Advertisement

ಸಿಆರ್‌ಝಡ್‌ ಮರಳುಗಾರಿಕೆ; ಜಿಲ್ಲಾ ನಿಯೋಗ ಕೇಂದ್ರ ಸಚಿವರ ಭೇಟಿ

09:04 AM Nov 15, 2018 | Team Udayavani |

ಉಡುಪಿ: ಸಿಆರ್‌ಝಡ್‌ ವ್ಯಾಪ್ತಿಯ ಮರಳುಗಾರಿಕೆ ಕುರಿತು ಜಿಲ್ಲಾಡಳಿತವು ರಾಜ್ಯ ಸರಕಾರದ ಮೂಲಕ ಎಸೆದ ಚೆಂಡು ಈಗ ಮತ್ತೆ ಜಿಲ್ಲಾಡಳಿತದ ಅಂಗಣಕ್ಕೆ ಮರಳಲಿದೆ. ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ 2011ರ ಮೊದಲು ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಮಾತ್ರ ಮರಳುಗಾರಿಕೆ ನಡೆಸಲು ಅವಕಾಶ ಕೊಡಬೇಕೋ? ಅನಂತರದವರಿಗೂ ಕೊಡಬಹುದೋ? ಸಾಂಪ್ರದಾಯಿಕ ಮರಳು ತೆಗೆಯುವವರನ್ನು ಗುರುತಿಸುವುದು ಹೇಗೆ ಎಂಬ ಕುರಿತು ಸ್ಪಷ್ಟನೆ ಕೋರಿ ಪತ್ರ ಬರೆದಿದ್ದರು. ಬುಧವಾರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಡಾ| ಹರ್ಷವರ್ಧನರನ್ನು ಭೇಟಿ ಮಾಡಿದ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿದರು. 

Advertisement


ಡಾ| ಹರ್ಷವರ್ಧನ್‌ ಅವರು ಇಲಾಖೆಯ ಜಂಟಿ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌, ಶಾ ಅವರನ್ನು ಕರೆಸಿ ಚರ್ಚಿಸಿದರು. ಇಂತಹ ನಿರ್ಧಾರಗಳನ್ನು ರಾಜ್ಯ ಸರಕಾರವೇ ಕೈಗೊಳ್ಳಬೇಕು. 2011ರ ಅನಂತರದ ಸಾಂಪ್ರದಾಯಿಕ ಮರಳು ತೆಗೆಯುವವರಿಗೂ ಕೊಡಬಹುದು ಎಂದು ರಾಜ್ಯ ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಬಗ್ಗೆ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಶಾಸಕ ಕೆ.ರಘುಪತಿ ಭಟ್‌ ಅವರು ಹೇಳಿದ್ದಾರೆ. ಸಚಿವರೊಂದಿಗಿನ ಮಾತುಕತೆ ವೇಳೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆಯ ವಿಪಕ್ಷ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್‌, ಶಾಸಕರಾದ ಲಾಲಾಜಿ ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next