Advertisement

712 ಫ‌ಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

10:36 AM Mar 17, 2018 | |

ಪುರಭವನ : ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನ ಕೋಶದ ವಿವಿಧ ಯೋಜನೆಗಳಡಿ 712 ಫ‌ಲಾನುಭವಿಗಳಿಗೆ ಇಲ್ಲಿ ಶುಕ್ರವಾರ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

Advertisement

ಶೇ. 24.10ರ ಮೀಸಲು ನಿಧಿ ಅನುದಾನದಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 14 ಫ‌ಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಶೌಚಾಲಯ ನಿರ್ಮಾಣ, ಸ್ವಯಂ ಉದ್ಯೋಗ ಹಾಗೂ ಶಸ್ತ್ರಚಿಕಿತ್ಸೆಗೆ 5.28 ಲಕ್ಷ ರೂ. ಹಸ್ತಾಂತರಿಸಲಾಯಿತು. ಶೇ. 7.25 ಮೀಸಲು ನಿಧಿಯಡಿ ಇತರ ಬಡ ವರ್ಗದ 18 ಮಂದಿಗೆ ಒಟ್ಟು 4.38 ಲಕ್ಷ ರೂ., ಹಾಗೂ ಶೇ. 3ರ ಮೀಸಲು ನಿಧಿಯಡಿ 634 ವಿಕಲ ಚೇತನರಿಗೆ ತಿಂಗಳಿಗೆ 500 ರೂ.ನಂತೆ ಒಟ್ಟು 38 ಲಕ್ಷ ರೂ. ಪೋಷಣೆ ಭತ್ತೆ ಸೇರಿ 712 ಫಲಾನುಭವಿಗಳಿಗೆ ಒಟ್ಟು 51.35 ಲಕ್ಷ ರೂ. ಗಳನ್ನು ಹಸ್ತಾಂತರಿಸಲಾಯಿತು.

ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಮಂಗಳೂರು ಪಾಲಿಕೆಯು ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರಕಾರದ ಯೋಜನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ತಲುಪಿಸುವ ಕೆಲಸವಾಗುತ್ತಿದೆ. ಜನಪ್ರತಿನಿಧಿಗಳ ಜತೆ ಅಧಿಕಾರಿಗಳ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದರು.

ಮೇಯರ್‌ ಭಾಸ್ಕರ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಮಾತನಾಡಿದರು. ಮನಪಾ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಸ್ವಾಗತಿಸಿದರು. ಮನಪಾ ಉಪ ಆಯುಕ್ತ (ಆಡಳಿತ) ಗೋಕುಲ್‌ದಾಸ್‌ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಜೆಸಿಂತಾ ಡಿ’ಸೋಜಾ, ಸಬಿತಾ ಮಿಸ್ಕಿತ್‌, ಪ್ರವೀಣ್‌ ಚಂದ್ರ ಆಳ್ವ, ಲತಾ ಸಾಲ್ಯಾನ್‌, ಅಪ್ಪಿ, ಕವಿತಾ ವಾಸು, ಶೈಲಜಾ, ಲತೀಫ್, ರಜನೀಶ್‌, ಪ್ರಕಾಶ್‌, ಆಯುಕ್ತ ಮೊಹಮ್ಮದ್‌ ನಝೀರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next