Advertisement

ಇನ್ನೂ ಎರಡ್ಮೂರು ತಿಂಗಳು ಸಂಕಷ್ಟ ಕಾಲ

06:09 PM Sep 02, 2020 | Suhan S |

ಹೊನ್ನಾಳಿ: ಇನ್ನೂ ಎರಡರಿಂದ ಮೂರು ತಿಂಗಳು ಕೋವಿಡ್ ಸಂಕಷ್ಟ ಇದ್ದು, ಅಲ್ಲಿಯವರೆಗೂ ಜನರು ಎಚ್ಚರದಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.

Advertisement

ನ್ಯಾಮತಿ ತಾಲೂಕಿನ ಟಿ.ಗೋಪಗೊಂಡನಹಳ್ಳಿ ಹಾಗೂ ಚಿ.ಕಡದಕಟ್ಟೆ ಗ್ರಾಮಗಳಲ್ಲಿನ ಕಂಟೇನ್ಮೆಂಟ್‌ ಝೋನ್‌ಗಳಿಗೆ ಭೇಟಿ ನೀಡಿ ಜನರಿಗೆ ಕೋವಿಡ್ ಜಾಗೃತಿ ಮೂಡಿಸಿ ವೈಯಕ್ತಿವಾಗಿ 53 ಆಹಾರ ಧಾನ್ಯ ಕಿಟ್‌ ನೀಡಿ ಜನರಿಗೆ ಮಾಸ್ಕ್ ವಿತರಿಸಿ ಮಾತನಾಡಿದರು. ಕೋವಿಡ್ ಸೋಂಕು ಕಾಣಿಸಿಕೊಂಡಾಗಿನಿಂದ ಇಂದಿನವರೆಗೂ ಕೋವಿಡ್ ಗೆ ಲಸಿಕೆ ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಇನ್ನೂ ಎರಡು-ಮೂರು ತಿಂಗಳು ನಮಗೆ ಸಂಕಷ್ಟದ ಕಾಲವಿದ್ದು, ಅಲ್ಲಿಯವರೆಗೆ ಜನರು ಜಾಗೃತರಾಗಿರಿ ಎಂದರು. ಕೆಲವರು ಮೂರು ಲಕ್ಷ ಹಣ ಕೊಡುತ್ತಾರೆ ಅದಕ್ಕಾಗಿ ಕೋವಿಡ್ ಬಾರದವರನ್ನು ಕರೆದುಕೊಂಡು ಹೋಗುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದು, ಸುಮ್ಮನೆಅಪಪ್ರಚಾರ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇನ್ನೂರು ಬೆಡ್‌ಗಳ ಕೋವಿಡ್‌ ಕೇರ್‌ ಕೇಂದ್ರ ತೆರೆಯಲಾಗಿದೆ ಎಂದರು.

ನಾನು ಐದು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಐದು ಬಾರಿಯೂ ನೆಗೆಟಿವ್‌ ಬಂದಿದೆ. ಆದರೆ ಕೆಲವರು ರೇಣುಕಾಚಾರ್ಯರಿಗೆ ಪಾಸಿಟಿವ್‌ ಬಂದಿದ್ದು, ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಾಗೆ ಮಾಡಿದರೆ ನನ್ನ ತಾಯಿಗೆ ದ್ರೋಹ ಮಾಡಿದಂತೆ ಎಂದರು.

ಸಾಮಾನ್ಯ ಶಿಕ್ಷಕನ ಮಗನನ್ನು ಕ್ಷೇತ್ರದ ಜನರು ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದು, ಅವರ ಸೇವೆ ಮಾಡುವುದು ನನ್ನ ಕರ್ತವ್ಯ. ಕ್ಷೇತ್ರದ ಜನರು ನನ್ನ ಮಾಲೀಕರು ನಾನು ಅವರ ಸೇವಕ. ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿ ಸಬೇಕಾಗಿದ್ದು, ನನ್ನ ಕರ್ತವ್ಯ ಈ ಹಿನ್ನೆಲೆಯಲ್ಲಿ ನಾನು ನನ್ನ ಸ್ವಂತ ಹಣದಿಂದ ಜನರಿಗೆ ಆಹಾರ ಧಾನ್ಯ ಕಿಟ್‌ ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next