Advertisement
ಹೌಟ್ ಮಾಂಡೆ ಮಿಸಸ್ ಇಂಡಿಯಾ ವರ್ಡ್‌ವೈಡ್ ಸೌಂದರ್ಯ ಸ್ಪರ್ಧೆಯಲ್ಲಿ 15,000 ಸ್ಪರ್ಧಾಳುಗಳ ಜತೆ ಸ್ಪರ್ಧಿಯಾಗಿ ಫೈನಲಿಸ್ಟ್ ಆಗಿ ಹೊರಹೊಮ್ಮಿರುವುದು ಅವರ ಪರಿಶ್ರಮ ಹಾಗೂ ಅವರ ಜೀವನೋತ್ಸಾಹದಿಂದ. ತಮ್ಮ ಪುಟ್ಟ ಸಂಸಾರ, ಕೆಲಸದ ಜತೆಗೆ ಇದರ ಹಾದಿಗೆ ತನ್ನನ್ನು ತಾನು ತೂಕ ಇಳಿಸಿಕೊಳ್ಳುವುದರಿಂದ ಹಿಡಿದು ವೇದಿಕೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿರುವ ಪಯಣ ಮತ್ತೊಬ್ಬ ಮಹಿಳೆಗೂ ಮಾದರಿ.
ಪ್ರಪಂಚದಾದ್ಯಂತ ಇರುವ ವಿವಾಹಿತ ಮಹಿಳೆಯರಿಗಾಗಿ ಅವರ ಸ್ಫೂರ್ತಿಗಾಗಿ ತಾವೂ ಕೂಡ ಮಾನಸಿಕವಾಗಿ ಬಲಿಷ್ಠರು ಹಾಗೂ ಸುಂದರರು ಎಂಬುದನ್ನು ಅರಿತು ತನ್ಮೂಲಕ ಹಲವು ವಿವಾಹಿತ ಮಹಿಳೆಯರನ್ನೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರೇರೇಪಿಸುವ ದೃಷ್ಟಿಯಿಂದ ಸಕಾರಾತ್ಮಕವಾಗಿ ನಡೆಸುತ್ತಿರುವಂತಹ, ಹೆಣ್ಣಿಂದ ಹೆಣ್ಣಿಗಾಗಿ ನಡೆಸುತ್ತಿರುವ ಯೋಜನೆ. ತಮ್ಮ ಪ್ರತಿಭೆಯನ್ನು ಬೆಳಕಿಗೆ ತರಲು ಮತ್ತು ತಮ್ಮಲ್ಲಿರುವ ಸ್ಥಿರತೆ, ಸಮಗ್ರತೆಯನ್ನು ಹೆಚ್ಚಿಸುತ್ತಾ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅನುವು ಮಾಡಿಕೊಡುವ ವಿಶಿಷ್ಟವಾದ ಕೇಂದ್ರಿಯ ಮತ್ತು ಪ್ರಗತಿಪರ ವೇದಿಕೆಯನ್ನು ಒದಗಿಸುವ ಮೂಲಕ ಭಾರತದಲ್ಲಿ ಮಹಿಳೆಯರನ್ನು ಮುಖ್ಯ ಭೂಮಿಕೆಗೆ ತರಲು ಸಹಕಾರಿಯಾಗಿದೆ. ಇದರಿಂದ ಕೇವಲ ಮಹಿಳಾ ಸಶಕ್ತೀಕರಣವಲ್ಲದೆ, ತನ್ನೊಳಗಿನ ತನ್ನನ್ನು ಹುರಿದುಂಬಿಸಿ ಚೈತನ್ಯವನ್ನು ಪ್ರೇರೇಪಿಸಿ ಮನೆ ಮತ್ತು ಮನಸ್ಸನ್ನು ಬೆಳಗಿಸಿಕೊಳ್ಳಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪಥದಲ್ಲಿ ಸಾಗುತ್ತಾ ಸೌಂದರ್ಯ ಸ್ಪರ್ಧೆಗಳ ಜಗತ್ತನ್ನು ಬದಲಾಯಿಸುವ ಗುರಿಯೆಡೆಗೆ ಕಾರ್ಯ ಪ್ರವೃತ್ತವಾಗುವ ಕಾರ್ಯಕ್ರಮ.
