ಚನ್ನರಾಯಪಟ್ಟಣ: ಜನಪ್ರತಿನಿಧಿಗೆ ಹಾಗೂ ರಾಜರಿಗೆ ಅವರ ಕ್ಷೇತ್ರದಲ್ಲಿ ಮಾತ್ರ ಮನ್ನಣೆ ನೀಡಲಾಗುತ್ತದೆ. ಅದೇ ಜ್ಞಾನ ಪಡೆದು ವಿದ್ವಾಂಸರಾದರೆ ವಿಶ್ವದೆಲ್ಲೆಡೆ ಮನ್ನಣೆ ದೊರೆ ಯಲಿದೆ ಎಂದು ಸಾಹಿತಿ ಡಾ.ಸೀ.ಚ.ಯತೀಶ್ವರ್ ತಿಳಿಸಿದರು.
ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತಿ ಬೆಳಗುಲಿ ಕೆಂಪಯ್ಯ ಅವರ ತಲೆಮಾರಿನ ಮನೋರಥ ಕವನ ಸಂಕಲನ ಲೋಕಾ ರ್ಪಣೆ ಮಾಡಿ ಮಾತ ನಾಡಿದರು. ಗುಣವಿಲ್ಲದ ಸಿರಿವಂತರಿಗೆ ಹಣ ಇರುವವರೆಗೆ ಮಾತ್ರ ಬೆಲೆ ಕೊಡುತ್ತಾರೆ. ಗುಣ ವಂತನಿಗೆ ಹಾಗೂ ಅಕ್ಷರ ಜ್ಞಾನ ಹೊಂದಿರುವ ವ್ಯಕ್ತಿ ಅವನ ನಡೆವಳಿಕೆಗೆ ಗೌರವ ನೀಡಲಾಗು ತ್ತದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಹಣದ ಹಿಂದೆ ಓಡದೆ ಗುಣದ ಹಿಂದೆ ಹೆಜ್ಜೆ ಹಾಕುವುದು ಒಳಿತು ಎಂದರು.
ಬಹು ಮಾಧ್ಯಮಗಳ ಹಾವಳಿಯಿಂದ ಸಾಹಿತ್ಯ ಮರೆಯಾಗುತ್ತಿದೆ. ಇದೇ ಹಾದಿಯಲ್ಲಿ ನಡೆದರೆಮುಂದೆ ಸಾಹಿತ್ಯ ರಚನೆ ಮಾಡು ವವರೂ ಇಲ್ಲವಾಗುತ್ತಾರೆಂದರು. ಜನಪ್ರತಿನಿಧಿಗಳು ರಸ್ತೆ, ಕಟ್ಟಡಗಳಿಗೆ ಅನು ದಾನ ಬಳಕೆ ಮಾಡುತ್ತಾರೆ. ಇದರಿಂದ ಅವರು ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ರಾಜಕಾರಣಿ ತಮ್ಮ ಗ್ರಾಮದಲ್ಲಿ ಗ್ರಂಥಾಲಯ ತೆರೆಯಲು ಮುಂದಾಗುವುದಿಲ್ಲ. ಈ ಬಗ್ಗೆ ಆಲೋಚನೆ ಮಾಡುವುದೂ ಇಲ್ಲ, ಇದನ್ನು ಪ್ರಶ್ನಿಸಬೇಕಿರುವ ಸಮಾಜ ಕೂಡ ಕಣ್ಣು ಮುಚ್ಚಿ ಕೂತಿದೆ ಎಂದರು.
ಇದನ್ನೂ ಓದಿ:ಸಾಲು, ಸಾಲು ಸಾವು! ನೋವಿನ ಬದುಕಿನ ನಡುವೆ ಕನಸೆಂಬ ಕುದುರೆಯೇರಿ ಯಶಸ್ಸು ಕಂಡ “ಬಿರದಾರ”
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಪರಿಷತ್ ತೆರೆದು ರಾಜ್ಯದಲ್ಲಿ ಸಾಹಿತ್ಯ ಚಟುವಟಿಕೆಯನ್ನು ಮಕ್ಕಳಿಂದ ಮಾಡಿಸ ಲಾ ಗುತ್ತಿದೆ ಎಂದು ತಿಳಿಸಿದರು. ಸಾಹಿತಿ ಬೆಳ ಗುಲಿ ಕೆಂಪಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲೋಕೇಶ್, ದಲಿತ ಮುಖಂ ಡರಾದ ಮಂಜಣ್ಣ, ದಾಸಯ್ಯ ಇದ್ದರು.