ಮೇರಿಲ್ಯಾಂಡ್: ಸರಕು ತುಂಬಿದ್ದ ಹಡಗು ಡಿಕ್ಕಿ ಹೊಡೆದ ರಭಸಕ್ಕೆ ಮೂರೂ ಕಿಲೋಮೀಟರ್ ಉದ್ದದ ಸೇತುವೆ ಕುಸಿದು ಬಿದ್ದು ಹಲವು ಮಂದಿ ನದಿಗೆ ಬಿದ್ದು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ರಕ್ಷಣಾ ತಂಡ ಎರಡು ಮೃತದೇಹಗಳನ್ನು ಪತ್ತೆ ಹಚ್ಚಿವೆ.
ಸೇತುವೆಯ ಮೇಲೆ ರಸ್ತೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕುಸಿದು ಬಿದ್ದಿದೆ ಪರಿಣಾಮ ಇಬ್ಬರು ಕಾರ್ಮಿಕರು ಹಾಗೂ ಅವರ ವಾಹನ ಸಮೇತ ನದಿಗೆ ಬಿದ್ದಿದ್ದರು ಎನ್ನಲಾಗಿದೆ ಇದೀಗ ರಕ್ಷಣಾ ತಂಡ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದೆ.
ಮೃತ ವ್ಯಕ್ತಿಗಳನ್ನು ಮೆಕ್ಸಿಕೊ ಮೂಲದ ಅಲೆಜಾಂಡ್ರೊ ಹೆರ್ನಾಂಡೆಜ್ ಫ್ಯೂಯೆಂಟೆಸ್ (35) ಮತ್ತು ಮೂಲತಃ ಗ್ವಾಟೆಮಾಲಾ ಮೂಲದ ಡೋರ್ಲಿಯನ್ ರೋನಿಯಲ್ ಕ್ಯಾಸ್ಟಿಲೊ ಕ್ಯಾಬ್ರೆರಾ (26) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೇರಿಲ್ಯಾಂಡ್ ಸ್ಟೇಟ್ ಪೋಲೀಸ್ ಕರ್ನಲ್ ರೋಲ್ಯಾಂಡ್ ಬಟ್ಲರ್ ಸೇತುವೆ ಕುಸಿದ ಮಧ್ಯಭಾಗದಲ್ಲಿ ಸುಮಾರು 25 ಅಡಿ ಆಳದಲ್ಲಿ ಕೆಂಪು ಪಿಕಪ್ ವಾಹನ ಬಿದ್ದಿರುವುದು ಕಂಡು ಬಂದಿತ್ತು ಈ ವೇಳೆ ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ಇಬ್ಬರು ವ್ಯಕ್ತಿಗಳ ಶವಗಳು ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಇನ್ನೂ ಕೆಲವು ಮಂದಿ ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?