Advertisement

ಆಹಾರ, ರೇಷನ್‌ ಕಿಟ್‌ ವಿತರಣೆ

01:10 PM Jun 05, 2021 | Team Udayavani |

ಕೊರೊನಾ ಎರಡನೇ ಅಲೆ ಭಾರತದಲ್ಲಿ ಬಹಳ ವೇಗವಾಗಿ ಮತ್ತು ಅಪಾಯಕಾರಿಯಾಗಿ ಹರಡುತ್ತಿರುವಾಗ ಅದರಲ್ಲೂ ಕರ್ನಾಟಕದಲ್ಲಿ ಕೋವಿಡ್‌ ಕಾರಣ  ಸಾವು ನೋವುಗಳು ಹೆಚ್ಚಾಗಿ ಸಂಭವಿಸುತ್ತಿರುದರಿಂದ ದುಬಾೖ ಹೆಮ್ಮೆಯ ಯುಎಇ ಕನ್ನಡಿಗರು ನೆರವಿಗೆ ಮುಂದಾಗಿದ್ದಾರೆ.

Advertisement

ಕಳೆದ ಹಲವು ದಿನಗಳಿಂದ ಕರ್ನಾಟಕವನ್ನು ಲಾಕ್‌ಡೌನ್‌ ಮಾಡಲಾಗಿದೆ. ಇದರಿಂದ ದಿನಗೂಲಿ ಜನರು ಮತ್ತು ಭಿಕ್ಷುಕರು ಸೇರಿ ಹಲವು ಬಡವರ ಜೀವನ ಸಾಗಿಸಲು ಕಷ್ಟಪಡುತ್ತಿದ್ದರು.

ಕೆಲವರಿಗೆ ಒಂದೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದ್ದು, ಅಂತಹ ಕೆಲವರಿಗೆ ದುಬೈ ಕೇಂದ್ರೀಕರಿಸಿ ಕಾರ್ಯಾ ಚರಿಸುತ್ತಿರುವ ದುಬೈ ಹೆಮ್ಮೆಯ ಕನ್ನಡಿಗರು ಕನ್ನಡ ಸಂಘವು ಕಳೆದ ಹಲವು ದಿನಗಳಿಂದ ಆಹಾರ ಪೊಟ್ಟಣ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳ ರೇಷನ್‌ ಕಿಟ್‌ ವಿತರಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಮತ್ತು ಮೈಸೂರಿನ ಹಲವು ಭಾಗಗಳಲ್ಲಿ ಇರುವ ಸ್ನೇಹಿತರು, ಸಂಘ ಸಂಸ್ಥೆಗಳ ಮೂಲಕ ಹಸಿದವರಿಗೆ ಊಟ ತಲುಪಿಸುತ್ತಿದ್ದಾರೆ.

ಹೆಮ್ಮೆಯ ಕನ್ನಡಿಗರು ತಂಡದ ಸದಸ್ಯರಾದ ಹಾದಿಯ ಮಂಡ್ಯ ಅವರ ಮಗನಾದ ಆಸಿಫ್ ಅವರ ಮುಂದಾಳತ್ವದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಹಾರ ಕಿಟ್‌ ವಿತರಣೆ ನಡೆಯಿತು.

ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಮಮತಾ ಮೈಸೂರು, ಸಂಚಾಲಕರಾದ ಸುದೀಪ್‌ ದಾವಣಗೆರೆ, ರಫೀಕಲಿ ಕೊಡಗು, ಕಾರ್ಯದರ್ಶಿ ಸೆಂತಿಲ್‌ ಬೆಂಗಳೂರು, ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು, ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಡಾ| ಸವಿತಾ ಮೈಸೂರು, ಅನಿತಾ ಬೆಂಗಳೂರು, ಶಂಕರ್‌ ಬೆಳಗಾವಿ, ಮೊಯಿನುದ್ದೀನ್‌ ಹುಬ್ಬಳ್ಳಿ ಹಾಗೂ ಉಪಸಮಿತಿ ಸದಸ್ಯರುಗಳ ಪರಿಶ್ರಮದಿಂದ ದುಬೈಯಲ್ಲಿರುವ ಕನ್ನಡಿಗ ದಾನಿಗಳ ಸಹಾಯದಿಂದ ಇದು ಸಾಧ್ಯವಾಯಿತು. ಅಲ್ಲದೇ ದುಬೈಯಿಂದ ತಾಯಿನಾಡಿಗೆ ಆಕ್ಸಿಜನ್‌ ಕಾನ್ಸಂಟ್ರೇಶನ್‌ ತಲುಪಿಸುವ ಪ್ರಯತ್ನ ನಡೆಯುತ್ತಿದೆ.

