Advertisement

Hindus ತೆರಿಗೆ ಹಣ ಹಿಂದೂಗಳಿಗೆ ಹಂಚಿ: ಶಾಸಕ ಹರೀಶ್‌ ಪೂಂಜರ ಹೇಳಿಕೆ ವೈರಲ್‌

11:21 PM Feb 09, 2024 | Team Udayavani |

ಬೆಳ್ತಂಗಡಿ: ರಾಜ್ಯದಲ್ಲಿ ತೆರಿಗೆ ಹಂಚಿಕೆ ವಿಚಾರ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಶಾಸಕ ಹರೀಶ್‌ ಪೂಂಜ ಅವರು ಫೇಸ್‌ ಬುಕ್‌ ಹಾಗೂ ಟ್ವಿಟರ್‌ನಲ್ಲಿ ತೆರಿಗೆಯ ಬಗೆಗಿನ ಪೋಸ್ಟ್ ಒಂದು ಎಲ್ಲೆಡೆ ಸಂಚಲನ ಮೂಡಿಸಿದೆ.

Advertisement

ಕೇಂದ್ರ ಸರಕಾರವು ತೆರಿಗೆ ಹಂಚಿಕೆ ವಿಚಾರವಾಗಿ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಸರಕಾರ ಗಂಭೀರವಾಗಿ ಆರೋಪ ಮಾಡುತ್ತಿದೆ. ಆದರೆ ಬಿಜೆಪಿ ನಾಯಕರು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಹರೀಶ್‌ ಪೂಂಜ ಅವರು ತೆರಿಗೆ ವಿಚಾರವಾಗಿ “ನನ್ನ ತೆರಿಗೆ ನನ್ನ ಹಕ್ಕು ಆಂದೋಲನದ ಹಿನ್ನೆಲೆಯಲ್ಲಿ ಅವರು “ಈ ಆರ್ಥಿಕ ವರ್ಷದಿಂದ ಹಿಂದೂಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ವಿನಿಯೋಗವಾಗಬೇಕು. ಹಿಂದೂಗಳು ಕಟ್ಟಿದ ತೆರಿಗೆ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ, ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು’ ಎಂದು ಬರೆದಿದ್ದಾರೆ. ಫೇಸ್‌ ಬುಕ್‌ ನಲ್ಲಿ ಹಲವರು ಇದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು ಇಷ್ಟಕ್ಕೆ ಸುಮ್ಮನಾಗದೆ ಮುಂದುವರಿದು ಮತ್ತೊಂದು ಪೋಸ್ಟ್ ಹಾಕಿದ್ದು, ದೇಶದಲ್ಲಿರುವ ತೆರಿಗೆ ಸಂಗ್ರಹದಲ್ಲಿ ಹಿಂದೂಗಳ ಪಾಲೆಷ್ಟು ? ಇದರಲ್ಲಿ ಹಿಂದೂಗಳ ಅಭಿವೃದ್ಧಿಗೆ ಉಪಯೋಗ ವಾಗುತ್ತಿರುವುದು ಎಷ್ಟು? ಹಿಂದೂ ಗಳ ತೆರಿಗೆ ಹಿಂದೂಗಳಿಗೆ ಸಲ್ಲಬೇಕು’ ಎಂದು ಬರೆದಿದ್ದಾರೆ. ಈ ಮೂಲಕ ತೆರಿಗೆ ವಿಚಾರದ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next