ಸಿಂಧನೂರು: ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಕ್ರಿಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಪ್ಪ ಮೂರ್ತಿ ಅವರಿಗೆ ಸೋಮವಾರ ಜಿಲ್ಲಾಡಳಿತ ಪ್ರಶಂಸನಾ ಪತ್ರ ನೀಡಿ, ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದೆ.
ಜಿಲ್ಲಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ, ಪೌರಾಯುಕ್ತರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕೋವಿಡ್-19 ತಡೆಗಟ್ಟಲು ಜೀವದ ಹಂಗು ತೊರೆದು ಸಾರ್ವಜನಿಕರು ಹಾಗೂ ಸೋಂಕಿತರ ಆರೈಕೆ, ಆರೋಗ್ಯದ ಹಿತಕ್ಕಾಗಿ ಹಗಲಿರಳು ಶ್ರಮಿಸಿದ ನೌಕರರ ಸೇವೆ ಅನನ್ಯವಾಗಿದ್ದು, ಯುದೊœàಪಾದಿಯಲ್ಲಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಪೌರಾಯುಕ್ತರು ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ಲಾಠಿ ಹಿಡಿದು ರಸ್ತೆಯಲ್ಲಿ ಗಸ್ತು ತಿರುಗುವ ಮೂಲಕ ಜನರನ್ನು ಎಚ್ಚರಿಸಿ ಗಮನ ಸೆಳೆದಿದ್ದರು.
ಜಿಲ್ಲಾಡಳಿತದಿಂದ ಪ್ರಶಸ್ತಿ ಪತ್ರ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅವರು ಆಡಳಿತಮಂಡಳಿ ಪರವಾಗಿ ಸೋಮವಾರ ಪೌರಾಯುಕ್ತರನ್ನು ಸನ್ಮಾನಿಸಿದರು. ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಚಂದ್ರಶೇಖರ ಮೈಲಾರ್, ಕೆ.ಶೇಖರಪ್ಪ, ಕೆ.ಜಿಲಾನಿಪಾಷಾ, ಆಲಂಬಾಷಾ, ವೀರೇಶ ಹಟ್ಟಿ, ಮುನೀರ್‌ಪಾಷಾ, ಮುಖಂಡರಾದ ಸುರೇಶ್ ಜಾಧವ್, ನಿರುಪಾದೆಪ್ಪ ಇದ್ದರು.