ಮಂಗಳೂರು : ನಮ್ಮ ನಾಡಿನ ರಕ್ಷಣೆ ಮತ್ತು ಸಂಸ್ಕೃತಿಯನ್ನು ಉಳಿಸಿದ ವೀರರಲ್ಲಿ ಕೋಟಿ-ಚೆನ್ನಯರು ಪ್ರಮುಖರಾಗಿದ್ದು, ಅವರ ಹೆಸರಲ್ಲಿ ನಡೆಯುವ ಈ ಪಂದ್ಯಾಟದ ಮೂಲಕ ನಮ್ಮ ಕ್ರೀಡಾಪಟುಗಳು ನಮ್ಮ ನಾಡಿನ ರಕ್ಷಣೆಯೊಂದಿಗೆ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಜೆ. ಬಿ. ಸಲ್ಡಾನ್ಹಾ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಜಂಕ್ಷನ್ ಬಾಯ್ಸ್ ಹಾಗೂ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಆಶ್ರಯದಲ್ಲಿ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಕೋಟಿ ಚೆನ್ನಯ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಟದ ಉದ್ಘಾಟನ ಕಾರ್ಯಕ್ರಮದಲ್ಲ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸುವ ಕಾರ್ಯ ಶ್ಲಾಘನೀಯ. ಹುಟ್ಟು ಸಾವಿನ ನಡುವೆ ಜನರು ನೆನಪಿಡುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಇಂದಿನ ಯುವ ಜನತೆ ಎಲ್ಲ ಧರ್ಮದವರನ್ನು ಒಂದುಗೂಡಿಸಬೇಕು ಎಂದರು. ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಉದ್ಘಾಟಿಸಿದರು.
ಈ ಸಂದರ್ಭ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸತೀಶ್ ಕರ್ಕೇರ ಟ್ರೋಫಿ ಅನಾವರಣಗೊಳಿಸಿದರು. ಕಾಪಿಕಾಡು ಶ್ರೀ ಉಮಾಮಹೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಕ್ರೀಡಾಂಗಣ ಉದ್ಘಾಟಿಸಿದರು. ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್. ಸುನಿಲ್, ಪುಂಜಾಲಕಟ್ಟೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಉದ್ಯಮಿ ಚಂದ್ರಹಾಸ್ ಪಂಡಿತ್‌ಹೌಸ್, ನಗರಸಭಾ ಸದಸ್ಯರಾದ ಆಯೂಬ್ ಮಂಚಿಲ, ಭವಾನಿ ಕಾಪಿಕಾಡು, ಗೀತಾ ಬಾೖ, ಎಬಿಸ ತೊಕ್ಕೊಟ್ಟು ಇದರ ಅಧ್ಯಕ್ಷ ಲೋಹಿತ್ ಬಂಗೇರ, ಉದ್ಯಮಿಗಳಾದ ಹರಿಶ್ಚಂದ್ರ ಸಾಲ್ಯಾನ್, ಸುಂದರ ಗಟ್ಟಿ, ಅಬ್ದುಲ್ ರಹೀಂ, ಸುದೇಶ್ ಉಳ್ಳಾಲ ಬೈಲು, ಕರ್ನಾಟಕ ರಾಜ್ಯ ಕೈಗಾರಿಕಾ ಮಹಾ ಮಂಡಳಿ ಉಪಾಧ್ಯಕ್ಷ ಮಯೂರ್ ಉಳ್ಳಾಲ್, ಕೊಲ್ಯ ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಈಶ್ವರ್ ಕನೀರುತೋಟ, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಅಂಚನ್, ಸುಮನ್ ಪೂಜಾರಿ ಉಳ್ಳಾಲಬೈಲು, ರವಿ ಸುವರ್ಣ, ಸಂಯೋಜಕ ಭಗವಾನ್ ದಾಸ್ ತೊಕ್ಕೊಟ್ಟು, ಶರತ್ ಶೆಟ್ಟಿ, ಅರುಣ್ ಭಂಡಾರಿ, ವಿನೋದ್, ಸೂರಜ್ ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿ, ದಿವಾಕರ ಉಪ್ಪಳ ನಿರ್ವಹಿಸಿದರು.