Advertisement

Shares: ತಾಯಿ, ಸೋದರಿ ವಿರುದ್ಧ ಜಗನ್‌ ರೆಡ್ಡಿ ದಾವೆ!

12:37 AM Oct 25, 2024 | Team Udayavani |

ಹೈದರಾಬಾದ್‌: ತಾಯಿ ವೈ. ಎಸ್‌. ವಿಜಯಮ್ಮ ಹಾಗೂ ಸಹೋದರಿ ವೈ.ಎಸ್‌. ಶರ್ಮಿಳಾ ವಿರುದ್ಧವೇ ಆಂಧ್ರಪ್ರದೇಶ ಮಾಜಿ ಸಿಎಂ ವೈ.ಎಸ್‌. ಜಗನ್ಮೋಹನ ರೆಡ್ಡಿ ಕಂಪೆನಿ ನ್ಯಾಯ ಮೇಲ್ಮನವಿ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತಾಯಿ ಮತ್ತು ಸಹೋದರಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿದ್ದ ಸರಸ್ವತಿ ಪವರ್‌ ಆ್ಯಂಡ್‌ ಇಂಡಸ್ಟ್ರೀಟ್‌ ಪ್ರೈವೇಟ್‌ ಲಿಮಿಟೆಡ್‌ನ‌ ಷೇರುಗಳನ್ನು ರದ್ದುಗೊಳಿಸುವಂತೆ ರಾಷ್ಟ್ರೀಯ ಕಂಪೆ‌ನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಹೈದರಾಬಾದ್‌ ಶಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ತಾಯಿ ಮತ್ತು ಸಹೋದರಿಗೆ ಉಡುಗೊರೆ ರೂಪದಲ್ಲಿ ತನ್ನ ಕಂಪೆನಿಗಳ ಷೇರುಗಳನ್ನು ನೀಡುವುದಾಗಿ ಜಗನ್‌ ಈ ಹಿಂದೆ ಘೋಷಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next