Advertisement

ಜಿಲ್ಲಾ ಮಟ್ಟದ ಪುರುಷರ ಮುಕ್ತ  ಕಬಡ್ಡಿ 

02:26 PM Nov 20, 2017 | Team Udayavani |

ಪುತ್ತೂರು: ಪಟ್ನೂರು ಶ್ರೀ ರಾಮ್‌ ಫ್ರೆಂಡ್ಸ್‌ ಆಶ್ರಯದಲ್ಲಿ ಪುತ್ತೂರು ತಾಲೂಕು ಕಬಡ್ಡಿ ಅಮೆಚ್ಚಾರ್‌ ಅಸೋಸಿಯೇಶನ್‌ ಸಹಕಾರದೊಂದಿಗೆ ಪ್ರೊ. ಮಾದರಿಯಲ್ಲಿ ಹಿಂದೂ ಬಾಂಧವರ ಜಿಲ್ಲಾ ಮಟ್ಟದ ಪುರುಷರ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ರವಿವಾರ ಪಟ್ನೂರು ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯಿತು.

Advertisement

ಶ್ರೀ ರಾಮಚಂದ್ರಾಪುರ ಮಾಣಿ ಶಾಖಾ ಮಠದ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಭಟ್‌ ಹಾರಕರೆ ಉದ್ಘಾಟಿಸಿ, ಕಬಡ್ಡಿ ಪಂದ್ಯಾಟ ಒಗ್ಗಟ್ಟಿನ ಸಂಕೇತ. ಎಲ್ಲ ಆಟಗಾರರೂ ಒಗ್ಗಟ್ಟಿನಿಂದ ಪ್ರದರ್ಶನ ನೀಡಿದರೆ ಮಾತ್ರ ಜಯ ಸಾ ಧಿಸಬಹುದು. ಕಬಡ್ಡಿ ಪಂದ್ಯಾಟದಲ್ಲಿ ಶಕ್ತಿ, ಯುಕ್ತಿ, ಜಾಣ್ಮೆ, ತಂತ್ರಗಾರಿಕೆ ಇದ್ದಾಗ ಮಾತ್ರ ಗೆಲುವು ಸಾಧ್ಯ. ಇಂತಹ ಒಗ್ಗಟ್ಟು ಪ್ರದರ್ಶನದ ಕ್ರೀಡೆ ಮೂಲಕ ಬಲಿಷ್ಠ ಹಿಂದೂ ಸಮಾಜದ ಸಂಘಟನೆಗೂ ಪೂರಕವಾಗಲಿ ಎಂದು ತಿಳಿಸಿದರು.

ಸಂಘಟನೆ ಸಮಾಜದ ಶಕ್ತಿ
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ನಾಗೇಶ ಶರ್ಮ ಮಾತನಾಡಿ, ಕಲಿಯಗದಲ್ಲಿ ಸಂಘಟನೆ ಸಮಾಜದ ಶಕ್ತಿ. ಕಬಡ್ಡಿ ಕ್ರೀಡೆ ಮೂಲಕ ಹಿಂದೂ ಸಮಾಜದ ಸಂಘಟನೆಗೆ ಸ್ಫೂರ್ತಿ ದೊರೆಯುತ್ತಿದೆ. ಈ ಭಾಗದ ಯುವಕರ ಉತ್ಸಾಹ, ಹುಮ್ಮಸ್ಸು ಸಂಘಟನೆಗೆ ನಿರಂತರವಾಗಿರಲಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಟ್ನೂರು ಒಕ್ಕೂಟದ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಜೆ, ಪಡ್ಡಾಯೂರು ಓಂ ಫ್ರೆಂಡ್ಸ್‌ನ ಅಧ್ಯಕ್ಷ ಗಣೇಶ್‌ ಪಡ್ಡಾಯೂರು ಮಾತನಾಡಿದರು.

ಪಟ್ನೂರು ಹಿ.ಪ್ರಾ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ, ಪಟ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್‌ ಬೇರಿಕೆ, ಯರ್ಮುಂಜ ಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಗಣೇಶ್‌ ಪಳ್ಳ, ಬೇರಿಕೆ ಆ ಶಕ್ತಿ ಭಜನ ಮಂದಿರದ ಅಧ್ಯಕ್ಷ ಯಾದವ ಬೇರಿಕೆ, ಕುಂಜಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಆಟಿಕ್ಕು, ಶಿಶಿರ್‌ ಪೆರ್ವೋಡಿ, ಸನ್ನಿ  ಅಸೋಸಿಯೇಟ್ಸ್‌ನ ತಮ್ಮಣ್ಣ ರೈ ಮೊಟ್ಟೆತಡ್ಕ ಉಪಸ್ಥಿತರಿದ್ದರು.

Advertisement

ಸಭಾ ಕಾರ್ಯಕ್ರಮಕ್ಕೆ ಮೊದಲು ಮುರ ಜಂಕ್ಷನ್‌ನಿಂದ ಕ್ರೀಡಾಂಗಣದವರೆಗೆ ಪಂದ್ಯಾಟದ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಟ್ರೋಫಿಯ ಮೆರವಣಿಗೆ ನಡೆಯಿತು. ಮುರ ಜಂಕ್ಷನ್‌ನಿಂದ ಹೊರಟು ಯರ್ಮುಂಜ, ಪಳ್ಳ ರಸ್ತೆಯಾಗಿ ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ನೂರಾರು ಬೈಕ್‌ ಸವಾರರು, ವಿವಿಧ ವಾಹನಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next