Advertisement

ಜಿಲ್ಲಾ ಗೃಹರಕ್ಷಕ ದಳ: ವಾರ್ಷಿಕ ತರಬೇತಿ ಶಿಬಿರ ಉದ್ಘಾಟನೆ 

02:30 PM Apr 18, 2018 | |

ನಂತೂರು: ಜಿಲ್ಲಾ ಗೃಹರಕ್ಷಕ ದಳಕ್ಕೆ ಹೊಸದಾಗಿ ನೋಂದಾಯಿತರಾದ ಗೃಹರಕ್ಷಕರಿಗೆ ಎ. 22ರ ವರೆಗೆ ನಡೆಯುವ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನೆಯು ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಇತ್ತೀಚೆಗೆ ಜರಗಿತು. ಮನಪಾ ಆಯುಕ್ತ ಮಹಮದ್‌ ನಝೀರ್‌ ಉದ್ಘಾಟಿಸಿ, ಗೃಹರಕ್ಷಕರು ಚುನಾವಣೆ ಕರ್ತವ್ಯದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. 10 ದಿನಗಳ ತರಬೇತಿ ಪಡೆದುಕೊಂಡು ಸರಕಾರ ಹಾಗೂ ಸಮಾಜದ ಜತೆಗೆ ಇರಬೇಕು ಎಂದರು.

Advertisement

ಭಾರತೀ ಸಮೂಹ ಸಂಸ್ಥೆ ಪ್ರಾಂಶುಪಾಲ ಡಾ| ಈಶ್ವರ ಪ್ರಸಾದ್‌ ಮಾತನಾಡಿ, ಗೃಹರಕ್ಷಕ ದಳ ಪೊಲೀಸ್‌ ಇಲಾಖೆಗೆ ಪರ್ಯಾಯವಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಾಲೆಂಟರಿ ಸಂಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್‌ ಚೂಂತಾರು ಮಾತನಾಡಿ, ಈ ತರಬೇತಿಯಲ್ಲಿ ಲಾಠಿಡ್ರಿಲ್‌, ಮಾರ್ಚ್‌ ಫಾಸ್ಟ್‌, ಫೈರ್‌ ಫೈಟಿಂಗ್‌, ವೈರ್‌ಲೆಸ್‌ ತರಬೇತಿ ನೀಡಲಾಗುತ್ತಿದೆ. ಗೃಹರಕ್ಷಕರಿಗೆ ನೀಡುವ ಗೌರವಧನ 325 ರೂ.ಗಳಿಂದ 380 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಎಲ್ಲ ಗೃಹರಕ್ಷಕರು ಈ ತರಬೇತಿಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಉಪ ಸಮಾದೇಷ್ಟ ರಮೇಶ್‌ ಸ್ವಾಗತಿಸಿದರು. ನಗರ ಘಟಕಾಧಿಕಾರಿ ಮಾರ್ಕ್‌ಶೇರಾ ವಂದಿಸಿದರು. ರಮೇಶ್‌ ಭಂಡಾರಿ ನಿರೂಪಿಸಿದರು. ಜಿಲ್ಲಾ ಗೃಹರಕ್ಷಕ ದಳ ಅಧೀಕ್ಷಕ ರತ್ನಾಕರ, ತರಬೇತಿದಾರ ಶ್ರೀಧರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next