Advertisement

5 ಲಕ್ಷ ಮಂದಿಗೆ 371 ಜೆ ಪ್ರಮಾಣ ಪತ್ರ ವಿತರಣೆ

04:37 PM Sep 25, 2020 | Suhan S |

ಕಲಬುರಗಿ: ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂವಿಧಾನದ 371 ಜೆ ವಿಧಿ ಅಡಿಯ ಪ್ರಮಾಣ (ಸ್ಥಳೀಯ ವಾಸ ಸ್ಥಾನ ಹಾಗೂ ವ್ಯಾಸಂಗ) ಪ್ರಮಾಣ ಪತ್ರವನ್ನು ಇಲ್ಲಿಯವರಿಗೆ 5 ಲಕ್ಷ ಅಭ್ಯರ್ಥಿಗಳು ಪಡೆದಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.

Advertisement

ವಿಧಾನ ಪರಿಷತ್‌ ಸದಸ್ಯ ಸುನೀಲ ವಲ್ಲಾಪುರೆ ಅವರ ಲಿಖೀತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಂವಿಧಾನದ 371ಜೆ ವಿಧಿಯು 2013 ನವೆಂಬರ್‌ನಲ್ಲಿ ಕಾರ್ಯಾನುಷ್ಠಾನಕ್ಕೆ ಬಂದಿದೆ. ಅಂದಿನಿಂದ ಇಂದಿನ ದಿನದವರೆಗೂ 5 ಲಕ್ಷ ಪ್ರಮಾಣ ಪತ್ರಗಳನ್ನು ತಹಶೀಲ್ದಾರ್‌- ಸಹಾಯಕ ಆಯುಕ್ತರ ವಿದ್ಯುನ್ಮಾನ ಸಹಿ ಮಾಡಿ ವಿತರಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಬಳ್ಳಾರಿ 54,749, ಕಲಬುರಗಿ 1,30,027, ಕಲಬುರಗಿ 1,30,027, ಕೊಪ್ಪಳ 57,999, ರಾಯಚೂರು 90,676, ಯಾದಗಿರಿ ಜಿಲ್ಲೆಯಲ್ಲಿ 40,683 ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ.

ಪ್ರಸಕ್ತವಾಗಿ ಏಪ್ರಿಲ್‌-2020ರಿಂದ ಇಲ್ಲಿಯವರೆಗೆ 26,704 ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, 10,339 ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಎರಡು ಸಾವಿರ ಭೂಮಿ ಪರಿವರ್ತನೆ: ಕಳೆದ ಮೂರು ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2081 ಎಕರೆ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ, ಎಂಎಲ್‌ಸಿ ಸುನೀಲ ವಲ್ಲಾಪುರೆ ಅವರ ಲಿಖೀತ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರಂತೆ ಭೂ ಪರಿವರ್ತಿಸಲಾಗಿದೆ. ಸೇಡಂ ಉಪ ವಿಭಾಗದಲ್ಲಿ ಹೊರ ಜಿಲ್ಲೆಯಿಂದ 92 ಹಾಗೂ ಹೊರ ರಾಜ್ಯದಿಂದ 39 ಜನ ಕೃಷಿ ಭೂಮಿ ಖರೀದಿ ಮಾಡಿದ್ದಾರೆ. ಈ ಪೈಕಿ 11ಪ್ರಕರಣಗಳಲ್ಲಿ 79 ಎಬಿ ಉಲ್ಲಂಘನೆಯಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next