Advertisement

ಒಡಕಿನ ಮಾತಿನಿಂದ ಒಗ್ಗಟ್ಟಿಗೆ ಧಕ್ಕೆ: ಪಾಳಾ ಶ್ರೀ

08:49 AM Jul 26, 2017 | Team Udayavani |

ವಾಡಿ: ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಎನ್ನುವ ಚರ್ಚೆ ರಾಜ್ಯದಲ್ಲಿ ಬಿರುಸಿನಿಂದ ನಡೆದಿದೆ.ಲಿಂಗಾಯತ-ವೀರಶೈವ ಲಿಂಗಾಯತ ಎರಡೂ ಒಂದೇ. ಇವುಗಳ ಮಧ್ಯೆ ಕಚ್ಚಾಟಕ್ಕೆ ಇಳಿಯುವುದರಲ್ಲಿ ಅರ್ಥವಿಲ್ಲ. ಇದರಿಂದ ಒಗ್ಗಟ್ಟಿಗೆ ಧಕ್ಕೆಯುಂಟಾಗುತ್ತಿದೆ ಎಂದು ಪಾಳಾ ಕಟ್ಟಿಮನಿ ಸಂಸ್ಥಾನದ ಪೂಜ್ಯ ಶ್ರೀಗುರುಮೂರ್ತಿ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಶ್ರಾವಣ ಮಾಸ ನಿಮಿತ್ತದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು. ನೀತಿ ಕಲಿಸಿಕೊಡುವ ಧರ್ಮದಲ್ಲಿ ಜಾತಿ ಜಗಳ ತಂದಿಟ್ಟು ಅಶಾಂತಿ ಸ್ಥಾಪಿಸುವ ಹುನ್ನಾರ ಕೆಲವರು ನಡೆಸುತ್ತಿದ್ದಾರೆ. ಒಡಕು ಮೂಡಿಸುವ ಇಂತಹ ಚರ್ಚೆಗಳಿಗೆ ಹೆಚ್ಚು ಮಹತ್ವ ನೀಡಬಾರದು. ಧರ್ಮ ಕಾಯಕದಲ್ಲಿ ತೊಡಗುವ ಮೂಲಕ ಶಿವನ ಆರಾಧನೆಗೆ ಸಮಯ ಮೀಸಲಿಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ವೀರಶೈವ ಸಮಾಜದ ಅಧ್ಯಕ್ಷ ಸಿದ್ಧಣ್ಣ ಕಲಶೆಟ್ಟಿ, ಪ್ರತಿ ಸೋಮವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಶ್ರಾವಣ ಮಾಸ ಆಚರಿಸಲಾಗುತ್ತಿದೆ. ಅಲ್ಲದೆ ಪ್ರತಿ ಸೋಮವಾರ ಒಬ್ಬೊಬ್ಬ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ
ನೀಡಲಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಲ್ಯಾಣರಾವ ಶೆಳ್ಳಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಸಮಾಜದ ಹಿರಿಯರಾದ ಮಲ್ಲಣ್ಣಗೌಡ ಗೌಡಪನೋರ, ಶರಣಗೌಡ ಚಾಮನೂರ, ಶಾಂತಪ್ಪ ಬಣಮಗಿ, ಅಣ್ಣಾರಾವ್‌ ಪಸಾರೆ, ಈರಣ್ಣ ಪಂಚಾಳ, ಕಾಶೀನಾಥ ಶೆಟಗಾರ, ನಿಂಗಣ್ಣ ದೊಡ್ಡಮನಿ, ದಾನಪ್ಪ ಕಲಶೆಟ್ಟಿ, ರಾಜಶೇಖರ ದೂಪದ, ಮಹಾಲಿಂಗ ಶೆಳ್ಳಗಿ, ಅರೂಣಕುಮರ ಪಾಟೀಲ, ಮಹಾಂತಗೌಡ, ನಾಗರಾಜ ಗೌಡಪನೋರ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ದೇವಸ್ಥಾನದೊಳಗಿನ ಶಿವಲಿಂಗಕ್ಕೆ ಕ್ಷೀರಾಭಿಷೇಕ ನಡೆಸಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನ ಭಕ್ತರು, ಭಕ್ತಿಯಿಂದ ದೇವಸ್ಥಾನ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಡೊಳ್ಳು ಹಾಗೂ ತಾಳ ಮೇಳಗಳ ಸಂಗೀತ ಶ್ರಾವಣ ಆರಂಭೋತ್ಸವಕ್ಕೆ ಮೆರಗು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next