Advertisement

Ganesha ವಿಸರ್ಜನೆ: ಹಿಂದೂ ಯುವಕರ ಮೇಲಿನ ಕೇಸ್ ಕೈ ಬಿಡುವಂತೆ ಸಂಸದ ಕರಡಿ ಸಂಗಣ್ಣ ಆಗ್ರಹ

07:50 PM Oct 07, 2023 | Team Udayavani |

ಗಂಗಾವತಿ: ಗಣೇಶನ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಹಿಂದೂ ಮಹಾಮಂಡಳಿಯ ಐವರು ಕಾರ್ಯಕರ್ತರ ಮೇಲೆ ಕಾಣದ ಕೈಗಳ ಒತ್ತಡ ಮಣಿದು ಕೇಸ್ ದಾಖಲಿಸಿದ್ದಾರೆ. ಕೂಡಲೇ ಕೇಸ್ ವಾಪಸ್ ಪಡೆಯುವಂತೆ ಸಂಸದ ಕರಡಿ ಸಂಗಣ್ಣ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Advertisement

ಅವರು ಶನಿವಾರ ಕೇಸ್ ದಾಖಲಾಗಿರುವ ಹಿಂದೂ ಕಾರ್ಯಕರ್ತರ ಮನೆ ತೆರಳಿ ಕುಟುಂಬದವರಿಗೆ ಧೈರ್ಯ ತುಂಬಿ ಮಾತನಾಡಿದರು.

ಘಟನೆ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದ್ದು, ತಕ್ಷಣ ಈ ಪ್ರಕರಣವನ್ನು ಹಿಂದಕ್ಕೆ ಪಡೆಯುಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಡಿವೈಎಸ್‌ಪಿ ಅವರಿಗೆ ಒತ್ತಾಯಿಸಲಾಗುತ್ತದೆ. ಗಂಗಾವತಿಯಲ್ಲಿ ಅನವಶ್ಯಕವಾಗಿ ಈ ರೀತಿ ಪ್ರಕರಣ ದಾಖಲು ಮಾಡಿ ಭಯ, ಭೀತಿ ಸೃಷ್ಟಿ ಮಾಡಬಾರದು ಎಂದು ಸರಕಾರದ ಗಮನಕ್ಕೂ ತರಲಾಗುವುದು ಎಂದರು.

ಗಂಗಾವತಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸುತ್ತಾ ಬರಲಾಗುತ್ತಿದೆ. ಪ್ರತಿ ವರ್ಷವು ಗಣೇಶ ಮೆರವಣಿಗೆಯಲ್ಲಿ ಆರತಿ ಮಾಡಿ ವಿವಿಧ ರೀತಿಯಲ್ಲಿ ನೃತ್ಯ ಮಾಡುವುದು ವಾಡಿಕೆಯಾಗಿದೆ. ಆದರೆ ಇಷ್ಟು ವರ್ಷ ಯಾವುದೇ ಪ್ರಕರಣ ದಾಖಲಿಸದ ಪೊಲೀಸರು ಈ ವರ್ಷ ಹಿಂದು ಸಂಘಟನೆ ಐದು ಜನ ಕಾರ್ಯಕರ್ತರು ಮತ್ತು ಗಣೇಶ ಸಮಿತಿಯ ಒಂಬತ್ತು ಯುವಕರ ವಿರುದ್ಧ ಪ್ರಚೋದನಕಾರಿ ಘಟನೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ತಕ್ಷಣ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಮುಂದೆ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸೂಕ್ತ ಬಂದೋಬಸ್ತ್ ನೀಡಿ ಸುಸೂತ್ರವಾಗಿ ಮೆರವಣಿಗೆ ನಡೆಸಲು ಪೊಲೀಸರು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ ವಕೀಲರು,ˌ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಶಿವು ಹರಿಕೇರಿˌ ಮಹಾಲಿಂಗಪ್ಪˌ ಹಿಂದು ಮುಖಂಡರಾದˌಅಯ್ಶನಗೌಡ ˌ ನೀಲಕಂಕ ನಾಗಶೆಟ್ಟಿˌ ಶ್ರೀಕಾಂತ ಹೊಸ್ಕೇರಿˌˌಹೆಚ್. ಬಸಣ್ಣˌಡಾ. ಜೀಡಿˌ ವೆಂಕಟೇಶ .ಕೆ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next