Advertisement

ಆಪತ್ಭಾಂಧವ ದುಬೈ ಕನ್ನಡಿಗ ಮೊಹಮ್ಮದ್‌ ಮುಸ್ತಫಾ

ದುಬೈಯಲ್ಲಿ ಕಳೆದ ಹಲವು ವರ್ಷಗಳಿಂದ ಉದ್ಯಮದಲ್ಲಿ ತೊಡಗಿ ಕೊಂಡಿರುವ ಮೊಹಮ್ಮದ್‌ ಮುಸ್ತಫಾ ಅವರು, ಕಷ್ಟ ಎಂದು ಹೇಳಿ ಹೋದ ಜನರನ್ನು  ಎಂದೂ ಬರಿಗೈಯಲ್ಲಿ ಹಿಂದಿರುಗಿಸಿ ಕಳುಹಿಸಿಲ್ಲ. ತಮ್ಮ ಕೈಲಾದ ಸಹಾಯ ಮಾಡುವ ಮನೋಭಾವ ಉಳ್ಳ ಇವರು ಸಪ್ತ ಸಾಗರದಾಚೆ ನೆಲೆಸಿರುವ ಅನಿವಾಸಿ ಕನ್ನಡಿಗರ ಪಾಲಿನ ಆಪತ್ಭಾಂಧವರಾಗಿ¨ªಾರೆ.

ಕಳೆದ ವರ್ಷ ಕೋವಿಡ್‌ ಕಾರಣ ಇಡೀ ದೇಶ ಲಾಕ್‌ಡೌನ್‌ ಆದಾಗ ಕಡಿಮೆ ಸಂಬಳ ಇರುವ, ಸಂದರ್ಶನ ವೀಸಾದಲ್ಲಿ ಆಗಮಿಸಿದ್ದ, ಕೋವಿಡ್‌ ಕಾರಣ ಕೆಲಸ ಕಳೆದುಕೊಂಡ ಮತ್ತು ಸಂಬಳ ಸಿಗದ, ಸಂಕಷ್ಟದಲ್ಲಿದ್ದ ಕನ್ನಡಿಗರು, ಭಾರತೀಯರು ವಿದೇಶಿಗರು  ಸೇರಿ ಸಾವಿರಾರು ಅನಿವಾಸಿಗಳಿಗೆ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮೂಲಕ ದಿನಸಿ ಆಹಾರ ಕಿಟ…, ಔಷಧ ಮಾತ್ರವಲ್ಲ ಇರಲು ಮನೆಯ ವ್ಯವಸ್ಥೆ ಕಲ್ಪಿಸಿದ್ದರು.

ಈ ವರ್ಷ ತಾಯಿನಾಡು ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಊಟಕ್ಕೂ ಸಹ ದಿಕ್ಕು ತೋಚದೆ ಇದ್ದ ಬಡವರಿಗೆ ಒಂದು ತಿಂಗಳಿಗಾಗುವ ದಿನಸಿ ಆಹಾರ ಕಿಟ್‌ ಮತ್ತು ಆಹಾರ ಪೊಟ್ಟಣವನ್ನು ಹೆಮ್ಮೆಯ ಕನ್ನಡಿಗರು ತಂಡದ ಮೂಲಕ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಹಾಗೆಯೇ ಕಳೆದ ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡ ಒಂದೇ ಕಂಪೆನಿಯ 200ಕ್ಕಿಂತಲೂ ಹೆಚ್ಚು ಭಾರತೀಯರಿಗೆ ಹೆಮ್ಮೆಯ ಕನ್ನಡಿಗರು ತಂಡದ ಮೂಲಕ ದಿನಸಿ ಕಿಟ್‌ ವಿತರಿಸಿದ್ದರು.

ಮೂಲತಃ ಶಿವಮೊಗ್ಗ ಜಿÇÉೆಯವರಾದ ಇವರು ಪತ್ನಿ ಅಸ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ದುಬೈಯಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಪ್ಪಟ ಕನ್ನಡ ಪ್ರೇಮಿ ಆದ ಇವರು ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ನಡೆಯುವ ಬಹುತೇಕ ಕನ್ನಡ ಕಾರ್ಯಕ್ರಮಗಳ ಪ್ರಾಯೋಜಕರಾಗಿ, ಮಹಾ ಪೋಷಕರಾಗಿದ್ದಾರೆ.

– ಮಮತಾ ಮೈಸೂರು,  ಅಬುಧಾಬಿ

Advertisement

Udayavani is now on Telegram. Click here to join our channel and stay updated with the latest news.

Next