Advertisement

Udupi ರಾಜ್ಯ ಸರಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ

10:03 PM Jul 22, 2023 | Team Udayavani |

ಉಡುಪಿ : ಯಾರದ್ದೋ ಒತ್ತಡಕ್ಕೆ ಮಣಿದು ಬಿಜೆಪಿ ಶಾಸಕರನ್ನು ಅಮಾನತ್ತು ಗೊಳಿಸುವ ಮೂಲಕ ಕಾಂಗ್ರೆಸ್‌ ಸರಕಾರವು ವಿಧಾನಸಭೆಯ ಸಭಾಧ್ಯಕ್ಷರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಆರೋಪಿಸಿದರು.

Advertisement

ರಾಜ್ಯ ಸರಕಾರದ ವಿವಿಧ ನಿಲುವು ವಿರೋಧಿಸಿ ಶನಿವಾರ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಮಾತನಾಡಿ, ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆ ತುಂಬ ದಿನ ನಡೆಯುವುದಿಲ್ಲ. ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ, ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ ಸರಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬಜರಂಗದಳದ ಕಾರ್ಯಕರ್ತರನ್ನು ಗಡಿಪಾರು ಮಾಡುವುದನ್ನು ಖಂಡಿಸುತ್ತೇವೆ ಮತ್ತು ಇದರ ವಿರುದ್ಧ ಮುಂದೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಮೊದಲಾದವರು ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರ ಸರಣಿ ಆತ್ಮಹತ್ಯೆಯ ಜತೆಗೆ ಬೆಲೆ ಏರಿಕೆಯಾಗುತ್ತಿದೆ.

Advertisement

ಬೆಂಗಳೂರಿನಲ್ಲಿ ಬಂಧಿತ ಶಂಕಿತ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಸಂಪೂರ್ಣ ತನಿಖೆಗೆ ಎನ್‌ಐಎಗೆ ವರ್ಗಾಯಿಸಬೇಕು. ಸರಕಾರದಲ್ಲಿ ವರ್ಗಾವಣೆ ದಂದೆ ಹೆಚ್ಚಾಗುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರನ್ನು ಅಮಾನತ್ತು ಮಾಡುವ ಮೂಲಕ ಪ್ರಜಾಪ್ರಭುತ್ವದ ವಿರೋಧಿ ನಿಲುವನ್ನು ಕಾಂಗ್ರೆಸ್‌ ಅನುಸರಿಸಿದೆ ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿ ಪ್ರಮುಖರಾದ ಕುತ್ಯಾರು ನವೀನ್‌ ಶೆಟ್ಟಿ, ಮನೋರ್‌ ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಉಮೇಶ್‌ ನಾಯಕ್‌, ಶ್ಯಾಮಲಾ ಕುಂದರ್‌, ದಿನಕರ ಬಾಬು, ಗೀತಾಂಜಲಿ ಸುವರ್ಣ, ಸುಪ್ರಸಾದ್‌ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಸಲೀಂ ಅಂಬಾಗಿಲು, ವೀಣಾ ಶೆಟ್ಟಿ, ಸುಮಿತ್ರಾ ಆರ್‌. ನಾಯಕ್‌, ನಳಿನಿ ಪ್ರದೀಪ್‌ ರಾವ್‌, ವಿಖ್ಯಾತ್‌ ಶೆಟ್ಟಿ, ಶಿವಕುಮಾರ್‌ ಅಂಬಲಪಾಡಿ, ಗಿರೀಶ್‌ ಅಂಚನ್‌, ಪ್ರತಾಪ್‌ ಶೆಟ್ಟಿ ಚೇರ್ಕಾಡಿ, ರಾಘವೇಂದ್ರ ಉಪ್ಪೂರು, ಶ್ರೀನಿಧಿ ಹೆಗ್ಡೆ, ನಿತ್ಯಾನಂದ ನಾಯ್ಕ, ಪ್ರವೀಣ್‌ ಕುಮಾರ್‌ ಶೆಟ್ಟಿ ಕಪ್ಪೆಟ್ಟು, ಸತೀಶ್‌ ಕುಲಾಲ್‌, ಧೀರಜ್‌ ಎಸ್‌.ಕೆ., ಸತ್ಯಾನಂದ ನಾಯಕ್‌, ದಾವುದ್‌ ಅಬುಬಕ್ಕರ್‌, ಅಕ್ಷಿತ್‌ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಜಗದೀಶ್‌ ಆಚಾರ್ಯ ಕಪ್ಪೆಟ್ಟು, ಪೂರ್ಣಿಮಾ ರತ್ನಾಕರ್‌, ರಶ್ಮಿತಾ ಬಾಲಕೃಷ್ಣ, ರೋಷನ್‌ ಶೆಟ್ಟಿ, ಗೋಪಾಲ್‌ ಕಾಂಚನ್‌, ಗೋಪಾಲ ಕೃಷ್ಣ ರಾವ್‌, ಆಸಿಫ್ ಕಟಪಾಡಿ, ಅಭಿರಾಜ್‌ ಸುವರ್ಣ, ಪ್ರೀತಿ, ದಯಾಶಿನಿ, ಅಕ್ಷಯ್‌ ಶೆಟ್ಟಿ, ಯೋಗೀಶ್‌ ಶೆಟ್ಟಿ ಸಹಿತ ನಗರಸಭೆ ಸದಸ್ಯರು, ಗ್ರಾ.ಪಂ. ಸದಸ್ಯರು, ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next