Advertisement

‘ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ’ಉದ್ಘಾಟನೆ

10:46 AM Jan 24, 2018 | Team Udayavani |

ಮಹಾನಗರ: ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಸಂಯಮ ಹಾಗೂ ಆತ್ಮಸ್ಥೈರ್ಯ ಬೆಳೆಸುವ ಮೂಲಕ ಸತ್ಪ್ರಜೆಯಾಗಿ ಮುನ್ನಡೆಯೋಣ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಘಟಕ, ಮಂಗಳೂರು ವಿ.ವಿ. ವ್ಯಾಪ್ತಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್‌ ರಿಬ್ಬನ್‌ ಕ್ಲಬ್‌ ಕಾಲೇಜುಗಳು, ಲಯನ್ಸ್‌ ಕ್ಲಬ್‌ ನೇತ್ರಾವತಿ ಹಾಗೂ ಕೆನರಾ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕೆನರಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾದ ‘ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಯುವ ಸಮುದಾಯವನ್ನು ಹೊಂದಿರುವ ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಗುಣಮಟ್ಟದ ಯುವಕರ ರೂಪಿಸುವಲ್ಲಿ ಕುಸಿದ್ದಿದೇವೆ ಎಂದರು.

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ
ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಪ್ರತಿ ಕ್ಷಣವೂ ಬದಲಾವಣೆ ನಡೆಯುತ್ತಿರುತ್ತದೆ. ಈ ಸಂದರ್ಭ ವಿದ್ಯಾರ್ಥಿಗಳು
ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜತೆಗೆ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕು ಇಲ್ಲದಿದ್ದರೆ, ನಮ್ಮೊಳಗೆ ನಂಬಿಕೆ ಇಲ್ಲದಿದ್ದರೆ ನಾವು ನಮ್ಮತನವನ್ನೇ ಕಳೆದುಕೊಂಡಂತಾಗುತ್ತದೆ ಎಂದರು.

ಜಾಗೃತಿ ಅಗತ್ಯ
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಎಚ್‌ ಐವಿ ಸೋಂಕು ಸೊನ್ನೆಗೆ ತರುವ ತನಕ
ನಾವು ವಿಶ್ರಮಿಸಬಾರದು. ಹೀಗಾಗಿ ವಿದ್ಯಾರ್ಥಿ ನೆಲೆಯಲ್ಲಿ ಜಾಗೃತಿ ಮೂಡಬೇಕು. ಸೋಂಕು ಆಗದಂತೆ ನಾವು ನೋಡಿಕೊಳ್ಳಬೇಕು ಎಂದರು. ಪ್ರಮುಖರಾದ ಬಸ್ತಿ ಪುರುಷೋತ್ತಮ ಶೆಣೈ, ಕೆ.ವಿ. ಮಾಲಿನಿ, ದೇಜಮ್ಮ, ಸಬಿತಾ ಶೆಟ್ಟಿ, ಡಾ| ಬದ್ರುದ್ದೀನ್‌ ಉಪಸ್ಥಿತರಿದ್ದರು.

ಮನಸ್ಥಿತಿ ಬದಲಾಗಲಿ
ನನ್ನ ಮನೆಯವರಿಗೆ ನೋವಾದರೆ ಮಾತ್ರ ನೋವು ಎಂಬ ಸ್ಥಿತಿ ಅಥವಾ ನನ್ನ ಸ್ನೇಹಿತನಿಗೆ ನೋವಾದರೆ ಮಾತ್ರ ನೋವು ಎಂದು ಪರಿಗಣಿಸುವ ಸ್ವಾರ್ಥ ಮನೋಸ್ಥಿತಿ ನಮ್ಮಲ್ಲಿ ಬದಲಾಗಬೇಕು. ಸಮಾಜದಲ್ಲಿ ಆಗುವ ಪ್ರತೀ ಘಟನೆಯೂ ತನಗೆ ಸಂಬಂಧ ಇದೆ ಎಂಬ ಅರಿವು ಮೂಡಿರಬೇಕು. ಎಲ್ಲೋ ಇರುವ ಏಡ್ಸ್‌ ಬಗ್ಗೆ ನಾವು ಯಾಕೆ ಚಿಂತಿಸಬೇಕು ಎಂದು ಯೋಚಿಸುವ ಬದಲು, ನಾವು ಆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬಹುದಲ್ಲವೇ ಎಂಬ ಯೋಚನೆ ಮೂಡಿದರೆ ಉತ್ತಮ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next