Advertisement

ಒಂದೇ ದಿನ ಆರು ಸಾವಿರ ಲಸಿಕೆ ವಿತರಣೆ

03:29 PM Aug 29, 2021 | Team Udayavani |

ಹರಿಹರ: ತಾಲೂಕಿನ ವಿವಿಧೆಡೆ ಕೈಗೊಂಡ ಬೃಹತ್‌ಲಸಿಕಾ ಮೇಳದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಒಟ್ಟು 6000ಕ್ಕೂ ಹೆಚ್ಚು ಕೋವಿಡ್‌ ಲಸಿಕೆ ನೀಡಲಾಗಿದೆ.

Advertisement

ಇಲ್ಲಿನ ವಿದ್ಯಾನಗರದ ಐರಣಿ ಶಾಖಾ ಮಠಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಹಾಗೂ ಸಂಘ, ಸಂಸ್ಥೆಗಳಿಂದ ಆಯೋಜಿಸಿದ್ದ ಲಸಿಕಾಕಾರ್ಯಕ್ರಮದಲ್ಲಿ 1800 ಹಾಗೂ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 4200 ಲಸಿಕೆಗಳನ್ನು ಹಾಕಲಾಗಿದೆ.

ವಿದ್ಯಾನಗರದಲ್ಲಿ ಕರವೇ ಆಯೋಜಿಸಿದ್ದ ಲಸಿಕಾಅಭಿಯಾನ ಉದ್ಘಾಟನೆಯಲ್ಲಿ ನೋಡಲ್‌ ಅಧಿಕಾರಿಡಾ| ನಟರಾಜ್‌ ಮಾತನಾಡಿ, ಲಸಿಕೆ ಬಗ್ಗೆ ಯಾವುದೇಅನುಮಾನ, ಮೌಡ್ಯ ಬೇಡ. ನಮ್ಮ ಆರೋಗ್ಯರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೋವಿಡ್‌ಲಸಿಕೆಗಳನ್ನು ಪಡೆಯಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌ಮಾತನಾಡಿ, ಆರೋಗ್ಯ ಇಲಾಖೆಯ ಜೊತೆಗೆಕರವೇ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿರುವುದರಿಂದ ಹೆಚ್ಚು ಜನರಿಗೆ ಲಸಿಕೆ ಹಾಕಲುಅನುಕೂಲವಾಗಿದೆ.

ಇಡೀ ಜಗತ್ತಿಗೆ ಎದುರಾಗಿರುವಸಂಕಷ್ಟ ಸಮಯದಲ್ಲಿ ಸಮಾಜದ ಪಾಲ್ಗೊಳ್ಳುವಿಕೆಯಅಗತ್ಯವಿದೆ ಎಂದು ತಿಳಿಸಿದರು.ಕರವೇ ಜಿಲ್ಲಾ ಉಪಾಧ್ಯಕ್ಷ ನಾಗರಾಜ್‌ ಮೆಹರವಾಡೆಮಾತನಾಡಿ, ಕರವೇ ಕೇವಲ ಭಾಷೆಯ ವಿಷಯದಲ್ಲಷ್ಟೆಅಲ್ಲ, ಸಮಾಜಕ್ಕೆ ಎದುರಾಗುವ ಯಾವುದೆ ಸಂಕಷ್ಟಸಂದರ್ಭದಲ್ಲೂ ಸಮಾಜದ ಹಿತರಕ್ಷಣೆಗೆ ಬದ್ಧವಾಗಿದೆಎಂದರು.

Advertisement

ಆರೋಗ್ಯ ಇಲಾಖೆ ಸಿಬ್ಬಂದಿ, ಜನಪ್ರತಿನಿಧಿಗಳನ್ನುಸನ್ಮಾನಿಸಲಾಯಿತು. ನಗರಸಭಾ ಸದಸ್ಯೆ ಅಶ್ವಿ‌ನಿ ಕೃಷ್ಣ,ಕರವೇ ಮುಖಂಡರಾದ ನಾಗರಾಜ ಗೌಡ, ಸುಬ್ರಹ್ಮಣ್ಯ,ಶಾಂತರಾಜು, ಆಟೋ ರಾಜು, ಎನ್‌.ಇ. ಸುರೇಶ್‌ಸ್ವಾಮಿ, ಎಚ್‌.ಕೆ.ಕೊಟ್ರಪ್ಪ, ಲಿಂಗರಾಜ್‌ ಕೆ., ನಯಾಜ್‌,ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಎಲ್‌. ಹನುಮನಾಯ್ಕ, ಎಂ.ವಿ.ಹೊರಕೇರಿ, ಎಂ. ಉಮ್ಮಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next