Advertisement

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: DC

05:00 PM Oct 22, 2024 | Team Udayavani |

ಉಡುಪಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಪ್ರಯುಕ್ತ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಜತ ಕ್ರೀಡಾ ಸಂಭ್ರಮ – 2024 ಮಂಗಳವಾರ ನಡೆಯಿತು.

Advertisement

ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಮಾತನಾಡಿ, ಬೆಳಗ್ಗೆ ಎದ್ದು ಪತ್ರಿಕೆ ನೋಡುವಾಗ ಅದರ ಹಿನ್ನೆಲೆಯಲ್ಲಿ ಕೆಲಸ ಎಷ್ಟಿರುತ್ತೆ ಎಂದು ತಿಳಿಯುತ್ತದೆ. ಇಂದು ಪತ್ರಿಕೆ ಉದ್ಯಮವಾಗಿ ಬೆಳೆದಿದೆ. ಸುದ್ದಿಯನ್ನು ಸ್ಪರ್ಧಾತ್ಮಕವಾಗಿ ನೀಡುವ ಒತ್ತಡ ಇದೆ. ಸಂಗ್ರಹಿಸಿದ ಸುದ್ದಿಯನ್ನು ಮಾಹಿತಿ ರೂಪದಲ್ಲಿ ಹೊರ ಹಾಕುವುದು ಅಗತ್ಯ. ಒತ್ತಡದ ನಡುವೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಇದರಿಂದ ನೆಮ್ಮದಿ ಸಿಗಲು ಸಾಧ್ಯವಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಕ್ರಿಯಾಶೀಲ ಪತ್ರಕರ್ತರ ತಂಡವಿದೆ. ಅನೇಕ ಪತ್ರಿಕೆಗಳೂ ಇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಇಲ್ಲಿಯ ತಂಡ ಕ್ರಿಯಾಶೀಲವಾಗಿದೆ. ನಿರ್ಭೀತವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ ಎಂದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಮಾತನಾಡಿ, ಸಾಕಷ್ಟು ಪರಿಶ್ರಮದಿಂದ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.

ಪತ್ರಿಕೋದ್ಯಮ ಪ್ರಭಾವಿ ಮಾಧ್ಯಮವಾಗಿದೆ. ಜನರು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಕರ್ತರು ದಿನದ 30 ನಿಮಿಷಗಳನ್ನು ಕ್ರೀಡಾಚಟುವಟಿಕೆಗಳಿಗೆ ಮೀಸಲಿಡಬೇಕು ಎಂದರು. ಜಿಲ್ಲಾ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಹರಿಪ್ರಸಾದ್‌ ರೈ, ನಗರಸಭೆಯ ಪೌರಾಯುಕ್ತ ರಾಯಪ್ಪ, ಮಾಹೆಯ ಕ್ರೀಡಾ ವಿಭಾಗದ ಕಾರ್ಯದರ್ಶಿ ವಿನೋದ್‌ ನಾಯಕ್‌, ಉದ್ಯಮಿ ಆನಂದ ಕುಂದರ್‌, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ನಿವೃತ್ತಿ ಹೊಂದಲಿರುವ ಪೌರಾಯುಕ್ತ ರಾಯಪ್ಪ ಅವರನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಕಿರಣ್‌ ಮಂಜನಬೈಲು, ಅರುಣ್‌ ಕುಮಾರ್‌ ಶಿರೂರು, ರಾಜು ಖಾರ್ವಿ ಕೊಡೇರಿ, ಶರೀಫ್ ಉಪಸ್ಥಿತರಿದ್ದರು. ನಝೀರ್‌ ಪೊಲ್ಯ ಸ್ವಾಗತಿಸಿದರು. ಉಮೇಶ್‌ ಮಾರ್ಪಳ್ಳಿ ವಂದಿಸಿದರು. ರಾಜೇಶ್‌ ಕೆ.ಸಿ.ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next