Advertisement

ಶ್ರೀರಾಮ ದೇವರಿಗೆ ವಿಶೇಷ ಪೂಜೆ, ದಿನೋಪಯೋಗಿ ವಸ್ತುಗಳ ವಿತರಣೆ

01:57 PM Aug 21, 2021 | Team Udayavani |

ಪುಣೆ: ಪಿಂಪ್ರಿ-ಚಿಂಚ್ವಾಡ್‌ ಬಿಲ್ಲವ ಸಂಘ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಮಂದಿರದ ಸಭಾಂಗಣದಲ್ಲಿ ನಡೆಯಿತು.

Advertisement

ಸಮಿತಿಯ ಪ್ರಧಾನ ಅರ್ಚಕ ಶ್ರೀಧರ್‌ ಗುರುವ ಪೂಜಾರಿ ಅವರು ಶ್ರೀರಾಮ ದೇವರಿಗೆ ಮತ್ತು ನಾರಾಯಣಗುರುಗಳಿಗೆ ಭಕ್ತವೃಂದದ ಪರವಾಗಿ ವಿಶೇಷ ಪೂಜೆ ಮತ್ತು ಮಂಗಳಾರತಿ ನೆರವೇರಿಸಿದರು. ಇದೇ ಸಂದರ್ಭ ಮಹಾಮಾರಿ ಕೋವಿಡ್‌ ಸೋಂಕು ದೂರವಾಗಿ ಜನರು ಭಯ ಮುಕ್ತಗೊಂಡು ಬದುಕು ಸಾಗಿಸಲಿ ಎಂದು ಪ್ರಾರ್ಥಿಸಲಾಯಿತು. ಬಳಿಕ ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಬಂಧಿತ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಸಂಘದ ವತಿಯಿಂದ ಆಹಾರ ಧಾನ್ಯ ಹಾಗೂ ದಿನೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.

ಸಮಿತಿಯ ಅಧ್ಯಕ್ಷ ಶರತ್‌ ಕೋಟ್ಯಾನ್‌ ಮಾತನಾಡಿ, ಸಂಘವು ಕಷ್ಟಕಾಲದಲ್ಲಿ ಸಮಾಜ ಬಾಂಧವರಿಗೆ ಸಹಕರಿಸುತ್ತಿದ್ದು, ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸಿದ ಅದೆಷ್ಟೋ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ ಆತ್ಮತೃಪ್ತಿ ನಮಗಿದೆ. ಈ ಮಾನವೀಯ ಸೇವೆ ನಡೆಯುವಲ್ಲಿ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದ್ದಾರೆ. ಅವರೆಲ್ಲರಿಗೂ ಸಂಸ್ಥೆಯ ವತಿಯಿಂದ ಕೃತಜ್ಞತೆಗಳು. ಕಷ್ಟದಲ್ಲಿರುವವರಿಗೆ ನಮ್ಮ ಸೇವೆ ನಿರಂತರವಾಗಿರಲಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಇದನ್ನೂ ಓದಿ:ಪುನೀತ್‌ ವರ್ಕೌಟ್ ವಿಡಿಯೋಗೆ ಫ್ಯಾನ್ಸ್‌ ಫಿದಾ

ಮಾನವೀಯ ನೆಲೆಯಲ್ಲಿ ಸಹಕರಿಸಿದ ಸಂಸ್ಥೆಯ ಉಪಾಧ್ಯಕ್ಷೆ ಗೌರಿ ಸಾಲ್ಯಾನ್‌, ಮೀನಾಕ್ಷಿ ಪೂಜಾರಿ, ಸತೀಶ್‌ ಪೂಜಾರಿ, ಶ್ರೀಧರ ಪೂಜಾರಿ, ರವೀಂದ್ರ ಜತ್ತನ್‌, ಶೇಖರ್‌ ಜತ್ತನ್‌, ಶರತ್‌ ಕೋಟ್ಯಾನ್‌, ಪ್ರವೀಣ್‌ ಅಂಚನ್‌, ಸ್ಥಳೀಯ ಸಮಾಜ ಸೇವಕ, ಶ್ರೀರಾಮ ದೇವರ ಭಕ್ತ ಕೈಲಾಶ್‌ ಕದಂ ಅವರನ್ನು ದೇವರ ಪ್ರಸಾದವನ್ನಿತ್ತು ಗೌರವಿಸಲಾಯಿತು. ಸಮಿತಿಯ ಗೌರವ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಅಂಚನ್‌ ಹಾಗೂ ಕೋಶಾಧಿಕಾರಿ ಶೇಖರ್‌ ಜತ್ತನ್‌, ಸಂಘದ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಆ. 23ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
ಪಿಂಪ್ರಿ-ಬಿಲ್ಲವ ಸಂಘ, ನಾರಾಯಣಗುರು ಸೇವಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾ ಯಣಗುರು ಜಯಂತಿ ಆಚರಣೆಯು ಆ. 23ರಂದು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜರಗಲಿದೆ. ಇದೇ ಸಂದರ್ಭದಲ್ಲಿ ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ,ಆಹಾರ ಧಾನ್ಯಗಳ ವಿತರಣೆ, ಸಮಾಜದ ಪ್ರತಿಭಾನ್ವಿತ ವಿಧ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಾಂಧವರು ಪಾಲ್ಗೊಂಡು ಸಹಕರಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next