ಭಾಲ್ಕಿ: ಕುಟುಂಬದ ಯಜನಮಾನರ ಅಗಲಿಕೆಯ ನೋವು ಮರೆತು ಆತ್ಮ ವಿಸ್ವಾಸದಿಂದ ಸದೃಢ ಜೀವನ ಸಾಗಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಪಟ್ಟಣದಲ್ಲಿ ರವಿವಾರ ಜರುಗಿದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಧನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಕಷ್ಟ ಬರುವುದು ನಮ್ಮ ತಾಳ್ಮೆ ಪರೀಕ್ಷಿಸಲು.
ಕುಟುಂಬದ ಯಜಮಾನರ ಅಗಲಿಕೆ ಮರೆತು. ನಮ್ಮ ಮುಂದಿನ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ನಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದಿಂದ ಜೀವನ ನಡೆಸುವ ಕಲೆ ಕರಗತ ಮಾಡಿಕೊಳ್ಳಬೇಕಾಗಿದೆ ಎಂದು ಮೃತ ರೈತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮದಕಟ್ಟಿ ಗ್ರಾಮದ ರೈತ ವೀರಶೆಟ್ಟಿಯ ಪುತ್ರ ಸಂಗಮೇಶ, ಕೋನಮೆಳಕುಂದಾ ಗ್ರಾಮದ ಲೋಕೇಶ ಪತ್ನಿ ಪಲ್ಲವಿ, ಖಟಕ ಚಿಂಚೋಳಿ ಗ್ರಾಮದ ರೈತ ಶಿವಲಿಂಗ ಅವರ ಪತ್ನಿ ಕಾವೇರಿ, ಮಲ್ಲಯ್ನಾ ಅವರ ಪತ್ನಿ ಮಹಾನಂದಾ, ಮಳಚಾಪುರ ಗ್ರಾಮದ ಶರಣಪ್ಪಾ ರವರ ಪತ್ನಿ ಸಂಗಮ್ಮಾ ಅವರಿಗೆ ತಲಾ 5 ಲಕ್ಷ ರೂ. ಚೆಕ್ ವಿತರಿಸಿದರು. ತಾಪಂ ಕಾರ್ಯನಿರ್ವಾಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಪುರಸಭೆ ಅಧ್ಯಕ್ಷ ವಿಶಾಲ ವಿಶ್ವಂಬರ ಪುರಿ, ಗೋವಿಂದರಾವ್ ಬಿರಾದಾರ, ಮಹಾದೇವ ಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸತೀಷ ಮುದ್ದಾ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚೌವ್ಹಾಣ, ಜಿಪಂ ಸದಸ್ಯೆ ಉಷಾ ರಾಜೇಂದ್ರ ನಿಟ್ಟೂಕರ, ತಾಪಂ ಸದಸ್ಯ ಲಿಂಗರಾಜ ಖಂಡಾಳೆ ಇನ್ನಿತರರು ಇದ್ದರು.