Advertisement

ಬಟ್ಟೆ, ಚಾಲನಾ ಪರವಾನಗಿ ವಿತರಣೆ

05:19 AM Jun 18, 2020 | Lakshmi GovindaRaj |

ಹುಣಸೂರು: ಶಾಸಕ ಮಂಜುನಾಥ್‌ ಹುಟ್ಟುಹಬ್ಬದ ಪ್ರಯುಕ್ತ ಬಿಳಿಕೆರೆಯ ಬಲಮುರಿ ಗಣಪತಿ, ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರ, ಆಂಜನೇಯಸ್ವಾಮಿ, ಸುಬ್ರಹ್ಮಣ್ಯ, ಮಂಜುನಾಥ ದೇವಾಲಯ, ಕಟ್ಟೆಮಳಲ ವಾಡಿಯ  ಕೋಡಿ ಗಣಪತಿ, ಕೆಂಡಗಣ್ಣಸ್ವಾಮಿ ಗದ್ದಿಗೆಯ ಕೆಂಡಗಣ್ಣೇಶ್ವರ-ಮಹದೇಶ್ವರ ದೇವಾಲ ಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Advertisement

ನಗರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸ್ನೇಹ ಜೀವಿ ಬಳಗದವರು 25 ಕೇಜಿ ಕೇಕ್‌  ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು. ಅಲ್ಲದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಾಗೂ ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌ ವಿತರಿಸಿದರು. ಇಂದಿರಾ ಕ್ಯಾಂಟೀನ್‌ನಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಬೆಳಗಿನ  ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಡಿಎಲ್‌ ವಿತರಣೆ: ನಗರದ 50 ಆಟೋ ಚಾಲಕರಿಗೆ ಸ್ನೇಹಜೀವಿ ಬಳಗದಿಂದ ಉಚಿತ ಚಾಲನಾ ಪರವಾನಗಿ ಮಾಡಿಸಿಕೊಟ್ಟ ಆದೇಶಪತ್ರ ವಿತರಿಸಿದರು. ಜಿಪಂ  ಉಪಾಧ್ಯಕ್ಷೆ  ಗೌರಮ್ಮ, ಸದಸ್ಯರಾದ ಡಾ.ಪುಷ್ಪಾ, ಕಟ್ಟನಾಯಕ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶೋಭಾ, ನಗರಸಭಾ ಸದಸ್ಯರು ಹಾಜರಿದ್ದರು.

ಬಟ್ಟೆ ವಿತರಣೆ: ತಾಲೂಕಿನ ಮರದೂರು ಗ್ರಾಪಂ ವ್ಯಾಪ್ತಿಯ ದೊಂಬರ ಕಾಲೋನಿಯಲ್ಲಿ ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಬನ್ನಿಕುಪ್ಪೆ ಜಿಪಂ ಸದಸ್ಯೆ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ  ಡಾ.ಪುಷ್ಪಾ ನೇತೃತ್ವದಲ್ಲಿ ನಂದಿನಿ ಸಿಲ್ಕ್ ಹಾಗೂ ಜಿಯಾಜಿ ಬಟ್ಟೆ ಅಂಗಡಿಗಳವರು ಮಕ್ಕಳು ಮಹಿಳೆಯರಿಗೆ ನೀಡಿರುವ ಬಟ್ಟೆ ವಿತರಿಸಿದರು. ಈ ವೇಳೆ ಮಹಿಳಾ ಕಾಂಗ್ರೆಸ್‌ನ ಶೋಭಾ, ನಂದಿನಿ, ಮಂಜುಳ, ಯಶೋಧಾ, ರೇಣುಕಾ, ಸುಕನ್ಯಾ  ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next