Advertisement

ಬಡ ಮುಸ್ಲಿಂ ಪರಿವಾರಕ್ಕೆ ಆಹಾರದ ಕಿಟ್‌ ವಿತರಣೆ

12:30 PM Jun 17, 2018 | |

ಹುಣಸೂರು: ರಂಜಾನ್‌ ಹಬ್ಬದ ಪ್ರಯುಕ್ತ ಮೈಸೂರಿನ ಭೀಮಾ ಜ್ಯುವೆಲರ್ ಸಂಸ್ಥೆವತಿಯಿಂದ ನಗರದಲ್ಲಿನ ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ಟನ್ನು ವಿತರಿಸಿದರು.

Advertisement

ನಗರದ ಬಸ್‌ ಡಿಪೋ ಬಳಿಯ ರಾಜೀವಗಾಂಧಿ ನಗರ ಬಡಾವಣೆಯಲ್ಲಿ ಭಿಮಾ ಜ್ಯುವೆಲರ್ವತಿಯಿಂದ ನಡೆದ ಕಾರ್ಯಕ್ರಮದಲ್ಲಿ  ಸಿಡಿಪಿಒ ನವೀನ್‌ಕುಮಾರ್‌ ಮಾತನಾಡಿ, ಸರ್ಕಾರ ಬಡವರ್ಗದ ಮಹಿಳೆಯರ ಅಭ್ಯುದಯಕ್ಕಾಗಿ ಅನೇಕ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಜಾರಿಗೆ ತಂದಿದ್ದು,

ಬಳಸಿಕೊಳ್ಳಬೇಕು ಹಾಗೂ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿರೆಂದರು. ಭೀಮಾ ಜ್ಯುವೆಲರ್ನ ವ್ಯವಸ್ಥಾಪಕ ಭರತ್‌ ನಮ್ಮ ಸಂಸ್ಥೆ ವತಿಯಿಂದ ಪ್ರತಿವರ್ಷ ಇಂತಹ ಸಮಾಜ ಮುಖೀ ಕಾರ್ಯ ನಡೆಸಲಾಗುತ್ತಿದ್ದು, ಈ ಬಾರಿ ರಂಜಾನ್‌ ಹಬ್ಬದ ಅಂಗವಾಗಿ ಇಲ್ಲಿನ 300 ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್‌ ವಿತರಿಸಲಾಗುತ್ತಿದೆ ಎಂದರು.

ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್‌, ಸ್ಥಳಿಯ ಮುಖಂಡರಾದ ಬಾಬುಲಾಲ್‌, ಫಯಜ್‌, ಮಹದೇವಶೆಟ್ಟಿ, ಹನುಮಯ್ಯ, ಶಿಕ್ಷಕರಾದ ಮಹೇಶ್‌ಚಿಲ್ಕುಂದ, ಭಿಮಾಜ್ಯುವೇಲ್ಸ್‌ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next