Advertisement
ಗುರುವಾರ ಕಾವೂರು ಬಿಜೆಪಿ ಕಚೇರಿಯಲ್ಲಿ ಕಾರ್ಮಿಕರು ಹಾಗೂ ಫಲಾನುಭವಿಗಳಿಗೆ ಪಕ್ಷ, ದಾನಿಗಳು ಹಾಗೂ ವೈಯುಕ್ತಿಕ ನೆಲೆಯಲ್ಲಿ ಆಹಾರ ದಿನಸಿ ವಿತರಿಸಿ ಅವರು ಮಾತನಾಡಿದರು.
ಪ್ರಥಮ ಹಂತದಲ್ಲಿ 245 ಬೂತ್ ಮಟ್ಟದಲ್ಲಿ 50 ಲಕ್ಷ ರೂ.ವೆಚ್ಚದ ಆಹಾರ ಸಾಮಗ್ರಿ ಅರ್ಹರಿಗೆ ತಲುಪಿಸುವ ಕೆಲಸ ನಡೆದಿದೆ. ಅಂಟು ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಹಿತಿ ಪತ್ರ ನೀಡಲಾಗುತ್ತಿದೆ. ಒಟ್ಟು 45-50 ಲಕ್ಷ ರೂ. ವೆಚ್ಚದ ಆಹಾರ ಸಾಮಗ್ರಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪಾಲಿಕೆ ಸದಸ್ಯರಾದ ಜಯಾನಂದ ಅಂಚನ್, ಲೋಹಿತ್ ಅಮೀನ್, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ವಿಠಲ ಸಾಲಿಯಾನ್ ಉಪಸ್ಥಿತರಿದ್ದರು.