Advertisement
ಏಕಾಂಗ ನಾಟಕ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜ್ ತಂಡ ಪ್ರಥಮ ಸ್ಥಾನ, ಎಸ್‌ಬಿ ಆರ್ಟ್ಸ್ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ದ್ವಿತೀಯ, ಶಾಸ್ತ್ರೀಯ ಗಾಯನ (ಕರ್ನಾಟಕ) ನರೇಂದ್ರ ಗಾಡಗೀಳ ಪ್ರಥಮ ಸ್ಥಾನ, ಶ್ವೇತಾ ದ್ವಿತೀಯ ಸ್ಥಾನ, ಶಾಸ್ತ್ರೀಯ ಗಾಯನ (ಹಿಂದೂಸ್ತಾನಿ) ಮಹಿಳಾ ವಿಶ್ವವಿದ್ಯಾಲಯದ ಸರಸ್ವತಿ ಸಬರದ ಪ್ರಥಮ, ದರ್ಶನ ದ್ವಿತೀಯ, ಶಾಸ್ತ್ರೀಯ ವಾದ್ಯ ತಬಲಾ ಕಾಶೀನಾಥ ಗಾಯಕವಾಡ ಪ್ರಥಮ, ಶ್ರೀನಿಧಿದ್ವಿತೀಯ, ಸಮೀತ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಸರಸಟ್ಟಿ ಪ್ರಥಮ, ಲಕ್ಷ್ಮೀ ತೇರದಾಳ ದ್ವಿತೀಯ, ಸುಕನ್ಯಾ ತೃತೀಯ, ಆಶುಭಾಷಣ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಸಯೀದಾ ಖಾದ್ರಿ ಪ್ರಥಮ, ಕಿರಣಕುಮಾರ ಹಿರೇಮಠ ದ್ವಿತೀಯ, ಅಶ್ವಿನಿ ಉಪ್ಪಾರ ತೃತೀಯ ಸ್ಥಾನ ಪಡೆದರು. ಸಮಾರೋಪ-ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಎಸ್. ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ-ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ಜಾವೇದ ಜಮಾದಾರ, ಅರವಿಂದ ಕೊಪ್ಪಾ, ಎನ್ನೆಸ್ಸೆಸ್ ಅಧಿಕಾರಿ ಜಿ.ಆರ್. ಅಂಬಲಿ, ಶಶಿಕಲಾ ಕುಲ್ಲೊಳ್ಳಿ, ಸುನಂದಾ ಘಾಟಗೆ, ಪಲ್ಲವಿ ವಾಗದಂಡೆ, ಪಾಟೀಲ, ಸುಭಾಷ್ ಕನ್ನೂರ ಇದ್ದರು.