ವಿಜಯಪುರ: ದೇವನಹಳ್ಳಿ ತಾಲೂಕಿನಲ್ಲಿ ಸಹಕಾರಸಂಘಗಳ ಮುಖಾಂತರ ಸುಮಾರು 27.85ಕೋಟಿ ರೂ.ಗಳನ್ನು 12 ಸಂಘಗಳ ರೈತರಿಗೆ ಕೆಸಿಸಿ ಬೆಳೆಸಾಲ ಸಾಲ ವಿತರಣೆ ಮಾಡಲಾಗಿದೆ ಎಂದು ಬಿಡಿಸಿಸಿಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ ತಿಳಿಸಿದರು.
ವಿಜಯಪುರ ಸಮೀಪದ ಬೂದಿಗೆರೆವ್ಯವಸಾಯ ಸೇವಾ ಸಹಕಾರ ಸಂಘದಆವರಣದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದದೇವನಹಳ್ಳಿ, ಹೊಸಕೋಟೆ ತಾಲೂಕಿನ ಸಂಘಗಳಿಗೆಹೊಸ ಸಾಲ ವಿತರಿಸಿ ಮಾತನಾಡಿದ ಅವರು,ಸಹಕಾರಿ ಸಂಘದಲ್ಲಿ ರೈತರಿಗೆ ಬಡ್ಡಿ ರಹಿತವಾಗಿ 2ಲಕ್ಷ ರೂ. ವರೆಗೂ ಸಾಲ ವಿತರಣೆ ಮಾಡಲಾಗುತ್ತಿದೆ.ಸಂಘಗಳಲ್ಲಿ ಕೇವಲ ಬೆಳೆ ಸಾಲ ಮಾತ್ರಕ್ಕಾಗಿ ರೈತರುಸೀಮಿತವಾಗಬಾರದು.
ಆಭರಣ ಸಾಲ, ಹೈನುಗಾರಿಕೆ, ಕುರಿ ಸಾಕಾಣೆ,ಗೃಹ ನಿರ್ಮಾಣಕ್ಕಾಗಿ ಸಾಲ ಸೌಲಭ್ಯ ಸಿಗುತ್ತದೆ. 18ರಿಂದ 55 ವರ್ಷದ ವಯೋಮಿತಿ ವಿಮೆಸೌಲಭ್ಯವೂ ಸಿಗಲಿದೆ ಎಂದರು.
ಬೆಳೆ ಸಾಲ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪಮಾತನಾಡಿ, ಸಹಕಾರ ಸಂಘಗಳಲ್ಲಿ ಮಹಿಳಾಸ್ವಸಹಾಯ ಗುಂಪುಗಳಿಗೂ ಸಾಲ ಸೌಲಭ್ಯಸಿಗುತ್ತದೆ. ಬಿಡಿಸಿಸಿ ಬ್ಯಾಂಕ್ ಮುಖಾಂತರ ಎÇÉಾಸಹಕಾರ ಸಂಘಗಳ ಮುಖಾಂತರ ರೈತರಿಗೆ ಬೆಳೆಸಾಲ ಸಿಗುತ್ತದೆ ಎಂದು ಹೇಳಿದರು.ಹೆಚ್ಚು ವಹಿವಾಟು: ನಲ್ಲೂರು ರೇಷ್ಮೆ ಬೆಳೆಗಾರರಸೇವಾ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಸಿಗುವಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸಿ ಅತಿ ಹೆಚ್ಚುವಹಿವಾಟನ್ನು ಸಂಘಗಳ ಮುಖಾಂತರಮಾಡಬೇಕು.
ಸಹಕಾರಿ ಸಂಘಗಳಲ್ಲಿ ಠೇವಣಿಇಟ್ಟರೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಆಭರಣಸಾಲ ಹಾಗೂ ಮಹಿಳಾ ಸಂಘಗಳಿಗೆ ಸಾಲಸೌಲಭ್ಯಗಳು ಸಿಗುತ್ತದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಮಹಾ ಮಂಡಳಿ ನಿರ್ದೇಶಕಎ.ಸಿ.ನಾಗರಾಜ್ ಮಾತನಾಡಿ, ಸಹಕಾರಸಂಘದಿಂದ ಕನಿಷ್ಠ 3 ರಿಂದ 4 ಲಕ್ಷ ರೂ.ಸಾಲನೀಡಿದರೆ ದ್ರಾಕ್ಷಿ ಬೆಳೆಗಾರರಿಗೆಅನುಕೂಲವಾಗಲಿದೆ ಎಂದರು.ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಉಪಾಧ್ಯಕ್ಷ ಪಟ್ಟಾಭಿರಾಮಯ್ಯ, ಬೂದಿಗೆರೆವಿಎಸ್‌ಎಸ್‌ಎನ್ ಅಧ್ಯಕ್ಷ ಲಕ್ಷ್ಮಣ್‌ಗೌಡ,ಟಿಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಅಧ್ಯಕ್ಷನಾರಾಯಣಸ್ವಾಮಿ, ಹೊಸಕೋಟೆ ಸಹಕಾರಸಂಘದ ಅಧ್ಯಕ್ಷ ಬಾಬುರೆಡ್ಡಿ, ಬೂದಿಗೆರೆ ವಿಎಸ್‌ಎಸ್‌ಎನ್ ಉಪಾಧ್ಯಕ್ಷ ರಾಜಣ್ಣ, ನಿರ್ದೆಶಕರಾದರಾಮಾಂಜಿನೇಯದಾಸ್, ಮಾಜಿ ಅಧ್ಯಕ್ಷರಾದಶಂಕರಪ್ಪ, ರಮೇಶ್ ಹಾಗೂ ಹೊಸಕೋಟೆ,ದೇವನಹಳ್ಳಿ ತಾಲೂಕುಗಳ ವಿಎಸ್‌ಎಸ್‌ಎನ್‌ಅಧ್ಯಕ್ಷರು, ಕಾರ್ಯ ನಿರ್ವಹಣಾಧಿಕಾರಿಗಳುಹಾಜರಿದ್ದರು.