Advertisement

ವಿಸ್ತರಣೆಗೊಂಡ ಅಪಾಯಕಾರಿ ನೆಂಪು ಜಂಕ್ಷನ್‌ನಲ್ಲಿ ಡಿವೈಡರ್‌ ನಿರ್ಮಾಣ

11:07 PM Aug 15, 2019 | Team Udayavani |

ಕೊಲ್ಲೂರು: ಹೆಮ್ಮಾಡಿಯಿಂದ ಹಾಲ್ಕಲ್‌ ವರೆಗಿನ ಮುಖ್ಯ ರಸ್ತೆಯ ದ್ವಿಪತ ಕಾಮಗಾರಿ ಪೂರ್ಣ ಗೊಂಡಿದ್ದರು ನೆಂಪು ವೃತ್ತದ ಬಳಿ ಸುರಕ್ಷತಾ ಕ್ರಮವಿಲ್ಲದೇ ಅಪಾಯಕಾರಿ ಆಗಿರುವ ಬಗ್ಗೆ ಪ್ರಕಟವಾದ ಉದಯವಾಣಿಯ ವಿಶೇಷ ವರದಿಗೆ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆ ಇದೀಗ ಸುಗಮ ವಾಹನ ಸಂಚಾರಕ್ಕೆ ಪ್ರಾಯೋಗಿಕ ವೃತ್ತ ನಿರ್ಮಿಸಿ ಗೊಂದಲ ನಿಭಾಯಿಸಿದೆ.

Advertisement

ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ರಾ. ಹೆದ್ದಾರಿ ಪ್ರಮುಖ ರಸ್ತೆಗಳಲ್ಲೊಂದು ಇಲ್ಲಿನ ಬಹುತೇಕ ತಿರುವುಗಳಿರುವ ಮಾರ್ಗವು ಅಗಲ ಕಿರಿದಾಗಿದ್ದು ಅಪಘಾತ ಝೋನ್‌ ಆಗಿ ಪರಿವರ್ತನೆ ಗೊಂಡಿತ್ತು. ದಿನಂಪ್ರತಿ ಒಂದಲ್ಲೊಂದೆಡೆ ವಾಹನ ಅಪಘಾತ ನಡೆಯುತಿತ್ತು. ವಾಹನಗಳ ಅಮಿತ ವೇಗದ ಮೇಲೆ ನಿಯಂತ್ರಣ ಸಾಗಿಸಲು ಈ ಮಾರ್ಗವಾಗಿ ಕೈಗೊಳ್ಳಬೇಕಾದ ಮಾರ್ಗೋಪಾಯದ ಬಗ್ಗೆ ಹಲವು ಭಾರೀ ಉದಯವಾಣಿ ವರದಿ ಮೂಲಕ ಬೆಳಕು ಚೆಲ್ಲಿತ್ತು.ಕಗ್ಗಂಟಾಗಿದ್ದ ಈ ಸಮಸ್ಯೆ ಬಗೆಹರಿಸಲು ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆಗೆ ಅಲ್ಲಿ ರಸ್ತೆಗೆ ಚಾಚಿ ಬೆಳದು ನಿಂತಿದ್ದ ಭಾರೀ ಗಾತ್ರದ ಮರಗಳು ತಡೆಯಾಗಿತ್ತು.

ನೆಂಪುವಿನಲ್ಲಿ ಡಿವೈಡರ್‌ ನಿರ್ಮಾಣ
ರಸ್ತೆಯ ಅಗಲೀಕರಣಗೊಂಡಿದ್ದರು, ಅಮಿತ ವೇಗದಿಂದ ಸಾಗುವ ವಾಹನಗಳ ವೇಗ ನಿಯಂತ್ರಣಕ್ಕೆ ಶಾಸಕರ ಸೂಚನೆಯಂತೆ ಪ್ರಾಯೋಗಿಕ ನೆಲೆಯಲ್ಲಿ ಡಿವೈಡರ್‌ ನಿರ್ಮಿಸಿದ್ದು ಅದುವೇ ವಾಹನ ಸವಾರರ ಗೊಂದಲಕ್ಕೊಂದು ಪರಿಹಾರ ಕಂಡುಕೊಂಡಂತಾಗಿದೆ.

ಶಾಸಕರ ಪ್ರಯತ್ನ ಫಲ
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ರಸ್ತೆಯ ವಿಸ್ತರಣೆಯ ಬಗ್ಗೆ ರೂ. 5 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಮಂಜೂರು ಮಾಡಿಸಿದ್ದರು. ಅವರ ಪ್ರಯತ್ನದ ಫಲವಾಗಿ ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಾಗುವ ಭಾರೀ ತಿರುವು ಹೊಂದಿರುವ ರಸ್ತೆಯು ವಿಸ್ತರೀಕರಣ, ಡಾಮರೀಕರಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next