Advertisement

ಪಹಣಿಗಳಲ್ಲಿ ಅರಣ್ಯ ಪ್ರದೇಶ ನಮೂದು, ರದ್ದತಿಗೆ ಕ್ರಮ

05:20 PM Nov 16, 2020 | Suhan S |

ಮುಳಬಾಗಿಲು: ತಾಲೂಕಿನಹಲವು ರೈತರ ಪಹಣಿಗಳಲ್ಲಿ ಅರಣ್ಯ ಪ್ರದೇಶ ಎಂದು ಇರುವುದರಿಂದ ಸರ್ಕಾರಿ ಸೌಲಭ್ಯಕ್ಕಾಗುತ್ತಿರುವ ಸಮಸ್ಯೆಯನ್ನು ಈಗಾಗಲೇ ತಾವು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿದ್ದು, ಮತ್ತಷ್ಟು ಸಭೆ ನಂತರ ಪಹಣಿಗಳಲ್ಲಿ ನಮೂದಾಗಿರುವ ಅರಣ್ಯ ಇಲಾಖೆ ಎಂಬುದನ್ನು ತೆಗೆಸಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಭರವಸೆ ನೀಡಿದರು.

Advertisement

ತಾಲೂಕಿನಎಚ್‌.ಗೊಲ್ಲಹಳ್ಳಿಗ್ರಾಮಪಂಚಾಯಿತಿವ್ಯಾಪ್ತಿಯನಾಚಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಭೂ ರಹಿತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಲು ಸಾಧ್ಯವಾಗಿಲ್ಲ, ಇದರಿಂದ ಸಾಕಷ್ಟು ಭೂರಹಿತರು ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.

ಸಾಗುವಳಿ ಚೀಟಿ ವಿತರಿಸಲು ಕ್ರಮ: ಜಮೀನಿಗೆ ಸೂಕ್ತ ದಾಖಲೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿರುವುದನ್ನು ಮನಗೊಂಡು ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಂಡಿರುವೆ. ಈ ಸಮಿತಿಯಲ್ಲಿನ ಸದಸ್ಯರು ಸಾಗುವಳಿಗೆ ಅರ್ಜಿ ಸಲ್ಲಿಸಿರುವ ಫ‌ಲಾನುಭವಿಗಳ ಜಮೀನುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರವೇ ಸಾಗುವಳಿ ಚೀಟಿ ವಿತರಿಸಲು ಸೂಚಿಸಲಾಗಿದೆ ಎಂದರು.

ತಹಶೀಲ್ದಾರ್‌ ರಾಜಶೇಖರ್‌, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಭೈರಪ್ಪ, ಲೀಲಾವತಿ, ನೆರೆಯ ಆಂಧ್ರದ ರಾಮಸಮುದ್ರಂ ಮಂಡಲ್‌ ಸರಪಂಚ್‌ ಶ್ರೀನಿವಾಸ್‌, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ಸದಸ್ಯ ಜಯರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ವೈ.ಎಂ.ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಶ್ರೀನಿವಾಸಗೌಡ, ಜೋಸೆಫ್ ಕುಮಾರ್‌, ಎಚ್‌. ಗೊಲ್ಲಹಳ್ಳಿ ಜಗದೀಶ್‌, ರಮೇಶ್‌, ವೆಂಕಟಾಚಲಪತಿ, ಯುವ ಮುಖಂಡಮಂಜು, ಶ್ರೀಧರ್‌, ವೆಂಕಟರೆಡ್ಡಿ, ಕರಾಟೆ ಸುಬ್ಬು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಚಿವರು, ಅಧಿಕಾರಿಗಳ ಸಭೆ :  ತಾಲೂಕಿನ ಆಂಧ್ರ ಗಡಿ ಭಾಗವಾದ ಎಚ್‌.ಗೊಲ್ಲಹಳ್ಳಿ ಮತ್ತು ಅಗರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳ ಸುತ್ತಲೂ ಹೆಚ್ಚಿನ ಅರಣ್ಯ ಪ್ರದೇಶವಿರುವುದರಿಂದ ಈ ಗ್ರಾಮಗಳ ರೈತರಜಮೀನುಗಳಿಗೆ ಸಂಬಂಧಿಸಿದಪಹಣಿಗಳಲ್ಲಿ ಅರಣ್ಯ ಪ್ರದೇಶ ಎಂದು ತೋರಿಸುತ್ತಿದೆ. ಇದರಿಂದ ರೈತರು ಯಾವುದೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲದಿರುವುದು ತಮ್ಮ ಗಮನಕ್ಕೆ ಬಂದ ಕೂಡಲೇ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ಗಡಿ ಗ್ರಾಮ ಗುರುತಿಸಿ ಸೌಕರ್ಯ :  ಗಡಿ ಭಾಗದಲ್ಲಿ ಬರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ಸೂಕ್ತ ರೀತಿಯಲ್ಲಿ ಸಿಕ್ಕಿಲ್ಲ, ಗಡಿಗ್ರಾಮಗಳನ್ನು ಗುರುತಿಸಿ ಈ ಗ್ರಾಮಗಳಿಗೆ ಸಿಗಬೇಕಾದಂತಹ ಸೌಕರ್ಯ ಗಳನ್ನು ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನಸಾಮಾನ್ಯರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಅರಿತು ನಾವು ಕೆಲಸ ಮಾಡಬೇಕು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಯೋಚಿಸುವುದು ಸೂಕ್ತವಲ್ಲ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next