Advertisement

ಗುಣಮಟ್ಟದ ಉನ್ನತ ಶಿಕ್ಷಣವು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳವಿಶಿಷ್ಟ ಲಕ್ಷಣ –ಉಪರಾಷ್ಟ್ರಪತಿ

03:33 PM Oct 28, 2021 | Team Udayavani |

ಪಣಜಿ: ಗುಣಮಟ್ಟದ ಉನ್ನತ ಶಿಕ್ಷಣವು ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ವಿಶಿಷ್ಟಲಕ್ಷಣವಾಗಿದೆ. ಇದು ವಿದ್ಯಾರ್ಥಿಗಳನ್ನು ಹೆಚ್ಚು ಅರ್ಥಪೂರ್ಣ ಮತ್ತು ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನುಡಿದರು.
ಉಪರಾಷ್ಟ್ರಪತಿಗಳು ಗೋವಾದ ಪೆಡ್ನೆಯ ಸಂತ ಸೊಯಿರೋಬನಾಥ ಅಂಬಿಯೆ ಸರ್ಕಾರಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯದ ಕಟ್ಟಡದ ಉಧ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಆವಿಷ್ಕಾರವು ಜ್ಞಾನ ಆಧಾರಿತ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಯಾಗಿದೆ ಎಂದರು.

Advertisement

ಇದನ್ನೂ ಓದಿ:- ಶುಲ್ಕ ಕಟ್ಟದ ವಿದ್ಯಾರ್ಥಿಗಳು ಹೊರಗೆ!

ಮಾಹಿತಿ ಮತ್ತು ತಂತ್ರಜ್ಞಾನವು ವಿದ್ಯಾವಂತ ಯುವ ಜನಸಂಖ್ಯೆಯಲ್ಲಿ ಭಾರತವು ಜ್ಞಾನ ಆಧಾರಿತ ಆರ್ಥಿಕತೆಯಲ್ಲಿ ವಿಶ್ವ ನಾಯಕನಾಗಬಹುದು ಎಂದು ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ನುಡಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಮುಖ್ಯಮಂತ್ರಿ ಪ್ರಮೋದ ಸಾವಂತ್, ಪ್ರವಾಸೋದ್ಯಮ ಸಚಿವ ಬಾಬು ಆಜಗಾಂವಕರ್, ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next