ವೇಣೂರು: ಯುವವಾಹಿನಿ ಬೆಳ್ತಂಗಡಿ ಘಟಕ, ಯುವವಾಹಿನಿ ಸಂಚಾಲನ ಸಮಿತಿ ಮೂಡುಕೋಡಿ ಮತ್ತು ಕೋಟಿ ಚೆನ್ನಯ ಫ್ರೆಂಡ್ಸ್ ಕ್ಲಬ್ ಮೂಡುಕೋಡಿ ಇದರ ವತಿಯಿಂದ ಹೊಸ್ಮಾರು ಬಲೊÂಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ರವಿವಾರ ನಡ್ತಿಕಲ್ಲು ಶ್ರೀರಾಮ ಭಜನಾ ಮಂದಿರದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಬಲೊÂಟ್ಟು ಕ್ಷೇತ್ರದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಸಂದೇಶವನ್ನು ಮೂಡುಕೋಡಿ ಯುವವಾಹಿನಿ ಪಾಲಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡುವ ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ನುಡಿದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೆ„ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಖೀಲ ಭಾರತ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕುಮಾರ್ ಕಾಶಿಪಟ್ಣ, ಬೆಳ್ತಂಗಡಿ ಗೆಜ್ಜೆಗಿರಿ ಸೇವಾ ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಮೇಲಂತಬೆಟ್ಟು ಆತ್ಮೀಯ ಯುವಕ ಮಂಡಲದ ಗೌರವಾಧ್ಯಕ್ಷ ಸಚಿನ್ ಕುಮಾರ್ ನೂಜೋಡಿ, ಮಂಗಳೂರು ದ.ಕ. ಜಿಲ್ಲಾ ಯುವಜನ ಒಕ್ಕೂಟದ ಉಪಾಧ್ಯಕ್ಷ ಸುಧಾಮಣಿ ರಮಾನಂದ ಸಾಲ್ಯಾನ್, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಎಚ್., ವೇಣೂರು ಗುರುನಾರಾಯಣ ಸ್ವಾಮಿ ಸೇ.ಸಂಘದ ಅಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಬೆಳ್ತಂಗಡಿ ಯುವವಾಹಿನಿ ಘಟಕದ ಪ್ರ. ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ವೇಣೂರು ಯುವವಾಹಿನಿ ವಲಯಧ್ಯಕ್ಷ ನವೀನ್ ಪಚ್ಚೇರಿ, ಮೂಡುಕೋಡಿ ಕೋಟಿಚೆನ್ನಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಸಾಲ್ಯಾನ್, ಮೂಡುಕೋಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಗಣೇಶ್ ಶಾಂತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ
ಬೆಳ್ತಂಗಡಿ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಮನೋಹರ ಬಳೆಂಜ ಮತ್ತು ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಎಚ್. ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಬಿಲ್ಲವ ಸಮುದಾಯ ಆಯ್ದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ಸಮ್ಮಾನಿತರ ಪರಿಚಯವನ್ನು ದೆ„ಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಕುಮಾರ್ ಮತ್ತು ಕರಿಮಣೇಲು ಗುರುನಾರಾಯಣ ಸ್ವಾಮಿ ಸೇ.ಸಂಘದ ಅಧ್ಯಕ್ಷ ಸತೀಶ್ ಉಜಿರªಡ್ಡ ವಾಚಿಸಿದರು. ಕಾರ್ಯಕ್ರಮ ಸಂಯೋಜಕ ರಾಕೇಶ್ ಕುಮಾರ್ ಮೂಡುಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವವಾಹಿನಿ ವಲಯ ಕಾರ್ಯದರ್ಶಿ ಸತೀಶ್ ಪಿ.ಎನ್. ವರದಿ ವಾಚಿಸಿ ವಂದಿಸಿದರು. ಮೂಡುಕೋಡಿ ಯುವವಾಹಿನಿ ಅಧ್ಯಕ್ಷ ಅರುಣ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಮೂಡುಕೋಡಿ ಯುವವಾಹಿನಿ ಪ್ರ. ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು, ಸಂಘಟನಾ ಕಾರ್ಯದರ್ಶಿ ಹರೀಶ್ ಪಿ.ಎಸ್. ಹಾಗೂ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.