Advertisement

ಕೊಳವೆಬಾವಿ ಸಲಕರಣೆಗಳ ವಿತರಣೆ

06:49 AM Jan 06, 2019 | Team Udayavani |

ಕೆಂಗೇರಿ: ಪರಿಶಿಷ್ಟ ಜಾತಿಯ 24 ಅರ್ಹ ಫ‌ಲಾನುಭವಿ ರೈತರಿಗೆ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಲಕರಣೆಗಳನ್ನು ವಿತರಿಸಿದರು.

Advertisement

ಚುಂಚನಗುಪ್ಪೆ ಗ್ರಾಮ ಪಂಚಾಯಿತಿಯ ದೊಡ್ಡ ಆಲದಮರದ ಬಳಿ ಡಾ.ಬಿ.ಆರ್‌.ಅಂಬೇಡ್ಕರ್‌ ಅಬಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಕೋಲೂರು, ಸೂಲಿವಾರ, ಗಣಪತಿಹಳ್ಳಿ, ಕೇತೋಹಳ್ಳಿ, ಕುರುಬರಹಳ್ಳಿ ಹಾಗೂ ಚುಂಚನಗುಪ್ಪೆ ರೈತರಿಗೆ 15 ಎಚ್‌ಪಿ ಮೋಟಾರ್‌, ಪೈಪುಗಳು, ಪ್ಯಾನಲ್‌ ಬೋರ್ಡ್‌, ಯುಜಿ ಕೇಬಲ್‌ಗ‌ಳು ಸೇರಿದಂತೆ ಸುಮಾರು 4 ಲಕ್ಷ ರೂ. ಮೌಲ್ಯದ ಕೊಳವೆಬಾವಿ ಸಲಕರಣೆ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರ್‌, ರೈತರ ಸ್ವಾವಲಂಬನೆ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕ್ಷೇತ್ರದ ಎಲ್ಲಾ 17 ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಹಂತ ಹಂತವಾಗಿ ಬೋರ್‌ವೆಲ್‌ ಸಲಕರಣೆ ವಿತರಿಸಲಾಗುವುದು. ಅರ್ಹ ಪಲಾನುಭವಿ ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

ಅಂಬೇಡ್ಕರ್‌ ಅಬಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾಬಲೇಶ್ವರ ಹೆಗಡೆ, ತಾಲೂಕು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ತಾ.ಪಂ ಸದಸ್ಯೆ ಚೈತ್ರಾ, ಗಂಗರೇವಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next