Advertisement

ಪರಿಹಾರ ನಿಮ್ಮ ಹಕ್ಕಿನದ್ದಾಗಿದೆ: ನಳಿನ್‌ ಕುಮಾರ್‌

02:55 PM Sep 08, 2018 | |

ಬಂಟ್ವಾಳ: ಪ್ರಕೃತಿ ವಿಕೋಪದಿಂದ ನಷ್ಟ ಹೊಂದಿರುವ ಮಂದಿ ಪಡೆಯುತ್ತಿರುವ ಪರಿಹಾರವು ನಿಮ್ಮ ಹಕ್ಕಿನದ್ದಾಗಿದೆ. ಕೇಂದ್ರ ಸರಕಾರವು ಪ್ರಕೃತಿ ವಿಕೋಪ ಅಡಿಯಲ್ಲಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಪ್ರಧಾನಿ ಮೋದಿ ಅವರು ನಮ್ಮ ಹಕ್ಕುಗಳನ್ನು ನಮಗೆ ಒಪ್ಪಿಸುತ್ತಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಸೆ. 7ರಂದು ಬಂಟ್ವಾಳ ಶಾಸಕರ ಕಚೇರಿಯಲ್ಲಿ ಪಾಣೆಮಂಗಳೂರು, ಬಂಟ್ವಾಳ, ವಿಟ್ಲ ಹೋಬಳಿ ಮಟ್ಟದ ಪ್ರಕೃತಿ ವಿಕೋಪ ಪರಿಹಾರ ವಿತರಣೆ, ವಿವಿಧ ಯೋಜನೆಗಳ ನಷ್ಟ ಪರಿಹಾರ ಮೊತ್ತ 18,16,252 ರೂ. ಚೆಕ್ಕನ್ನು 148 ಮಂದಿಗೆ ವಿತರಿಸಿ ಮಾತನಾಡಿದರು.

ಜನಸಾಮಾನ್ಯನ ಸಂಕಷ್ಟದ ಸಮಯದಲ್ಲಿ ಸರಕಾರ ನಿಮ್ಮ ಜತೆಗಿದೆ. ಅರ್ಹ ಫಲಾನುಭವಿಗಳು ಸೂಕ್ತ ಅರ್ಜಿ ಸಲ್ಲಿಸಿ ಸರಕಾರದ ನಿಯಮಾನುಸಾರ ಇರುವ ಪರಿಹಾರ ಪಡೆಯಬೇಕು. ನಿಮ್ಮ ಸಮಸ್ಯೆ ಬಗ್ಗೆ ಶಾಸಕರಲ್ಲಿ ಮನವಿ ಮಾಡಿ ಅರ್ಜಿ ನೀಡಿದಲ್ಲಿ ಅದಕ್ಕೂ ನಿಯಮಾನುಸಾರ ಸ್ಪಂದನ ನೀಡುತ್ತಾರೆ ಎಂದರು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಇಂದು ಜಿಲ್ಲೆಗೆ ಬರುವ ಮುಖ್ಯಮಂತ್ರಿಯವರಿಗೆ ಜಿಲ್ಲೆಯ ಜನರ ಸಂಕಷ್ಟಗಳನ್ನು ತಿಳಿಸಿ ಇನ್ನಷ್ಟು ಪರಿಹಾರ ನೀಡಲು ಮನವಿ ಮಾಡಲಾಗುವುದು. ಇಲ್ಲಿ ವಿತರಿಸುವ ಎಲ್ಲ ಸೌಲಭ್ಯಗಳು ಸರಕಾರದ ಮಟ್ಟದಿಂದ ಬಂದಿರುತ್ತವೆ. ನಾವು ಸರಕಾರದಿಂದ ಬರುವ ಪರಿಹಾರವನ್ನು ನಿಮಗೆ ನ್ಯಾಯೋಚಿತವಾಗಿ ಒದಗಿಸುವ ಕೆಲಸ ಮಾಡುತ್ತೇವೆ. ನಿಮ್ಮ ಸಂಕಷ್ಟಗಳ ಬಗ್ಗೆ ಸರಕಾರಕ್ಕೆ ಮನವಿ ಮಾಡುತ್ತೇವೆ. ಅಧಿಕಾರಿ ವರ್ಗದವರು ನೆರೆ ಪರಿಹಾರ, ರಾಷ್ಟ್ರೀಯ ಕುಟುಂಬ ಪರಿಹಾರ ವಿತರಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಬಗ್ಗೆ ನಮಗೆ ಅಭಿಮಾನವಿದೆ ಎಂದರು.

ಜನರು ಸರಕಾರವು ಒದಗಿಸಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಿಮಗೆ ಅರ್ಹವಾಗಿ ಸಂದಾಯ ಆಗಬೇಕಾದ ಸವಲತ್ತುಗಳನ್ನು ಪಡೆಯಲು ಹಿಂಜರಿಕೆ ಬೇಡ ಎಂದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ನೆರವಾಗಬೇಕು. ಪ್ರಸ್ತುತ ವರ್ಷದಲ್ಲಿ ಅತಿವೃಷ್ಟಿಯಿಂದ ಅಡಿಕೆ ಕೊಳೆ ರೋಗದಿಂದ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ. ಅಡಿಕೆ ಮಾತ್ರವಲ್ಲ, ಕಾಳುಮೆಣಸು ಸಹಿತ ಇತರ ಕೃಷಿಗಳಿಗೂ ಮಳೆಯಿಂದ ಹಾನಿ ಒದಗಿದೆ. ಸರಕಾರದಿಂದ ಪ್ರಸ್ತುತ ಇರುವ ಪರಿಹಾರ ಮೊತ್ತ ನಾವು ಸಲ್ಲಿಸುವ ಅರ್ಜಿಯ ಮೊತ್ತಕ್ಕೂ ಸಾಕಾಗುವುದಿಲ್ಲ ಎಂದರು. ಕೊಳೆರೋಗ ಪರಿಹಾರ ಹೆಚ್ಚಿಸಬೇಕು. ನಷ್ಟ ಪರಿಹಾರವನ್ನು ಅಧಿಕಾರಿಗಳ ಮೂಲಕ ಅಂದಾಜಿಸಬೇಕು ಎಂಬುದಕ್ಕಾಗಿ ತಾ| ಕಚೇರಿಯ ಎದುರು ಕೊಳೆ ರೋಗದಿಂದ ಉದುರಿದ ಅಡಿಕೆ ನಳ್ಳಿಯನ್ನು ಹಾಕಿ ಪ್ರತಿಭಟನೆ ಮಾಡಲಾಗಿದೆ. 

Advertisement

ಅವಕಾಶ
94 ಸಿಸಿ ಅರ್ಜಿ ಸಲ್ಲಿಸದವರು ಸೆ. 16ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅನೇಕ ಜನರು ತಿಳಿವಳಿಕೆಯ ಕೊರತೆ, ಸಂಪರ್ಕದ ಕೊರತೆ, ಬಡತನಗಳಿಂದ ಅರ್ಜಿ ಸಲ್ಲಿಸದೇ ಇರಬಹುದು. ನಿಮ್ಮ ಮನೆ ಅಡಿ ಸ್ಥಳಕ್ಕೆ ನೀವು ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇದೆ.
– ರಾಜೇಶ್‌ ನಾೖಕ್‌
ಉಳಿಪ್ಪಾಡಿಗುತ್ತು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next