Advertisement

ರೈತರಿಗೆ ಬಿತ್ತನೆ ಬೀಜ ವಿತರಣೆ

05:31 AM Jun 05, 2020 | Lakshmi GovindaRaj |

ಗುಂಡ್ಲುಪೇಟೆ: ತಾಲೂಕಿನ 6 ಗ್ರಾಮಗಳ 285 ವಲಸೆ ಕುಟುಂಬಗಳ ರೈತರಿಗೆ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿಂದ  ಉಚಿತ ಬಿತ್ತನೆ ಬೀಜ ಹಾಗೂ 500 ಮಕ್ಕಳಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಸಂರಕ್ಷಣಾ ಸಾಮಗ್ರಿಗಳನ್ನು  ವಿತರಿಸಲಾಯಿತು.

Advertisement

ತಾಲೂಕಿನ ಕೂತನೂರು ಗ್ರಾಮ ದಲ್ಲಿ ತಾಪಂ ಇಒ ಕುಲದೀಪ್‌ ವಲಸೆ ಕಾರ್ಮಿಕರ ಕುಟುಂಬದ ಮುಖ್ಯಸ್ಥರಿಗೆ ಕಿಟ್‌ ವಿತರಿಸಿದರು. ಕಿಟ್‌ನಲ್ಲಿ ಶೈಕ್ಷಣಿಕ ಸಾಮಗ್ರಿ ಗಳಾದ ಕೆ.ಜಿ.ಶೀಟ್‌, ಕ್ರಯಾನ್ಸ್‌, ಕಲರ್‌ ಶೀಟ್‌, ಫೇವಿಕಲ್‌,  ಪೆನ್ಸಿಲ್‌, ರಬ್ಬರ್‌, ಶಾರ್ಪನರ್‌, ನೋಟ್‌ ಪುಸ್ತಕ, ಮಗ್ಗಿ ಪುಸ್ತಕ, ಪೌಚ್‌, ಸ್ಕೆಚ್‌, ಟೂತ್‌ಬ್ರಶ್‌, ಪೇಸ್ಟ್‌, ನೈಲ್‌ ಕಟ್ಟರ್‌, ನೀರಿನ ಬಾಟಲ್‌, ಸ್ಯಾನಿಟೈಸರ್‌, ಸೋಪ್‌, ಸ್ವೀಟ್‌, ಬಿಸ್ಕೆಟ್‌, ಮಾಸ್ಕ್, ಬಟ್ಟೆ  ಬ್ಯಾಗ್‌, ಕತ್ತರಿ ಹಾಗೂ ರೈತರಿಗೆ 4  ಕೆ.ಜಿ.ಮುಸಿಕನ ಜೋಳ, 1 ಕೆ.ಜಿ. ಬಿನ್ಸ್‌, 1 ಕೆ.ಜಿ. ಅವರೆ, 1 ಕೆ.ಜಿ. ಹಲಸಂದೆ, ಮತ್ತು 300 ಗ್ರಾಂ ಬೀಟ್‌ರೋಟ್‌ ಬಿತ್ತನೆ ಬೀಜಗಳನ್ನು ನೀಡಲಾಯಿತು.

ಈ ವೇಳೆ ಬಿಸಿಯೂಟ ಬಿಆರ್‌ಸಿ ಸತೀಶ್‌, ಕಾರ್ಯಕ್ರಮದ ಸಹಾಯಕ ನಿರ್ದೇಶಕ  ಮಂಜಣ್ಣ, ಸತೀಶ್‌, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯಸಂಸ್ಥೆಯ ನಿರ್ದೇಶಕಿ ಸರಸ್ವತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next