ ಚಂದ್ರಶೇಖರ್‌ ನಾಯರ್‌ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನಾ ನಿರೂಪಿಸಿದರು. ಶಿವರಾಮ್‌ ಯೇನೆಕಲ್ಲು ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next