Related Articles
Advertisement
2008ರಲ್ಲಿ ‘ಮಿಸ್ ನಾರ್ತ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯೊಂದಿಗೆ ಆರಂಭಿಸಿ ಮುಂದೆ ಭರತ್ ಅವರ ನಿರ್ದೇಶನದಲ್ಲಿ ಮತ್ತಷ್ಟೂ ಸ್ಪರ್ಧೆಯನ್ನು ವಿಸ್ತರಿಸಿತು. “Mr. India Worldwide, “Mrs., “Mrs. India Worldwide” ನಂತಹ ಸ್ಪರ್ಧೆಗಳು ಉತ್ತಮ ಸೌಂದರ್ಯ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿದೆ. ಭರತ್‌ರವರ ಉತ್ಸಾಹದ ಸಂಧಿ ಮ್ಯಾಗಜಿನ್ ವಲಯಕ್ಕೂ ವಿಸ್ತರಿಸಿ ಮುದ್ರಣ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮದಲ್ಲಿ Haut. Monde ಫ್ಯಾಷನ್ ಮ್ಯಾಗಜೀನ್‌ಗಳು ಹೊರಬಂದಿವೆ.
ಶಾಂತಿ ಸಜಲ್ ರಿಸರ್ಚ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ :2021, ಜುಲೈ 5ರಂದು ಸ್ಥಾಪಿತವಾದ ಶಾಂತಿ ಸಜಲ್ ರಿಸರ್ಚ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಾವಾಡ ಜಿಲ್ಲೆಯ ಏರೂರಿ ಗ್ರಾಮದಲ್ಲಿ ವಾಸಿಸುವ ಸಮುದಾಯದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಪ್ರೇರಕಶಕ್ತಿಯಾಗಿದೆ. ಇದರ ಸಂಸ್ಥಾಪಕರಾದ ಭರತ್‌ರವರು ಪ್ರಾರಂಭಿಕವಾಗಿ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ಅವಕಾಶಗಳು ಎಂತಹ ಪರಿಸ್ಥಿತಿಯಲ್ಲೂ ಸಮಾನವಾಗಿ ಒದಗಬೇಕೆಂಬ ದೃಷ್ಟಿಯೊಂದಿಗೆ ಕಾರ್ಯಪ್ರವೃತ್ತರಾದರು. ಈ ಮೂಲಕ ಸಮುದಾಯಗಳನ್ನು ಸಶಕ್ತೀಕರಣಗೊಳಿಸುವ ಮತ್ತು ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಮುಂದುವರೆದಿದೆ. ಮಾನವೀಯತೆಯ ಬದ್ಧತೆಯೊಂದಿಗೆ ಗ್ರಾಮೀಣ ಭಾಗಗಳಲ್ಲಿ ಆವಶ್ಯಕವಿರುವ ಸಂಪನ್ಮೂಲಗಳು ದೊರೆಯುವ ಮತ್ತು ಕಡೆಗಣಿಸಲ್ಪಟ್ಟವರ ಜೀವನವನ್ನು ಉನ್ನತೀಕರಿಸುವ ಮತ್ತು ಸಶಕ್ತಗೊಳಿಸುವ ಧ್ಯೇಯದೊಂದಿಗೆ ಹೌಟ್ ಮಾಂಡೆ ಇಂಡಿಯಾ ಗ್ರೂಪ್‌ನ ಅಧ್ಯಕ್ಷರೂ ಮತ್ತು ಸ್ಪರ್ಧಿಗಳೂ ಇದರ ಭಾಗವಾಗಿ ಸಹಾಯಹಸ್ತ ನೀಡಿ, ಆವಶ್ಯಕತೆಯಿರುವವರಿಗೆ ಭರವಸೆಯ ದಾರಿದೀಪವಾಗುವ ಮಹದುದ್ದೇಶ ಹೊಂದಿದ್ದಾರೆ.